ರಿಯಾದ್: ಸಂಪ್ರದಾಯವಾದಿ ರಾಷ್ಟ್ರವಾದ ಸೌದಿ ಅರೇಬಿಯಾ ಕೂಡ ಪ್ರವಾಸಿಗರ ಮೆಚ್ಚಿನ ತಾಣವಾಗುವ ಕಾಲ ಸನ್ನಿಹಿತವಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರವಾಸಿ ವೀಸಾ ವಿತರಿಸುವ ಘೋಷಣೆಯನ್ನು ಶುಕ್ರ ವಾರ ಸೌದಿ ಸರಕಾರ ಮಾಡಿದೆ.
ತೈಲ ಸಮೃದ್ಧ ರಾಷ್ಟ್ರವು ಈಗ ತೈಲೋತ್ತರ ಯುಗವನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸು ತ್ತಿದ್ದು, ಅದರ ಭಾಗವಾಗಿಯೇ ಈ ಘೋಷಣೆ ಮಾಡಲಾಗಿದೆ. ಪ್ರಮುಖ ಸಂಪನ್ಮೂಲವಾಗಿರುವ ತೈಲವು ಖಾಲಿಯಾದರೆ ಮುಂದೇನು ಎಂಬ ಪ್ರಶ್ನೆಗೆ ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು “ಪ್ರವಾಸ’ದ ಮೂಲಕ ಆದಾಯದ ಉತ್ತರ ಕಂಡುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಸೌದಿ ಅರೇಬಿಯಾವನ್ನು ಮುಕ್ತವಾಗಿಸುವುದು ನಮ್ಮ ದೇಶದ “ಐತಿಹಾಸಿಕ ಕ್ಷಣ’ ಎಂದು ಶುಕ್ರವಾರ ಪ್ರವಾಸೋದ್ಯಮ ಮುಖ್ಯಸ್ಥ ಅಹ್ಮದ್ ಅಲ್-ಖತೀಬ್ ಘೋಷಿಸಿದ್ದಾರೆ.
ಅಬಯಾದಿಂದ ಮುಕ್ತಿ ಈವರೆಗೆ ಸೌದಿ ಅರೇಬಿಯಾಗೆ ತೆರಳುವವರು ಕಡ್ಡಾಯವಾಗಿ ಅಲ್ಲಿನ ಸಾಂಪ್ರದಾಯಿಕ ಉಡುಗೆಯಾದ ಅಬಯಾ(ಬುರ್ಖಾ ಮಾದರಿಯ ಉಡುಗೆ)ವನ್ನು ಧರಿಸಬೇಕಿತ್ತು. ಆದರೆ ಈಗ ಈ ನಿಯಮವನ್ನು ಸಡಿ ಲಿಸಲಾಗಿದ್ದು, ಪ್ರವಾಸಿ ವೀಸಾ ದಲ್ಲಿ ಬರುವ ವಿದೇಶಿಯರಿಗೆ ಕಡ್ಡಾಯ ಅಬಯಾದಿಂದ ಮುಕ್ತಿ ನೀಡ ಲಾಗಿದೆ. ಆದರೆ ಸಭ್ಯ ಉಡುಗೆ ಧರಿಸುವಂತೆ ಷರತ್ತು ವಿಧಿಸಲಾಗಿದೆ.