Advertisement

ಆ.14ಕ್ಕೆ ಇಮ್ರಾನ್‌ ಪ್ರಮಾಣ?

09:45 AM Jul 30, 2018 | Karthik A |

ಇಸ್ಲಾಮಾಬಾದ್‌: ಪಾಕಿಸ್ಥಾನದ ನೂತನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಆ.14ರ ಮೊದಲು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಾಕಿಸ್ಥಾನ ತೆಹ್ರಿಕ್‌-ಇ-ಇನ್ಸಾಫ್ ಪಕ್ಷದ ನಾಯಕರು ಈ ಅಂಶ ಖಚಿತಪಡಿಸಿದ್ದಾರೆ. ಪಾಕಿಸ್ಥಾನದ ನ್ಯಾಷನಲ್‌ ಅಸೆಂಬ್ಲಿಯಲ್ಲಿ ಬಹುಮತಕ್ಕಾಗಿ ಸಣ್ಣ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಲಿದ್ದಾರೆ ಇಮ್ರಾನ್‌. ಚುನಾವಣೆಯಲ್ಲಿ ಅವರ ಪಕ್ಷ 117 ಸ್ಥಾನಗಳನ್ನು ಗೆದ್ದಿತ್ತು. ಇದೇ ವೇಳೆ, ಕರಾಚಿ ಮತ್ತು ಸಿಯಾಲ್‌ಕೋಟ್‌ ನ ರಸ್ತೆಬದಿಗಳಲ್ಲಿ 5 ಖಾಲಿ ಮತಪೆಟ್ಟಿಗೆಗಳು ಮತ್ತು 12ರಷ್ಟು ಮತಪತ್ರಗಳು ಪತ್ತೆಯಾಗಿದ್ದು, ಚುನಾವಣೆಯಲ್ಲಿ ಹಸ್ತಕ್ಷೇಪ ನಡೆದಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದೆ.

Advertisement

ನವಾಜ್‌ ಆಸ್ಪತ್ರೆಗೆ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ರನ್ನು ಆಸ್ಪತ್ರೆಗೆ ಸೇರಿಸಲು ಮಧ್ಯಂತರ ಸರಕಾರ ಆದೇಶ ನೀಡಿದೆ. ಅಡಿಲಾಬಾದ್‌ ಜೈಲಿನಲ್ಲಿ ಅವರನ್ನು ಬಂಧಿಸಿ ಇರಿಸಲಾಗಿದೆ. ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ  ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next