ಸೂರತ್ : ಹಾಡಹಗಲೇ ಐವರು ದರೋಡೆಕೋರರು ಬ್ಯಾಂಕ್ ಒಂದನ್ನು ಲೂಟಿ ಮಾಡಿ 14 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಗುಜರಾತ್‌ನ ಸೂರತ್‌ನಲ್ಲಿ ಶುಕ್ರವಾರ ನಡೆದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಸೂರತ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂಡ ದುಷ್ಕರ್ಮಿಗಳ ತಂಡ ಶಸ್ತ್ರಾಸ್ತ್ರ ಝಳಪಿಸಿ ಬ್ಯಾಂಕ್ ಸಿಬ್ಬಂದಿಗಳನ್ನು ಹಾಗೂ ಗ್ರಾಹಕರನ್ನು ಬೆದರಿಸಿ ಕೊಠಡಿಯೊಳಗೆ ಕೂಡಿಹಾಕಿದ್ದರೆ. ಬಳಿಕ ಓರ್ವ ವ್ಯಕ್ತಿ ಲಾಕರ್ ನಲ್ಲಿದ್ದ ಹಣವನ್ನು ಬ್ಯಾಗ್ ನೊಳಗೆ ತುಂಬಿಸಿ ಬೈಕ್ ನೊಂದಿಗೆ ಪರಾರಿಯಾಗಿದ್ದಾರೆ.
ದರೋಡೆಕೋರರ ಕೃತ್ಯ ಅಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೂಡಲೇ ಬ್ಯಾಂಕ್ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ದೂರು ನೀಡಿದ ಕೂಡಲೇ ಎಚ್ಚೆತ್ತ ಪೊಲೀಸರು ನಗರದಾದ್ಯಂತ ನಾಖಾಬಂಧಿ ಹಾಕಿ ಆರೋಪಿಗಳ ಶೋಧ ನಡೆಸಿದ್ದಾರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಆದರದ ಮೇಲೆ ದರೋಡೆಕೋರರ ಶೋಧಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ: Sowjanya case ಮರು ತನಿಖೆಗೆ ಆಗ್ರಹಿಸಿ ಆ.27ರಂದು ಬಿಜೆಪಿ ಶಾಸಕರಿಂದ ಪ್ರತಿಭಟನೆ; ನಳಿನ್