Advertisement

ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ ಕೇಸ್‌: ಇಮ್ರಾನ್‌ ಖಾನ್‌ ಖುಲಾಸೆ

04:32 PM May 04, 2018 | Team Udayavani |

ಇಸ್ಲಾಮಾಬಾದ್‌ : 2014ರಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ  ಹಿರಿಯ ಪೊಲೀಸ್‌ ಅಧಿಕಾರಿಯೋರ್ವರ ಮೇಲೆ ನಡೆಸಲಾಗಿದ್ದ ಮಾರಣಾಂತಿಕ ದಾಳಿಗೆ ಸಂಬಂಧಿಸಿದ ಕೇಸಿನಲ್ಲಿ ಪಾಕ್‌ ವಿಪಕ್ಷ ನಾಯಕ ಇಮ್ರಾನ್‌ ಖಾನ್‌ ಅವರನ್ನು ಉಗ್ರ ನಿಗ್ರಹ ನ್ಯಾಯಾಲಯ ಖುಲಾಸೆಗೊಳಿಸಿದೆ. 

Advertisement

2013ರ  ಮಹಾ ಚುನಾವಣೆಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಇಮ್ರಾನ್‌ ಖಾನ್‌ ಅವರು ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ (ಪಿಟಿಐ) ಕಾರ್ಯಕತರು ಮತ್ತು ಪಾಕಿಸ್ಥಾನ್‌ ಆವಾಮಿ ತೆಹರೀಕ್‌ ಅಧ್ಯಕ್ಷ ತಾಹಿರುಲ್‌ ಕಾದ್ರಿ ಅವರ ಬೆಂಬಲಿಗರು ಜತೆಗೂಡಿ 2014ರಲ್ಲಿ  ಬೃಹತ್‌ ಪ್ರತಿಭಟನೆ ನಡೆಸಿದ್ದರು. 

2014ರ ಜೂನ್‌ನಲ್ಲಿ ಲಾಹೋರ್‌ನಲ್ಲಿ ಕೂಡ ಈ ಪ್ರತಿಭಟನೆಗಳು ನಡೆದಿದ್ದು 14 ಮಂದಿ ಕೊಲ್ಲಲ್ಪಟ್ಟು ಇತರ 100ಕ್ಕೂ ಅಧಿಕ ಮಂದಿ ಪೊಲೀಸ್‌ ಗೋಲಿಬಾರಿನಲ್ಲಿ ಗಾಯಗೊಂಡಿದ್ದರು. 

ಆ ಸಂದರ್ಭದಲ್ಲಿ ಇಸ್ಲಾಮಾಬಾದ್‌ ಪೊಲೀಸ್‌ ಸುಪರಿಂಟೆಂಡೆಂಟ್‌ ಅಸ್ಮತುಲ್ಲಾ ಜುನೇಜೋ ಅವರನ್ನು ಉದ್ರಿಕ್ತರು ಹಿಗ್ಗಾ ಮುಗ್ಗಾ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next