Advertisement
“ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತನಾಗುವುದನ್ನು ಅರಿತಿದ್ದ ಇಮ್ರಾನ್ ಖಾನ್, ಮೇ 9ರಂದು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲು ಮೊದಲೇ ಸಂಚು ರೂಪಿಸಿದ್ದರು’ ಎಂದು ಪಾಕ್ ಆಂತರಿಕ ಸಚಿವ ರಾಣಾ ಸನಾಹುಲ್ಲಾ ಆರೋಪಿಸಿದ್ದರು. ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ.
Related Articles
Advertisement
13 ಮಹಿಳಾ ಕಾರ್ಯಕರ್ತರ ಕಸ್ಟಡಿಗೆ ನಕಾರಲಾಹೋರ್ನ ಐತಿಹಾಸಿಕ ಜಿನ್ಹಾ ಹೌಸ್ ಮೇಲೆ ಮೇ 9ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಬೆಂಬಲಿಗರಾದ ಬಂಧಿತ 13 ಮಹಿಳೆಯರ ಪೊಲೀಸ್ ಕಸ್ಟಡಿಯ ಅವಧಿಯ ವಿಸ್ತರಣೆಗೆ ಲಾಹೋರ್‌ನ ಭಯೋತ್ಪಾದನೆ ವಿರೋಧಿ ನ್ಯಾಯಾಲಯ ನಿರಾಕರಿಸಿದೆ. ಇದೇ ವೇಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಂಧಿತ 13 ಮಹಿಳಾ ಪಿಟಿಐ ಕಾರ್ಯಕರ್ತರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಮೇ 9ರಂದು ಜಿನ್ಹಾ ಹೌಸ್ ಮತ್ತು ಲಾಹೋರ್ ಕಾಪ್ಸ್ì ಕಮಾಂಡರ್ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಬಳಸಿ ದಾಳಿ ನಡೆಸಲಾಯಿತು. ಹಾಗಾಗಿ ಪೆಟ್ರೋಲ್ ಬಾಂಬ್‌ಗಳ ವಶಕ್ಕೆ ಅವರನ್ನು ಕೆಲವು ದಿನಗಳ ಕಾಲ ಪುನಃ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ತನಿಖಾಧಿಕಾರಿ ಕೋರಿದರು. ಆದರೆ ಈ ಹಿಂದೆ ಅರ್ಜಿಯಲ್ಲಿ ಈ ವಿಷಯವನ್ನು ನಮೂದಿಸದೇ ಇರುವುದರಿಂದ ಕೋರ್ಟ್ ಕೋರಿಕೆಯನ್ನು ನಿರಾಕರಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಬಂಧಿತರ ಪೈಕಿ ಮಾಜಿ ಸಂಸದೆ ಆಲಿಯಾ ಹಮ್ಜಾ ಕೂಡ ಸೇರಿದ್ದಾರೆ. ಪಾಕಿಸ್ತಾನದಲ್ಲಿ ಕೇಂದ್ರ ಬಜೆಟ್ ಮಂಡನೆ:
ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ, ಅಗತ್ಯ ವಸ್ತುಗಳ ಪೂರೈಕೆ ಮತ್ತು ಐಎಂಎಫ್ನಿಂದ ಸಾಲ ಪಡೆಯುವುದನ್ನು ಕೇಂದ್ರೀಕರಿಸಿಕೊಂಡು ಶುಕ್ರವಾರ ಕೇಂದ್ರ ಬಜೆಟ್ ಮಂಡಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಚೇತರಿಕೆಯನ್ನು ಗಮನದಲ್ಲಿಟ್ಟುಕೊಂಡು ಪಾಕ್ ಸಂಸತ್‌ನಲ್ಲಿ ಹಣಕಾಸು ಸಚಿವ ಇಶಾಕ್ ದಾರ್ ಬಜೆಟ್ ಮಂಡಿಸಿದರು.