Advertisement

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

09:39 PM Dec 28, 2024 | Team Udayavani |

ನವದೆಹಲಿ: ಇದೇ ಮೊದಲ ಬಾರಿಗೆ ಅಮೆರಿಕ ನಿರ್ಮಿತ ಕ್ಷಿಪಣಿ ನಿಗ್ರಹ ವ್ಯವಸ್ಥೆಯನ್ನು ಹೌತಿ ಉಗ್ರರ ದಾಳಿ ತಡೆಯಲು ಇಸ್ರೇಲ್‌ ಬಳಕೆ ಮಾಡಿದೆ.

Advertisement

“ಥಾಡ್‌’ ಕ್ಷಿಪಣಿ ನಿಯಂತ್ರಕ ವ್ಯವಸ್ಥೆಯನ್ನು ಈ ವರ್ಷ ಅಕ್ಟೋಬರ್‌ನಲ್ಲಿ ಅಮೆರಿಕ ಇಸ್ರೇಲ್‌ಗೆ ನೀಡಿತ್ತು. ಇದರ ಬಳಕೆ ಬಗ್ಗೆ ಇಸ್ರೇಲ್‌ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಭೂಮಿಯ ವಾತಾವರಣದ ಒಳಗಿನಿಂದ ಹಾಗೂ ಹೊರಗಿನಿಂದ ಬರುವ 2 ರೀತಿಯ ಕ್ಷಿಪಣಿಗಳನ್ನು ತಡೆಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ವ್ಯವಸ್ಥೆಯನ್ನು ಟ್ರಕ್‌ ಮೇಲೆ ಅಳವಡಿಸಬಹುದಾಗಿದ್ದು, 870ರಿಂದ 3000 ಕಿ.ಮೀ.ವರೆಗಿನ ಕ್ಷಿಪಣಿಗಳನ್ನು ನಾಶ ಪಡಿಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next