Advertisement

ಅಕಾಲಿಕ ಮರಣಕ್ಕೆ ದಾರಿ ಮಾಡಿಕೊಡುತ್ತಿದೆ ಅಶುದ್ಧ ಗಾಳಿ

01:25 AM Nov 02, 2020 | mahesh |

ಮಣಿಪಾಲ: ಭಾರತದಲ್ಲಿ ವಾಯು ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ವರ್ಷ ಪ್ರಪಂಚದಲ್ಲೇ ಅತಿ ಹೆಚ್ಚು ಪ್ರಮಾಣದ ವಾಯು ಮಾಲಿನ್ಯ ಭಾರತದಲ್ಲಿ ಕಂಡು ಬಂದಿದೆ. ವಾಯು ಮಾಲಿನ್ಯ ಹೆಚ್ಚುತ್ತಿರುವ ದೇಶಗಳ ಪೈಕಿ ಜಾಗತಿಕ ಮಟ್ಟದಲ್ಲೇ ಭಾರತ ಮುಂಚೂಣಿಯಲ್ಲಿದೆ.

Advertisement

ಅಕಾಲಿಕ ಮರಣ
ಸ್ಟೇಟ್‌ ಆಫ್ ಗ್ಲೋಬಲ್‌ ಏರ್‌ 2020 (ಎಸ್‌ಒಜಿಎ 2020) ಅಧ್ಯಯನ ಪ್ರಕಾರ ಭಾರತದಲ್ಲಿ ಅಕಾಲಿಕ ಮರಣ ಹಾಗೂ ತಿಂಗಳು ತುಂಬದ ಹಸುಗೂಸುಗಳ ಸಾವಿಗೂ ವಾಯುಮಾಲಿನ್ಯವೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಈ ಕುರಿತು ಇಂಡಿಯಾ ಸ್ಪೇಂಡ್‌ ವರದಿ ಮಾಡಿದ್ದು, ಎಸ್‌ಒಜಿಎ 2020 ಅಧ್ಯಯನದ ಪ್ರಮುಖಾಂಶಗಳ ಮಾಹಿತಿಯನ್ನು ಹಂಚಿಕೊಂಡಿದೆ.

66.7ಲಕ್ಷ ಮಂದಿ ಬಲಿ
ಜಾಗತಿಕವಾಗಿ 2019ರಲ್ಲಿ ವಾಯುಮಾಲಿನ್ಯದಿಂದ 66.7ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಇದು ಒಟ್ಟು ಜಾಗತಿಕ ಸಾವಿನ ಪ್ರಮಾಣದ ಶೇ.12ರಷ್ಟಿದೆ.

ಅಕಾಲಿಕ ಮರಣಕ್ಕೆ ದಾರಿ
ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿರುವ 87 ಅಂಶಗಳನ್ನು ಗುರುತಿಸಲಾಗಿದೆ. ಆ ಪೈಕಿ ವಾಯುಮಾಲಿನ್ಯ ಅಗ್ರ ನಾಲ್ಕನೇ ಸ್ಥಾನದಲ್ಲಿದ್ದು, ಅನಂತರದ ಸ್ಥಾನದಲ್ಲಿ ರಕ್ತದೊತ್ತಡ, ತಂಬಾಕು ಸೇವನೆ ಇದೆ. ಆದರೆ ಭಾರತದಲ್ಲಿ ಮಾತ್ರ ಅಕಾಲಿಕ ಮರಣಕ್ಕೆ ವಾಯುಮಾಲಿನ್ಯವೇ ಪ್ರಮುಖ ಕಾರಣ.

ಪಿಎಂ ಕಣಗಳ ಪ್ರಮಾಣ ಏರಿಕೆ
2010ರಿಂದ ಪ್ರತಿವರ್ಷ 2.5 ಪಾಟಿಕಲ್ಸ… ಮ್ಯಾಟರ್‌ (ಪಿಎಂ) ಮಾಲಿನ್ಯ ಕಣದ ಪ್ರಮಾಣ ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಪಿಎಂ ಮಾಲಿನ್ಯ ಕಣಗಳ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವ ಕನಿಷ್ಠ ಸುರಕ್ಷಿತ ಮಾನದಂಡ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚಿದೆ.

