ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಅವರನ್ನು ಅರೆಸೇನಾ ಪಡೆಗಳು ವಶಕ್ಕೆ ಪಡೆದಿವೆ ಎಂದು ವರದಿ ತಿಳಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಇಸ್ಲಾಮಾಬಾದ್ ನ ನ್ಯಾಯಾಲಯದ ಆವರಣದಿಂದ ಇಮ್ರಾನ್ ಖಾನ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಬ್ರಾಡ್‌ಕಾಸ್ಟರ್ ವರದಿ ಮಾಡಿದೆ.
ಇಸ್ಲಾಮಾಬಾದ್ ಹೈಕೋರ್ಟ್ ಅನ್ನು ರೇಂಜರ್ ಗಳು ಆಕ್ರಮಿಸಿಕೊಂಡಿದ್ದಾರೆ, ವಕೀಲರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ, ಇಮ್ರಾನ್ ಖಾನ್ ಅವರ ಕಾರನ್ನು ಸುತ್ತುವರಿಯಲಾಗಿದೆ” ಎಂದು ಇಮ್ರಾನ್ ಖಾನ್ ಅವರ ಸಹಾಯಕ ಮತ್ತು ಅವರ ಪಕ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಫವಾದ್ ಚೌಧರಿ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಸುತ್ತುವರೆದಿರುವ ಅರೆಸೇನಾ ಪಡೆಯ ಸಿಬ್ಬಂದಿಯ ತಂಡ ಅವರನ್ನು ಕರೆದೊಯ್ಯವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ʼಆದಿಪುರುಷ್ʼ ಟ್ರೇಲರ್ ನಲ್ಲಿ ಮೊಳಗಿದ ʼಜೈ ಶ್ರೀರಾಮ್ʼ ಘೋಷಣೆ: ಕಣ್ಮನ ಸೆಳೆದ ʼರಾಮಾಯಣʼ ಕಥನ
“ಅವರು ಗಾಯಗೊಂಡಿರುವ ಇಮ್ರಾನ್ ಖಾನ್ ಅವರನ್ನು ತಳ್ಳಿದ್ದಾರೆ. ಪಾಕಿಸ್ತಾನದ ಜನರೇ, ಇದು ನಿಮ್ಮ ದೇಶವನ್ನು ಉಳಿಸುವ ಸಮಯ. ನಿಮಗೆ ಬೇರೆ ಯಾವುದೇ ಅವಕಾಶ ಸಿಗುವುದಿಲ್ಲ” ಎಂದು ವಿಡಿಯೋ ಶೇರ್ ಮಾಡಿರುವ ಇಮ್ರಾನ್ ಪಕ್ಷ ಹೇಳಿದೆ.
ತಕ್ಷಣವೇ ಪಾಕಿಸ್ತಾನದಾದ್ಯಂತ ಪ್ರತಿಭಟನೆ ಆರಂಭಿಸುವಂತೆ ಪಕ್ಷ ಕರೆ ನೀಡಿದೆ ಎಂದು ಪಿಟಿಐ ನಾಯಕ ಅಜರ್ ಮಶ್ವಾನಿ ಟ್ವೀಟ್ ಮಾಡಿದ್ದಾರೆ.