Advertisement
ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆ ಯಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಆಶಾ ಅವರು ಜಿಲ್ಲೆಯ ಆರೋಗ್ಯ ಜಾಗೃತಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಎಚ್1ಎನ್1ನ 15 ಪ್ರಕರಣ, ಇಲಿಜ್ವರದ 18 ಪ್ರಕರಣ, ಮಲೇರಿಯಾದ 1 ಪ್ರಕರಣ, ಡೆಂಗ್ಯೂವಿನ 190 ಮತ್ತು ಹೆಪಟೈಟಿಸ್‌ನ 83 ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ, ರೋಗ ನಿಯಂತ್ರಣದಲ್ಲಿದೆ ಎಂದರು.
Related Articles
Advertisement
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜಾ, ತ್ಯಾಜ್ಯ ವಿಲೇ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯತ್ ಜಂಟಿಯಾಗಿ ಆಸ್ಪತ್ರೆಯನ್ನು ಪರಿಶೀಲಿಸಿ ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಸ್ಪಷ್ಟ ಸೂಚನೆ ನೀಡಿದರು.
ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮುಕೊಂಡ ಸುಬ್ರಮಣಿ ಅವರು, ಶಾಂತಳ್ಳಿ ಆಸ್ಪತ್ರೆಯಲ್ಲಿ ಅಗತ್ಯ ನರ್ಸ್ ಮತ್ತು ಡಿ ಗ್ರೂಪ್ ನೌಕರರು ಇಲ್ಲದಿರುವುದು. ವಿವಿಧ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರುಗಳಿದ್ದರೂ ಅವರು ಅಲೋಪತಿ ಔಷಧಿಗಳನ್ನು ನೀಡಲು ಹಿಂದೇಟು ಹಾಕುವ ವಿಚಾರಗಳನ್ನು ಪ್ರಸ್ತಾಪಿಸಿದರು. ಈ ಹಂತದಲ್ಲಿ ಉಪಾಧ್ಯಕ್ಷೆ ಲೋಕೆೇಶ್ವರಿ ಗೋಪಾಲ್ ವೈದ್ಯರುಗಳು ಇಲ್ಲದಿದ್ದರೆ ಆಸ್ಪತ್ರೆಯನ್ನೆ ಮುಚ್ಚಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜಾ, ಗ್ರಾಮೀಣ ಭಾಗಗಳಲ್ಲಿ ಜಾಂಡೀಸ್‌ನ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಕುಡಿಯುವ ನೀರಿನ ಶುಚಿತ್ವಕ್ಕೆ ಒತ್ತು ನೀಡಬೇಕೆಂದರು. ಈ ಸಂದರ್ಭ ಸ್ಥಾಯೀ ಸಮಿತಿ ಅಧ್ಯಕ್ಷ ಮೂಕೊಂಡ ಸುಬ್ರಮಣಿ, ನಾಪೊàಕ್ಲು ಪಟ್ಟಣಕ್ಕೆ ನೀರನ್ನು ಶುದ್ಧೀಕರಿಸದೆ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ಅಗತ್ಯ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸುವಂತೆ ಆಗ್ರಹಿಸಿದರು.