Advertisement

ಮನೆಯ ಒಳಗೂ ವಾಯುಮಾಲಿನ್ಯ
2019ರಲ್ಲಿ ಮನೆಯ ಒಳಗಿನ ವಾಯುಮಾಲಿನ್ಯದಿಂದಾಗಿ ಸುಮಾರು 6 ಲಕ್ಷ ಭಾರತೀಯರು ಸಾವನ್ನಪ್ಪಿದ್ದರೆ, ಜಾಗತಿಕವಾಗಿ 2.31 ದಶಲಕ್ಷ ಮಂದಿ ಬಲಿಯಾಗಿದ್ದಾರೆ.

ಭಾರತದಲ್ಲಿ 16.7 ಲಕ್ಷ ಹಸುಗೂಸುಗಳ ಸಾವು
ಎಂದು ಎಸ್‌ಒಜಿಎ 2020 ವರದಿ ಪ್ರಕಾರ, 2019ರಲ್ಲಿ ಮನೆಯಿಂದ ಹೊರಗೆ ಮತ್ತು ಒಳಗೆ ಇರುವ ಪಾಟಿಕಲ್ಸ… ಮ್ಯಾಟರ್‌ ಮಾಲಿನ್ಯವೇ ಭಾರತದಲ್ಲಿ ಸುಮಾರು 1,16,000 ಹಸುಗೂಸುಗಳ ಸಾವಿಗೆ ಕಾರಣವಾಗಿದೆ. ಅಲ್ಲದೆ ವಾರ್ಷಿಕ ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್‌ ಮೊದಲಾದ ಕಾಯಲೆಗಳಿಂದ 16.7 ಲಕ್ಷ ಸಾವಿಗೂ ವಾಯುಮಾಲಿನ್ಯವೇ ಕಾರಣ.

ಎಲ್ಲೆಲ್ಲಿ ಹೆಚ್ಚು?
ಹೆಚ್ಚು ಜನದಟ್ಟಣೆ ಹೊಂದಿರುವ ವಿಶ್ವದ 20 ರಾಷ್ಟ್ರಗಳ ಪೈಕಿ 14ರಲ್ಲಿ ವಾಯುಮಾಲಿನ್ಯ ಇಳಿಕೆಯಾಗುತ್ತಿದೆ. ಆದರೆ ಭಾರತ, ಬಾಂಗ್ಲಾದೇಶ, ಪಾಕಿಸ್ಥಾನ, ಜಪಾನ್‌, ನೈಜರೀಯಾನಲ್ಲಿ ಮಾತ್ರ ವಾಯುಮಾಲಿನ್ಯ ಅಧಿಕ ಪ್ರಮಾಣದಲ್ಲಿ ದಾಖಲಾಗಿದೆ.

61 ರಷ್ಟು ಹೆಚ್ಚಳ
2019ರಲ್ಲಿ ಪಿಎಂ 2.5 ಕಣಗಳ ಹೆಚ್ಚಳದಿಂದ ದೇಶದಲ್ಲಿ 9.80 ಲಕ್ಷ ಮಂದಿ ಸಾವಿಗೀಡಾಗಿದ್ದು, 2010ರಿಂದ 2019ರ ನಡುವಿನ ಅವಧಿಯಲ್ಲಿ ಶೇ. 61ರಷ್ಟು ಹೆಚ್ಚಳವಾಗಿದೆ.

ಅತೀ ಹೆಚ್ಚು ಶಿಶು ಮರಣ ಹೊಂದಿದ್ದ ರಾಷ್ಟ್ರಗಳು
ಭಾರತ 116,000
ನೈಜಿರೀಯಾ 67,900
ಪಾಕಿಸ್ಥಾನ 56,500
ಇಥೋಪಿಯಾ 22,900
ಕಾಂಗೋ 12,700

Advertisement

Udayavani is now on Telegram. Click here to join our channel and stay updated with the latest news.

Next