Advertisement

ಅಮೆರಿಕಕ್ಕೆ ಹೋಗಲು ಪಾಕ್‌ ಪ್ರಧಾನಿಗೆ ಸೌದಿ ಅರಸನ ವಿಮಾನ ಭಿಕ್ಷೆ?

09:41 AM Sep 23, 2019 | sudhir |

ಇಸ್ಲಾಮಾಬಾದ್‌: ವಿಶ್ವಸಂಸ್ಥೆ ಮಹಾಧಿವೇಶನಕ್ಕಾಗಿ ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ನಾಯಕರು ಹೋಗುತ್ತಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಅಲ್ಲಿದ್ದಾರೆ. ಆದರೆ ಅಮೆರಿಕಕ್ಕೆ ಹೋಗಲು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ತುಸು ಸಮಸ್ಯೆ. ಸರಕಾರದ ವಿಮಾನದಲ್ಲಿ ಹೋಗೋಣವೆಂದರೆ ಅಷ್ಟೊಂದು ದುಡ್ಡು ಖರ್ಚುಮಾಡಿಕೊಂಡು ಹೋಗುವುದು ತುಂಬ ಕಷ್ಟ. ಅದಕ್ಕಾಗಿ ಅವರು ಸಾಮಾನ್ಯ ಪ್ರಯಾಣಿಕ ವಿಮಾನದಲ್ಲಿ ಹೋಗಲು ಉದ್ದೇಶಿಸಿದ್ದರು. ಕಳೆದ ಬಾರಿಯೂ ಇಮ್ರಾನ್‌ ಖಾನ್‌ ಹೀಗೆಯೇ ಹೋಗಿದ್ದರು ಕೂಡ. ಆದರೆ ಈ ಬಾರಿಯೂ ಪ್ರಯಾಣಿಕ ವಿಮಾನದಲ್ಲಿ ಹೋಗುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಕಾರಣ ಇಮ್ರಾನ್‌ ಹೋಗುತ್ತೇನೆಂದಾಗ ಸೌದಿ ರಾಜ ಅದಕ್ಕೊಪ್ಪಲಿಲ್ಲ.

Advertisement

ಸೌದಿ ರಾಜರ ಭೇಟಿಗಾಗಿ ಇಮ್ರಾನ್‌ ಖಾನ್‌ ಈ ಮೊದಲೇ ಅಲ್ಲಿಗೆ ಹೋಗಿದ್ದು, ಅಲ್ಲಿಂದ ಅವರು ಪ್ರಯಾಣಿಕ ವಿಮಾನ ಹತ್ತುವವರಿದ್ದರು. ಇದು ಗೊತ್ತಾಗಿ ಸೌದಿ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಪಾಕಿಸ್ಥಾನದ ಮಾನ ಜಾಗತಿಕ ನಾಯಕರ ಎದುರು ಹರಾಜಾಗುವುದನ್ನು ತುಸು ತಡೆದಿದ್ದಾರೆ. ನೀವು ನಮ್ಮ ಅತಿಥಿಯಾದ್ದರಿಂದ ನನ್ನ ವಿಶೇಷ ವಿಮಾನದಲ್ಲಿ ಹೋಗಬೇಕೆಂದು ರಾಜರು ಹೇಳಿದ್ದಾರೆ. ಅದರಂತೆ ಇಮ್ರಾನ್‌ ಆ ವಿಮಾನದಲ್ಲಿ ಅಮೆರಿಕಕ್ಕೆ ಹೋಗಿದ್ದಾರೆ. ಸೆ.27ರಂದು ಇಮ್ರಾನ್‌ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next