ಉಡುಪಿ: ಜಿಲ್ಲೆಯ ಐದೂ ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದೆ. ಕಳೆದ ವರ್ಷದಿಂದ ಸಂಘಟನಾತ್ಮಕ ರೀತಿಯಲ್ಲಿ ವಿವಿಧ ಹಂತಗಳಲ್ಲಿ ಚುನಾವಣಾ ಪೂರ್ವ ತಯಾರಿ ಸಾಗಿ ಬಂದಿದೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರಕ್ಕಾಗಿ ಮೋದಿ ಅವರು ಮೇ 1ರಂದು ಉಡುಪಿಗೆ ಆಗಮಿಸ ಲಿರುವುದು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಈ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ ಮತ್ತು ಎಲ್ಲ ಮಂಡಲ ಕೇಂದ್ರಗಳು ಸಕ್ರಿಯವಾಗಿ ಜವಾಬಾœರಿ ನಿರ್ವಹಿಸುತ್ತಿದ್ದು, ಕಾರ್ಯಕರ್ತರು ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದೆಲ್ಲೆಡೆ ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿರುವ ಈ ಚುನಾವಣೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲೂ ಬಿಜೆಪಿಯೇ ಜಯಗಳಿಸಲಿದೆ ಎಂದರು.
Related Articles
ಉಡುಪಿ: ಜಿಲ್ಲೆಯ ಎಲ್ಲ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದರು.
Advertisement
ಬ್ರಹ್ಮಗಿರಿಯಲ್ಲಿನ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತುಗಳನ್ನಾಡಿದ ಅವರು, ಕಳೆದ ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸುವಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಸಂಪೂರ್ಣ ತೊಡಗಿಸಿ ಕೊಂಡಿರುವುದೇ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರುವುದಕ್ಕೆ ಕಾರಣ ಎಂದರು.
ಆಸ್ಕರ್ ಅವರು ಹಿಂದುಳಿದ ಘಟಕ, ಯುವ ಕಾಂಗ್ರೆಸ್, ವಿದ್ಯಾರ್ಥಿ ಘಟಕ (ಎನ್‌ಎಸ್‌ಯುಐ), ಸೇವಾದಳ, ಮಹಿಳಾ ಘಟಕ, ಅಲ್ಪಸಂಖ್ಯಾಕ ಘಟಕ, ಎಸ್‌ಸಿ/ಎಸ್‌ಟಿ ಘಟಕ, ಕಿಸಾನ್ ಘಟಕ, ಐಟಿ ಸೆಲ್‌ಗಳನ್ನು ರಚಿಸಿ ಅವರಿಗೆ ಮಾರ್ಗದರ್ಶನದೊಂದಿಗೆ ವಿವಿಧ ಘಟಕಗಳ ಸಮಾವೇಶಗಳು ಜಿಲ್ಲೆಯಲ್ಲಿ ನಡೆಸಿ ಪಕ್ಷ ಸದೃಢವಾಗಲು ಕಾರಣವಾಗಿದ್ದಾರೆ ಎಂದರು.ಪ್ರಚಾರ ಸಮಿತಿಯ ಉಪಾಧ್ಯಕ್ಷ ಬಿ. ಕೃಷ್ಣಮೂರ್ತಿ, ಪ್ರಚಾರ ಸಮಿತಿಯ ಬ್ಲಾಕ್ ಅಧ್ಯಕ್ಷರಾದ ಜನಾರ್ದನ ಭಂಡಾರ್ಕಾರ್ ಉಡುಪಿ, ಡಾ| ಸುನಿತಾ ಶೆಟ್ಟಿ ಬ್ರಹ್ಮಾವರ, ಜಾಕೋಬ್ ಡಿ’ಸೋಜಾ ಕುಂದಾಪುರ, ತಿಮ್ಮ ಪೂಜಾರಿ ಕೋಟ, ದಿನೇಶ್ ಕೋಟ್ಯಾನ್ ಕಾಪು ದಕ್ಷಿಣ, ಲಕ್ಷಿ¾àನಾರಾಯಣ ಪ್ರಭು ಕಾಪು ಉತ್ತರ, ಮಂಜುನಾಥ ಪೂಜಾರಿ ಹೆಬ್ರಿ, ಸುಬೋದ್ ಶೆಟ್ಟಿ ಕಾರ್ಕಳ, ಪ್ರದೀಪ್ ಕುಮಾರ್ ಶೆಟ್ಟಿ ವಂಡ್ಸೆ, ಪ್ರಕಾಶ್ಚಂದ್ರ ಶೆಟ್ಟಿ ಬೈಂದೂರು, ವಿಕಾಸ್ ಹೆಗ್ಡೆ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಪ್ರ.ಕಾರ್ಯದರ್ಶಿ ರಮೇಶ್ ಕಾಂಚನ್ ಅವರು ನಿರೂಪಿಸಿ, ವಂದಿಸಿದರು.