ವೇಣೂರು: ಐತಿಹಾಸಿಕ ಹಿನ್ನೆಲೆಯಿರುವ ವೇಣೂರು ಅಜಿಲ ಕೆರೆಯನ್ನು ಮಂಗಳೂರು ಧರ್ಮಪ್ರಾಂತದ ಭಾರತೀಯ ಕೆಥೋಲಿಕ್ ಯುವ ಸಂಚಲನ (ಐಸಿವೈಎಂ) ಆಶ್ರಯದಲ್ಲಿ ವೇಣೂರು ಗ್ರಾ.ಪಂ. ಸಹಕಾರದೊಂದಿಗೆ ಯುವಜನರ ವರ್ಷದ ಪ್ರಯುಕ್ತ ವೇಣೂರು ಕ್ರಿಸ್ತರಾಜ ದೇವಾಲಯದ ಐಸಿವೈಎಂ ಘಟಕದ ಸಹಭಾಗಿತ್ವದಲ್ಲಿ ಬುಧವಾರ ಶ್ರಮದಾನದ ಮೂಲಕ ಹೂಳೆತ್ತಲಾಯಿತು.
ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪುರಾತನ ಕೆರೆ, ಬಾವಿಗಳ ಅಭಿವೃದ್ಧಿಗೆ ಪ್ರತಿಬಂಧಿಸುವುದು ಸರಿಯಲ್ಲ. ಜಾಗದ ಮೋಹದಿಂದ ಇಂತಹ ಕೆರೆ, ಬಾವಿಗಳು ಪಾಳು ಬೀಳಲು ಕಾರಣವಾಗುತ್ತಿವೆ. ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸುವುದರಿಂದ ಅಂತ ರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಇದೊಂದು ಪುಣ್ಯದ ಕಾರ್ಯ. ಜಲಸಂರಕ್ಷಣೆಗೆ ಸಹಕಾರ ನಿರಂತರ ನೀಡುತ್ತೇನೆ ಎಂದರು.
ಮಂಗಳೂರು ಧರ್ಮಪ್ರಾಂತದ ಐಸಿವೈಎಂ ಯುವ ನಿರ್ದೇಶಕ ವಂ| ರೊನಾಲ್ಡ್ ಡಿ’ಸೋಜಾ ಅಧ್ಯಕ್ಷತೆ ವಹಿಸಿ ದ್ದರು. ಬೆಳ್ತಂಗಡಿ ವಲಯದ ಐಸಿವೈಎಂ ಯುವ ನಿರ್ದೇಶಕರಾದ ವಂ| ಬೇಸಿಲ್ ವಾಸ್ ಸಂದೇಶ ನೀಡಿ, ನೂರಾರು ಜನತೆಗೆ ಉಪಯೋಗವಾಗುವ ಇಂತಹ ಕಾರ್ಯಗಳು ಯುವಶಕ್ತಿಯಿಂದ ನಿರಂತರ ವಾಗಿ ನಡೆಯಲಿ ಎಂದರು.
ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಪೀಟರ್ ಅರನ್ಹಾ, ಮಂಗಳೂರು ಧರ್ಮಪ್ರಾಂತದ ಐಸಿವೈಎಂ ಸಹಾಯಕ ನಿರ್ದೇಶಕ ವಂ| ಅಶ್ವಿನ್ ಕರ್ಡೊಜಾ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಬೆಳ್ತಂಗಡಿ ಲೋಕೋ ಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತ ಶಿವಪ್ರಸಾದ್ ಅಜಿಲ, ವೇಣೂರಿನ ವೈದ್ಯ ಡಾ| ಶಾಂತಿಪ್ರಸಾದ್, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ವೇಣೂರು ಚರ್ಚ್‌ನ ಪಾಲನ ಪರಿಷತ್ ಉಪಾಧ್ಯಕ್ಷ ರೊನಾಲ್ಡ್ ಡಿ’ಸೋಜಾ, ಕಾರ್ಯದರ್ಶಿ ಸ್ಟೀವನ್ ಡಿ’ಕುನ್ಹಾ, ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದಾಖಲಾತಿ ಅಧಿಕಾರಿ ಎಲ್.ಜೆ. ಫೆರ್ನಾಂಡಿಸ್, ಉದ್ಯಮಿ ಜೇಮ್ಸ್ ಮೆಂಡೊನ್ಸಾ, ವೇಣೂರು ನವಚೇತನ ಶಾಲೆಯ ಮುಖ್ಯ ಶಿಕ್ಷಕಿ ಭ| ಶಾಲಿನಿ ಡಿ’ಸೋಜಾ, ಮೂಡುಕೋಡಿ ಹಾಲು ಉ.ಸ. ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ವೇಣೂರು ಐಸಿವೈಎಂ ಅಧ್ಯಕ್ಷ ಡೆಲ್ಸನ್ ಡಿ’ಸೋಜಾ, ಸಚೇತಕಿ ಭ| ವಿಲ್ಮಾ ಡೇಸಾ, ಸಚೇತಕ ಅರುಣ್ ಡಿ’ಸೋಜಾ, ಕಾರ್ಯದರ್ಶಿ ರೇಶ್ಮಾ ಫೆರ್ನಾಂಡಿಸ್, ಡೆನ್ನಿಸ್ ಸಿಕ್ವೇರಾ, ಆಲ್ಬರ್ಟ್ ಫೆರ್ನಾಂಡಿಸ್, ವಿಲ್ಸಾ ಮೊಂತೇರೋ, ವೇಣೂರು ಗ್ರಾ.ಪಂ. ಸದಸ್ಯರು, ಐಸಿವೈಎಂ ನಿರ್ದೇಶಕರು, ಸದಸ್ಯರು, ವೇಣೂರು ಹೋಬಳಿಯ ಗ್ರಾಮ ಲೆಕ್ಕಿಗರು ಹಾಗೂ ಸಹಾಯಕರು ಶ್ರಮದಾನದಲ್ಲಿ ಕೈಜೋಡಿಸಿದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಪ್ರಸ್ತಾವಿಸಿ, ಅನೂಪ್ ಜೆ. ಪಾಯಸ್ ಸ್ವಾಗತಿಸಿದರು. ಸ್ಟಾನಿ ಡಿ’ಸೋಜಾ ನಿರೂಪಿಸಿ, ಮಂಗಳೂರು ಧರ್ಮಪ್ರಾಂತದ ಐಸಿವೈಎಂ ಕಾರ್ಯದರ್ಶಿ ಪೆವಿಶಾ ಮೊಂತೇರೋ ವಂದಿಸಿದರು. 60 ಐಸಿವೈಎಂ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.