Advertisement

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

09:12 PM Jun 19, 2021 | Team Udayavani |

ಪಾಟ್ನಾ: ಬಿಹಾರದ ಮಹಿಳೆಯೊಬ್ಬರಿಗೆ ಕೇವಲ ಐದು ನಿಮಿಷಗಳ ಅಂತರದಲ್ಲಿ ಕೊವ್ಯಾಕ್ಸಿನ್‌ ಹಾಗೂ ಕೊವಿಶೀಲ್ಡ್‌ ಲಸಿಕೆಗಳನ್ನು ಹಾಕಿರುವ ಅಚಾತುರ್ಯ ತಡವಾಗಿ ಬೆಳಕಿಗೆ ಬಂದಿದೆ.

Advertisement

ಪಾಟ್ನಾ ಗ್ರಾಮೀಣ ಜಿಲ್ಲೆಯ ಬೆಲ್ಡಾರಿಚಕ್‌ನ ಪನ್ಪುನ್‌ ಬ್ಲಾಕ್‌ನ ನಿವಾಸಿಯಾದ ಸುನಿಲಾ ದೇವಿ, ಜೂ. 16ರಂದು ತಮ್ಮ ಹಳ್ಳಿಯ ಲಸಿಕಾ ಕೇಂದ್ರಕ್ಕೆ ಲಸಿಕೆಗಾಗಿ ಹೋಗಿದ್ದರು. ಆಕೆಗೆ, ಕೋವಿಶೀಲ್ಡ್‌ ಲಸಿಕೆ ನೀಡಿ, ನಿಗಾ ಕೊಠಡಿಯಲ್ಲಿ ಕೂರಿಸಲಾಗಿತ್ತು.

ಅಲ್ಲಿದ್ದಾಗಲೇ ಶುಶ್ರೂಷಕಿಯೊಬ್ಬರು ಬಂದು, ಕೊವ್ಯಾಕ್ಸಿನ್‌ ಲಸಿಕೆ ನೀಡಿದ್ದಾರೆ. ತಾವೀಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾಗಿ ಹೇಳಿದರೂ ಆ ಶುಶ್ರೂಷಕಿ ಕೊವ್ಯಾಕ್ಸಿನ್‌ ಲಸಿಕೆ ನೀಡಿದ್ದಾರೆ. ಸುನಿಲಾಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೂ, ಲಸಿಕಾ ಕೇಂದ್ರದ ಸಿಬ್ಬಂದಿಗೆ ಜಿಲ್ಲಾ ವೈದ್ಯಾಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

ಇದನ್ನೂ ಓದಿ :2022ಕ್ಕೆ ಎಲ್ಲಾ ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ : ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next