Advertisement

ಜಿಲ್ಲೆಯಲ್ಲಿ ಒಂದು ದಶಕದಲ್ಲಿ ಜನಸಂಖ್ಯೆ ಕೇವಲ ಶೇ. 5.9 ಬೆಳವಣಿಗೆ!

09:08 PM Aug 14, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಜನಸಂಖ್ಯೆಯಲ್ಲಿ ಶೇ.5.9 ಮಾತ್ರ ಬೆಳವಣಿಗೆ ದಾಖಲಿಸಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಜಿಲ್ಲೆಯ ಜನಸಂಖ್ಯೆಯು ಶೇ. 1.93ರಷ್ಟಿದ್ದು, ಬೆಳವಣಿಗೆ ಪ್ರಮಾಣ ತೀವ್ರ ಇಳಿಕೆ ಕಂಡುಬಂದಿದೆ. 2011ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 11.77 ಲಕ್ಷ ಜನಸಂಖ್ಯೆ ಇದ್ದು, ಅವರಲ್ಲಿ ಪುರುಷರ ಸಂಖ್ಯೆ 5.26 ಲಕ್ಷ ಹಾಗೂ ಮಹಿಳೆಯರ ಸಂಖ್ಯೆ 6.15 ಲಕ್ಷ ಇದೆ. ಜಿಲ್ಲೆಯಲ್ಲಿ ಲಿಂಗಾನುಪಾತ 1000ಕ್ಕೆ 1094 ಇದ್ದು ರಾಜ್ಯದಲ್ಲೇ ಗರಿಷ್ಠ ಲಿಂಗಾನುಪಾತ ಹೊಂದಿದೆ. ರಾಜ್ಯದಲ್ಲಿ ಇದರ ಪ್ರಮಾಣವು 1000ಕ್ಕೆ 968 ಆಗಿದೆ. ಇದಕ್ಕೆ 0ರಿಂದ 6 ವರ್ಷಗಳ ಮಕ್ಕಳಲ್ಲಿ ಲಿಂಗಾನುಪಾತ ಪ್ರಮಾಣವು ಜಿಲ್ಲೆಯಲ್ಲಿ 968 ಆಗಿದೆ.

Advertisement

ಜಿಲ್ಲೆಯ ಒಟ್ಟು 11.77 ಲಕ್ಷ ಜನಸಂಖ್ಯೆ ಯಲ್ಲಿ 8.43 ಲಕ್ಷ ಜನಸಂಖ್ಯೆ ಗ್ರಾಮಾಂತರ ಪ್ರದೇಶದಲ್ಲೂ, 3.34 ಲಕ್ಷ ಜನಸಂಖ್ಯೆ ನಗರ ಪ್ರದೇಶದಲ್ಲಿದೆ. 1981ರಿಂದ 1991ರ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿ ಗೆಯ ಪ್ರಮಾಣ ಶೇ. 9.42ರಷ್ಟು ಹಾಗೂ 1991 ರಿಂದ 2001ರ ಅವಧಿಯಲ್ಲಿ ಶೇ. 7.14 ಬೆಳವಣಿಗೆ ದಾಖಲಾಗಿತ್ತು. ತಾಲೂಕುವಾರು ಜನಸಂಖ್ಯೆಗೆ ಹೋಲಿಸಿ ದಾಗ ಕುಂದಾಪುರ ಅತಿ ಹೆಚ್ಚಿನ ಜನಸಂಖ್ಯೆಯನ್ನು (2.62 ಲಕ್ಷ) ಹೊಂದಿದ್ದು ಹೆಬ್ರಿ ಅತಿ ಕಡಿಮೆ (47,000) ಜನಸಂಖ್ಯೆ ಹೊಂದಿದೆ.

ಗ್ರಾಮದಿಂದ ನಗರಕ್ಕೆ ವಲಸೆ
2001 ಮತ್ತು 2011 ರ ದಶಕದ ಅವಧಿಯಲ್ಲಿ ನಗರ ಪ್ರದೇಶದ ಜನಸಂಖ್ಯೆಶೇ. 10ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆ ಬರುತ್ತಿರು ವುದು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ 2.22 ಲಕ್ಷ ಪುರುಷರು ಹಾಗೂ 4.3 ಲಕ್ಷ ಮಹಿಳೆಯರು ಗ್ರಾಮೀಣ ಭಾಗದಲ್ಲಿ ಇದ್ದಾರೆ. 2001ರಲ್ಲಿ ಜಿಲ್ಲೆಯಲ್ಲಿ 7 ಜನಗಣತಿ ಪಟ್ಟಣಗಳಿದ್ದು 2011ರಲ್ಲಿ 24 ಜನಗಣತಿ ಪಟ್ಟಣಗಳಿಗೆ ಏರಿದ್ದು ಸಹ ಈ ಜನಸಂಖ್ಯೆ ವ್ಯತ್ಯಾಸಕ್ಕೆ ಕಾರಣವಾಗಿದೆ.

ಕಡಿಮೆ ಬೆಳವಣಿಗೆ
ರಾಜ್ಯದಲ್ಲಿ ಅತ್ಯಂತ ಕಡಿಮೆ ಪ್ರಮಾಣ ದಲ್ಲಿ ಜನಸಂಖ್ಯೆ ಬೆಳವಣಿಗೆಯಲ್ಲಿ ಚಿಕ್ಕಮಗಳೂರಿನಲ್ಲಿ ಶೇ. 0.26 ಪ್ರಥಮ, ಕೊಡಗು ಶೇ. 1.09 ದ್ವಿತೀಯ, ಹಾಸನ ಶೇ. 3.18 ತೃತೀಯ, ರಾಮನಗರದಲ್ಲಿ ಶೇ. 5.5 ನಾಲ್ಕನೇ, ಚಾಮರಾಜ ನಗರ ದಲ್ಲಿ ಶೇ. 5.73 ಐದು, ಉಡುಪಿ ಶೇ. 5.85ರಷ್ಟು ಏರಿಕೆಯಾಗುವ ಮೂಲಕ ಆರನೇ ಸ್ಥಾನ, ದ.ಕ. ಜಿಲ್ಲೆ ಶೇ. 10, ಬೆಂಗಳೂರು ಜಿಲ್ಲೆಯಲ್ಲಿ ಜನಸಂಖ್ಯೆ ಶೇ.47ರಷ್ಟು ಬೆಳವಣಿಗೆ ಯಾಗಿದೆ.

ಜನಸಂಖ್ಯೆ ಬೆಳವಣಿಗೆ ಕುಂಠಿತ ಕಾರಣ
ಜಿಲ್ಲೆಯಲ್ಲಿ ಜನಸಂಖ್ಯೆ ಬೆಳವಣಿ ಪ್ರಮಾಣ ಕುಂಠಿತವಾಗಲು ವಲಸೆ ಹೋಗುವುದು, ಪೋಷಕರು ಒಂದು ಮಗುವಿಗೆ ಸಾಕು ಎನ್ನುವ ಮನೋಭಾವನೆ, ಉದ್ಯೋಗಕ್ಕೆ ಮೊದಲ ಪ್ರಾಮುಖ್ಯ ನೀಡುತ್ತಿರುವುದು ಜನಸಂಖ್ಯೆ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ.
-ಡಾ| ರಾಮರಾವ್‌, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಉಡುಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next