Advertisement

ದಲಿತ ಸಮ್ಮೇಳನ ಮೂಲಕ ತ್ರಿಕರಣ ಶುದ್ಧಿ ಸಾಧನೆ

03:55 PM Aug 18, 2019 | Suhan S |

ಕೋಲಾರ: ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಬಸವಣ್ಣ ಅವರ ಹಾದಿಯಲ್ಲಿ ತ್ರಿಕರಣ (ಕಾಯ, ವಾಚ, ಮನಸ್ಸು) ಶುದ್ಧಿ ಸಾಧಿಸಿದೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿದೆ ಎಂದು ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.

Advertisement

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರು, ದಲಿತ ಸಾಹಿತ್ಯ ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಬುಡಕಟ್ಟು, ಮಹಿಳೆ ಮತ್ತು ದಲಿತರು ಮತ್ತವರ ವಿಚಾರಗಳನ್ನೊಳಗೊಳ್ಳದ ಯಾವುದೇ ಸಮ್ಮೇಳನ ಅರ್ಥಪೂರ್ಣವಲ್ಲ, ಇದೀಗ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಕಸಾಪಕ್ಕೆ ದಲಿತ ಸಮ್ಮೇಳನದ ಮೂಲಕ ಬಹಳ ದೊಡ್ಡ ವಿವೇಕ ಬಂದಿದೆ ಎಂದು ಬಣ್ಣಿಸಿದರು.

ಯುವಕರಿಗೆ ಹೆಚ್ಚಿನ ಆದ್ಯತೆ: ದಲಿತ ಸಾಹಿತ್ಯ ಸಮ್ಮೇಳನ ಕಸಾಪದ ಘನತೆಯನ್ನು ಹೆಚ್ಚಿಸಿದೆ ಮತ್ತು ಕನ್ನಡ ಚಿಂತನೆಯ ಮೆರುಗು ಹೆಚ್ಚಿಸಿದೆಯೆಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಕಸಾಪ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವಂತಾಗಲಿ, ಆಗ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತಾಗಲಿ ಎಂದು ಆಶಿಸಿದರು.

ಮರುಚಿಂತನೆಗೆ ಪ್ರೇರಣೆ: ಅಕ್ಷರವನ್ನು ದಲಿತ ಮತ್ತು ಮಹಿಳೆಯರಿಂದ ದೂರ ಇಡಲಾಗಿತ್ತು, ಆದರೆ, ದಲಿತ ಮತ್ತು ಸ್ತ್ರೀಯರು ಮುಟ್ಟಿನ ನಂತರವಷ್ಟೇ ಅಕ್ಷರಗಳಿಗೆ ಬಿಡುಗಡೆ ಬಂತು ಎಂದು ಹೇಳಿದ ಅವರು, ಆದರೆ, ಅಕ್ಷರಸ್ಥರ ಆಪಾಯಗಳನ್ನು ವಿಮರ್ಶಿಸಬೇಕಾದ ಕಾಲಘಟ್ಟ ಇದಾಗಿದೆ, ದಲಿತ ರಾಜಕಾರಣ ಮತ್ತು ಅಕ್ಷರಸ್ಥರ ಅಪಾಯಗಳ ದಲಿತ ಸಾಹಿತ್ಯ ಸಮ್ಮೇಳನ ಮರು ಚಿಂತನೆಗೆ ಪ್ರೇರೇಪಿಸಲಿ ಎಂದರು.

ಕಟ್ಟುಪಾಡು: ದಲಿತ ಪದಕ್ಕೆ ಜಾತಿ ಲೇಪನವಿದ್ದು, ಆ ಪದವು ಸಮಸ್ತ ದುಃಖೀತರನ್ನು ಪ್ರತಿಬಿಂಬಿಸಿದರೆ, ಜಗತ್ತಿನ ಎಲ್ಲಾ ದುಃಖೀತರೂ ದಲಿತರೆಂದು ಪರಿಗಣಿಸಿದರೆ, ಆ ಪದಕ್ಕೆ ಜಾಗತಿಕ ಮಹತ್ವ ಬರುತ್ತದೆ, ಪ್ರಾದೇಶಿಕ ಹಾಗೂ ಜಾತಿಯ ಕಟ್ಟುಪಾಡುಗಳನ್ನು ಕಳಚಿಕೊಳ್ಳುತ್ತದೆ ಎಂದು ವಿವರಿಸಿದರು.

Advertisement

ಉಳಿದ ಸಂಪುಟಗಳ ಶೀಘ್ರ ಬಿಡುಗಡೆ: ದಲಿತ ಸಾಹಿತ್ಯ ಸಂಪುಟದ ಸಣ್ಣ ಕಥೆಗಳು, ಕಾವ್ಯ, ಜಾನಪದ, ಮಾನವೀಯ ಪ್ರಕಾರಗಳು ಸೇರಿದಂತೆ ಐದು ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು. ಇದೇ ರೀತಿಯ ಉಳಿದ ಐದು ಸಂಪುಟಗಳನ್ನು ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಸಾಪ ಅಧ್ಯಕ್ಷ ಮನುಬಳಿಗಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next