Advertisement

ಪ್ರಾಣವನ್ನಾದರೂ ಬಿಡುವೆ, ಕ್ರಿಮಿನಲ್‌ಗ‌ಳನ್ನು ಕ್ಷಮಿಸಲ್ಲ

01:22 AM Mar 28, 2022 | Team Udayavani |

ಇಸ್ಲಾಮಾಬಾದ್‌: ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಸೋಮವಾರ “ಅವಿಶ್ವಾಸ’ದ ಅಗ್ನಿಪರೀಕ್ಷೆಯನ್ನು ಎದುರಿಸಲಿದ್ದು, ಅದಕ್ಕೂ ಮುನ್ನಾದಿನವಾದ ರವಿವಾರ ಇಸ್ಲಾಮಾಬಾದ್‌ನಲ್ಲಿ ಶಕ್ತಿಪ್ರದರ್ಶನ ನಡೆಸಿದ್ದಾರೆ.

Advertisement

ಪರೇಡ್‌ ಗ್ರೌಂಡ್‌ನ‌ಲ್ಲಿ ನಡೆದ ಬೃಹತ್‌ ರ‍್ಯಾಲಿ ಯಲ್ಲಿ ಲಕ್ಷಾಂತರ ಮಂದಿ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್‌ ಖಾನ್‌, ನೇರವಾಗಿ ಪಾಕ್‌ ಸೇನೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ದೇಶದ ವಿದೇಶಾಂಗ ನೀತಿಯನ್ನು ಹೊರಗಿನವರೇ ನಿಭಾಯಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಜತೆಗೆ ಇಮ್ರಾನ್‌ ಖಾನ್‌ ಯಾವತ್ತೂ ಯಾರಿಗೂ ತಲೆಬಾಗುವುದಿಲ್ಲ. ನನ್ನ ದೇಶವನ್ನು ತಲೆಬಾಗಲು ಬಿಡುವುದೂ ಇಲ್ಲ ಎಂದೂ ಅವರು ಶಪಥ ಮಾಡಿದ್ದಾರೆ.

ಇದನ್ನೂ ಓದಿ:ಎರಡು ವರ್ಷಗಳಿಂದ ರದ್ದಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಮತ್ತೆ ಆರಂಭ

Advertisement

ಭಾರತವೂ ನಮ್ಮನ್ನು ಹಿಂದಿಕ್ಕಿತು: ಪಾಕಿಸ್ಥಾನವು ಬಡವಾಗಲು ಇಲ್ಲಿರುವ ಬಿಳಿಕಾಲರಿನ ಅಪರಾಧಿಗಳೇ ಕಾರಣ. ಕಳೆದ 30 ವರ್ಷಗಳಿಂದ ಮೂರು ಇಲಿಗಳು ದೇಶವನ್ನು ಲೂಟಿ ಮಾಡಿವೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿಗಳ ವಿರುದ್ಧ ಖಾನ್‌ ಕಿಡಿಕಾರಿದ್ದಾರೆ.

ಈ ಲೂಟಿಕೋರರಿಂದಾಗಿ ಭಾರತ ಹಾಗೂ ಬಾಂಗ್ಲಾದೇಶ ಕೂಡ ನಮಗಿಂತ ಮುಂದೆ ಸಾಗುವಂತಾಯಿತು. ನಾನು ನನ್ನ ಪ್ರಾಣವನ್ನಾದರೂ ಬಿಡುತ್ತೇನೆ, ಅಧಿಕಾರವನ್ನಾದರೂ ತ್ಯಜಿಸುತ್ತೇನೆ. ಆದರೆ ಈ ಕ್ರಿಮಿನಲ್‌ಗ‌ಳನ್ನು ಮಾತ್ರ ಎಂದಿಗೂ ಕ್ಷಮಿಸುವುದಿಲ್ಲ ಎಂದೂ ಹೇಳಿದ್ದಾರೆ. ಭಾಷಣದ ವೇಳೆ ನೆರೆರಾಷ್ಟ್ರ ಚೀನವನ್ನು ಹೊಗಳಿದ ಇಮ್ರಾನ್‌, “ಚೀನವು ಕಳೆದ 30 ವರ್ಷಗಳಲ್ಲಿ ಪಾಕಿಸ್ಥಾನ‌ದ 70 ಕೋಟಿ ಮಂದಿಯನ್ನು ಬಡತನದಿಂದ ಮೇಲೆತ್ತಿದೆ. ಆ ಮೂಲಕ ಪ್ರವಾದಿಯ ಆದರ್ಶಗಳನ್ನು ಚೀನ ಪಾಲಿಸಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next