Advertisement

ಹೊನ್ನಟಗಿಯಲ್ಲಿ ಅಶುದ್ಧ ನೀರು

04:59 PM Feb 22, 2021 | Team Udayavani |

ದೇವದುರ್ಗ: ತಾಲೂಕಿನ ಹೇಮನಾಳ ಗ್ರಾಪಂ ವ್ಯಾಪ್ತಿಯ ಹೊನ್ನಟಗಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಬಾವಿಯಿಂದ ಕಲುಷಿತ ನೀರು
ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಸಮಸ್ಯೆಗಳು ಶುರುವಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಮಾಡಬೇಕೆಂದು ಅಧಿ ಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದ್ದು, ಯಾವುದೇ ಪ್ರಯೋಜನ ಆಗಿಲ್ಲವಾಗಿದೆ. ಅದರಲ್ಲೂ ಇಲ್ಲಿಯ ದಲಿತರ ವಾರ್ಡ್‌ನ ನೀರಿನ ಸಮಸ್ಯೆಯಂತೂ ಕೇಳುವವರೇ ಇಲ್ಲದಂತಾಗಿದೆ.

Advertisement

ಸದ್ಯ ಗ್ರಾಮದಲ್ಲಿರುವ ಬಾವಿಯಿಂದ ಪೈಪ್‌ಲೈನ್‌ ಮೂಲಕ ದಲಿತರ ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದೆ. ಬಾವಿ ಸ್ವತ್ಛತೆ ನಿರ್ವಹಣೆ ಕೊರತೆಯಿಂದ ನಲ್ಲಿಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಆದರೀಗ ವೃದ್ಧರಲ್ಲಿ ಕೈಕಾಲು ನೋವು, ಮಕ್ಕಳ ಮೈಮೇಲೆ ಗುಳ್ಳಿಯಂತಹ ಸಮಸ್ಯೆಗಳು ಜೀವ ಹಿಂಡುತ್ತಿವೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಲ್ಲಿ ಅಶುದ್ಧ ನೀರು ಸೇವನೆಯಿಂದ ಚರ್ಮರೋಗದ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ವೈದ್ಯರು.

ಬಾವಿಯ ನಿರ್ವಹಣೆ ಕೊರತೆ: ಹೊನ್ನಟಗಿ ಗ್ರಾಮದ ದಲಿತರ ವಾರ್ಡ್‌ ಸೇರಿ ಇತರೆ ವಾರ್ಡ್‌ಗಳಿಗೆ ನೀರು ಪೂರೈಸುವ ಬಾವಿಯಲ್ಲಿ ಕಸಕಡ್ಡಿ ಬಿದ್ದು, ನೀರು ಕಲುಷಿತಗೊಂಡಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆ ನಿರ್ವಹಣೆ ಬಗ್ಗೆ ಗಮನ ಹರಿಸುತ್ತಿಲ್ಲ. ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಆದರೂ ಕುಡಿವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ.

ಶುದ್ಧ ಕುಡಿವ ನೀರಿನ ಘಟನೆ ಸ್ಥಾಪಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಸ್ಪಂದನೆ ಇಲ್ಲದ ಕಾರಣ ಕಲುಷಿತ ಬಾವಿ ನೀರು ಸೇವಿಸಲಾಗುತ್ತಿದೆ. ವೃದ್ಧರಲ್ಲಿ ಕೈಕಾಲು ನೋವು, ಮಕ್ಕಳಿಗೆ ಚರ್ಮದ ಸಮಸ್ಯೆ ಹೆಚ್ಚಿದೆ.

ಶಾಂತಕುಮಾರ ಹೊನ್ನಟಗಿ, ಎಂಆರ್‌ಎಚ್‌
ಸಂಘಟನೆ ತಾಲೂಕು ಅಧ್ಯಕ್ಷ

Advertisement

ಹೊನ್ನಟಗಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಬಾವಿ ಸ್ವತ್ಛತೆ ಶುದ್ಧ ನೀರು ಪೂರೈಸುವಂತೆ ಈಗಾಗಲೇ ಗ್ರಾಪಂ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಅಗತ್ಯ ಬಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗುತ್ತದೆ.
ಪಂಪಾಪತಿ ಹಿರೇಮಠ, ತಾಪಂ ಇಒ.

*ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next