Advertisement

ಕೇಂದ್ರದಿಂದ ಭರ್ಜರಿ ರಿಲೀಫ್; ವಾರ್ಷಿಕ 40 ಲಕ್ಷ ವಹಿವಾಟಿಗೆ ಜಿಎಸ್ ಟಿ ವಿನಾಯ್ತಿ

04:22 PM Aug 25, 2020 | Nagendra Trasi |

ನವದೆಹಲಿ:ಕೋವಿಡ್ 19 ಸೋಂಕಿನಿಂದಾಗಿ ದೇಶದಲ್ಲಿನ ಆರ್ಥಿಕ ವಹಿವಾಟು, ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ದೊಡ್ಡ ಮಟ್ಟದ ರಿಲೀಫ್ ನೀಡುವ ಘೋಷಣೆಯನ್ನು ಹೊರಹಾಕಿದೆ.

Advertisement

ವಾರ್ಷಿಕ 40 ಲಕ್ಷ ರೂಪಾಯಿ ವರೆಗೆ ವ್ಯಾಪಾರ, ವಹಿವಾಟು ಹೊಂದಿರುವ ಉದ್ಯಮಿಗಳಿಗೆ/ವ್ಯಾಪಾರಸ್ಥರಿಗೆ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ವಿನಾಯ್ತಿ ನೀಡಿರುವುದಾಗಿ ಸೋಮವಾರ ಘೋಷಿಸಿದೆ.

ಅಲ್ಲದೇ ವಾರ್ಷಿಕ ವಹಿವಾಟು ಅಂದಾಜು 1. 5ಕೋಟಿ ರೂಪಾಯಿವರೆಗೆ ಇದ್ದಲ್ಲಿ ಈ ಯೋಜನೆಯಡಿ ಕೇವಲ ಶೇ.1ರಷ್ಟು ತೆರಿಗೆ ಪಾವತಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸುವ ಮೂಲಕ ಉದ್ಯಮಿಗಳು, ವ್ಯಾಪಾರಸ್ಥರಿಗೆ ಬೆಂಬಲ ನೀಡಿದೆ ಎಂದು ವರದಿ ತಿಳಿಸಿದೆ.

ಜಿಎಸ್ ಟಿ (ಸರಕು ಮತ್ತು ಸೇವಾತೆರಿಗೆ)ಯನ್ನು ದೇಶಾದ್ಯಂತ ಜಾರಿಗೊಳಿಸಲು ಆರಂಭಿಸಿದಂದಿನಿಂದ ಹಣಕಾಸು ಸಚಿವಾಲಯ ಸರಣಿ ಟ್ವೀಟ್ ಗಳು ಮೂಲಕ ಈ ಹೊಸ ಘೋಷಣೆಯನ್ನು ಮಾಡುತ್ತಿತ್ತು.  ಈಗಾಗಲೇ ಹಲವು ವಿನಾಯ್ತಿಯನ್ನು ಕೇಂದ್ರ ಘೋಷಿಸಿದೆ.

ಅತ್ಯಧಿಕ ಶೇ,28ರಷ್ಟು ತೆರಿಗೆ ದರವನ್ನು ಕೇವಲ ಐಶಾರಾಮಿ ವಸ್ತುಗಳ ಮೇಲೆ ಉಳಿಸಿಕೊಳ್ಳಲಾಗಿದ್ದು, ಶೇ.28ರಷ್ಟು ತೆರಿಗೆ ಇದ್ದ 230 ವಸ್ತುಗಳ ಪೈಕಿ 200 ವಸ್ತುಗಳನ್ನು ಕೆಳಗಿನ ಸ್ತರಕ್ಕೆ ಇಳಿಸಲಾಗಿದೆ.

Advertisement

ಜಿಎಸ್ ಟಿ ದೇಶದಲ್ಲಿ ಜಾರಿಯಾದ ಮೇಲೆ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ. ಜಿಎಸ್ ಟಿ ಆರಂಭವಾದ ಸಂದರ್ಭದಲ್ಲಿ ಮೂಲ ತೆರಿಗೆದಾರರ ಸಂಖ್ಯೆ 65 ಲಕ್ಷದಷ್ಟಿತ್ತು, ಆದರೆ ಈಗ ಅವರ ಸಂಖ್ಯೆ 1.28 ಕೋಟಿಗೆ ಏರಿದೆ. ಜಿಎಸ್ ಟಿ ಎಲ್ಲಾ ಪ್ರಕ್ರಿಯೆ ಸ್ವಯಂಚಾಲಿತವಾಗಿದೆ ಎಂದು ವಿತ್ತ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next