Advertisement

ಅಮೆರಿಕ ಕೊಟ್ಟ ಹಣದಲ್ಲಿ ಉಗ್ರರಿಗೆ ತರಬೇತಿ ನೀಡಿದ್ದು ನಾವೇ: ಇಮ್ರಾನ್ ಖಾನ್!

09:48 AM Sep 14, 2019 | Team Udayavani |

ಇಸ್ಲಾಮಾಬಾದ್: ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ) ನೀಡಿರುವ ಆರ್ಥಿಕ ನೆರವಿನಿಂದ ಭಯೋತ್ಪಾದಕರನ್ನು ತರಬೇತುಗೊಳಿಸಿರುವುದಾಗಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳುವ ಮೂಲಕ ಬಹಿರಂಗವಾಗಿ ಒಪ್ಪಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

1980ರ ದಶಕದಲ್ಲಿ ಸೋವಿಯತ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾಗ ಸೋವಿಯತ್ ವಿರುದ್ಧ ಕದನಕ್ಕಿಳಿದಿದ್ದ ಅಮೆರಿಕ ಮುಜಾಹೀದ್ದೀನ್ ಗಳನ್ನು ಜಿಹಾದ್ ಹೆಸರಿನಲ್ಲಿ ಬಳಸಿಕೊಂಡಿತ್ತು. ಈ ಮುಜಾಹಿದೀನ್ ಗಳಿಗೆ ಅಮೆರಿಕದ ಸಿಐಎನ ಆರ್ಥಿಕ ನೆರವು ಬಳಿಸಿಕೊಂಡು ತರಬೇತಿ ನೀಡಿದ್ದು ಪಾಕಿಸ್ತಾನ ಎಂಬುದಾಗಿ ಖಾನ್ ರಷ್ಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು, ಪಾಕ್ ನ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.

ದಶಕಗಳ ಬಳಿಕ ಅಮೆರಿಕದವರು ಅಫ್ಘಾನಿಸ್ತಾನದಲ್ಲಿ ತಳವೂರಿದ್ದಾರೆ. ಆ ಸಂದರ್ಭದಲ್ಲಿಯೇ ಪಾಕಿಸ್ತಾನ ಉಗ್ರರನ್ನು ಸದೆಬಡಿಯಬೇಕಿತ್ತು. ಆದರೆ ಈಗ ಭಯೋತ್ಪಾದಕರ ಸಂಘಟನೆ ನಮ್ಮ ವಿರುದ್ಧವೇ ತಿರುಗಿಬಿದ್ದಿರುವುದಾಗಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

ಅಂದು ಅಫ್ಘಾನಿಸ್ತಾನದ ವಿರುದ್ಧ ಹೋರಾಡುವಾಗ ಜಿಹಾದಿಗಳೆಂದು ಅಮೆರಿಕ ಕರೆದಿದ್ದು, ಇದೀಗ ಅವರನ್ನೇ ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ನಾವು ಈಗ ಅವರ ವಿರುದ್ಧ ಸಮರ ಸಾರಿದ್ದರಿಂದಲೇ ಉಗ್ರರು ನಮ್ಮ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಖಾನ್ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕದ ಜತೆ ಕೈಜೋಡಿಸುವ ಮೂಲಕ 100 ಬಿಲಿಯನ್ ಡಾಲರ್ ನಷ್ಟು ವ್ಯಯವಾಗಿದೆ. 70 ಸಾವಿರಕ್ಕೂ ಅಧಿಕ ಜನರನ್ನು ಪಾಕಿಸ್ತಾನ ಕಳೆದುಕೊಳ್ಳುವಂತಾಗಿತ್ತು. ಇಷ್ಟೆಲ್ಲಾ ನಷ್ಟ ಅನುಭವಿಸಿದ ಮೇಲೆಯೂ ಅಮೆರಿಕ ಪಾಕಿಸ್ತಾನದ ಮೇಲೆಯೇ ಆರೋಪ ಹೊರಿಸುತ್ತಿದೆ ಎಂದು ಖಾನ್ ತಿರುಗೇಟು ನೀಡಿದ್ದಾರೆ.

Advertisement

ನಾವು 70ಸಾವಿರ ಜನರನ್ನು ಕಳೆದುಕೊಂಡಿದ್ದೇವೆ. ಉಗ್ರರ ವಿರುದ್ಧದ ಹೋರಾಟದಲ್ಲಿ 100 ಬಿಲಿಯನ್ ಡಾಲರ್ ಹಣವೂ ನಷ್ಟವಾಗಿದೆ. ಈಗ ಅಫ್ಘಾನಿಸ್ತಾನದಲ್ಲಿ ಯಶಸ್ಸು ಸಾಧಿಸಲು ಆಗಿಲ್ಲ ಎಂದು ಪಾಕಿಸ್ತಾನದ ಮೇಲೆ ಅಮೆರಿಕ ಆರೋಪ ಹೊರಿಸುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next