Advertisement

ಬಿಜೆಪಿಗೆ ಸೇರಿದ ಕೇರಳದ ಪಾದ್ರಿಗಳು

06:00 AM Sep 27, 2018 | |

ಕೊಟ್ಟಾಯಂ: ಕೇರಳದ ಎರಡು ಪ್ರಮುಖ ಸಿರಿಯನ್‌ ಚರ್ಚ್‌ನ ಪಾದ್ರಿಗಳು ಹಾಗೂ ಅಧಿಕಾರಿಗಳು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದು 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಮಹತ್ವದ ಪ್ರಭಾವ ಉಂಟು ಮಾಡಲಿದೆ ಎನ್ನಲಾಗಿದೆ. ಪಾಲ ಚರ್ಚ್‌ನ ಫಾದರ್‌ ಗೀವರ್ಗೀಸ್‌ ಥಾಮಸ್‌ ಕಿಳಕ್ಕೇಡಂ ಮತ್ತು ಆಂಡ್ರೂéಸ್‌ ಮಂಗಲತ್‌ ಹಾಗೂ ಥಾಮಸ್‌ ಕುಲತುಮ್‌ಕಲ್‌ ಬಿಜೆಪಿ ಸೇರಿದ್ದಾರೆ. ತಮ್ಮ ಸಮುದಾಯದ ಇನ್ನಷ್ಟು ಜನರು ಬಿಜೆಪಿ ಸೇರಲು ಬಯಸಿದ್ದಾರೆ ಎಂದು ಕಿಳಕ್ಕೇಡಂ ಹೇಳಿದ್ದಾರೆ. ಕೇರಳ ರಾಜ್ಯ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೆ„ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

ಬಿಜೆಪಿ ಕೋಮುವಾದಿ ಪಕ್ಷವಲ್ಲ. ಹೀಗೆಂದು ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್‌ ಆರೋಪಿಸುತ್ತಿದೆಯಷ್ಟೇ. ಸಮಾಜದ ಎಲ್ಲ ಜನರನ್ನೂ ಪ್ರತಿನಿಧಿಸುವ ಪಕ್ಷ ಎಂದು ನನಗೆ ಮನವರಿಕೆಯಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಡವರ ಪರ ಶ್ರಮಿಸುತ್ತಿದೆ. ಸಮಾಜದ ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಇದು ಪೂರೈಸುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಕಿಳಕ್ಕೇಡಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next