Advertisement

‘ಮನಃಪರಿವರ್ತನೆಯಿಂದ ಕುಟುಂಬದ ಅಭಿವೃದಿ’

03:44 PM Oct 09, 2017 | Team Udayavani |

ಬಂಟ್ವಾಳ: ಪ್ರತಿಯೊಬ್ಬನಲ್ಲಿ ನಾನು ಒಳ್ಳೆಯವನಾಗಬೇಕು, ತಾನು ಚಟಮುಕ್ತ ನಾಗಿ ತನ್ನ ಕುಟುಂಬ ಅಭಿವೃದ್ಧಿ ಕಾಣಬೇಕು ಎಂಬ ಜಾಗೃತಿ ಮೂಡಬೇಕು. ಸಮಿತಿಯು ಅಂತಹ ಜಾಗೃತಿ ಮೂಡಿ ಲು ಮಾಡಿರುವ ಕಾರ್ಯಕ್ರಮ ಅಭಿನಂದನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

Advertisement

ಅ. 8ರಂದು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ರೋಟರಿ ಕ್ಲಬ್‌, ತಾ| ಧ.ಗ್ರಾ. ಯೋಜನೆ ಹಾಗೂ ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾ ಯಕ ಸಂಘಗಳ ಒಕ್ಕೂಟ, ಶ್ರೀಕ್ಷೇತ್ರ ನಂದಾವರ ಇವುಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ನಡೆದ ಬಂಟ್ವಾಳ ತಾ| ಮಟ್ಟದ ನವಜೀವನ ಸಮಿತಿ ಸದಸ್ಯರ ಸಮಾವೇಶ,ಮದ್ಯ ವರ್ಜಿತರ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಶ್ವತ ಪರಿಹಾರ ಹುಡುಕಿ
ಮಾದಕ ದ್ರವ್ಯ ಸೇವನೆ ಯುವ ಸಮಾಜವನ್ನು ನಾಶ ಮಾಡುತ್ತಿದೆ. ಇದೊಂದು ಜಾಗ ತಿಕ ಸಮಸ್ಯೆಯಾಗಿ ಕಾಡುತ್ತಿದೆ ಮದ್ಯವರ್ಜಿತರನ್ನು ನವ ಜೀವನ ಸಮಿತಿ ಸದಸ್ಯರು ಕಾಲ ಕಾಲಕ್ಕೆ ಪುನಃ ಭೇಟಿ ಮಾಡುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು ಎಂದರು.

ಕುಟುಂಬದ ಸಹಕಾರ ಅಗತ್ಯ
ಮಾಣಿಲ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತರಾದವರು ತಮ್ಮ ಜೀವನದ ಬದಲಾವಣೆ, ಪ್ರಗತಿಯನ್ನು ಇಲ್ಲಿ ವ್ಯಕ್ತಪಡಿಸಿದ್ದು ಸಹಸ್ರಾರು ಕುಟುಂಬಗಳು ಕ್ಷೇತ್ರದ ವ್ಯಸನ ಮುಕ್ತ ಕಾರ್ಯಕ್ರಮದಿಂದ ಪ್ರಯೋಜನ ಪಡೆದಿವೆ. ಪರಿವರ್ತನೆ ಆಗುವುದಕ್ಕೆ ಸುಲಭ, ಆದರೆ ಅದನ್ನು ನಿರಂತರ ಉಳಿಸಿಕೊಂಡು ಬರಬೇಕಾದರೆ ಕುಟುಂಬದವರ ಸಹಕಾರ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆ ಬಂಟ್ವಾಳ ತಾ| ಸಮಿತಿ ಅಧ್ಯಕ್ಷ ಎನ್‌. ಪ್ರಕಾಶ ಕಾರಂತ ಮಾತನಾಡಿದರು.
ಇದೇ ಸಂದರ್ಭ ಶ್ರೀ ಕೇತ್ರ ಧರ್ಮ ಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಚನದ ನುಡಿಗಳ ರೆಕಾರ್ಡನ್ನು
ಪ್ರಸಾರ ಮಾಡಲಾಯಿತು. ಪಾನಮುಕ್ತರಿಗೆ ಔಷಧ ಗಿಡ, ಹೂ ಮತ್ತು ಗೌರವಾರ್ಪಣೆ ನಡೆಯಿತು.

Advertisement

ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಸಜೀಪಮುನ್ನೂರು ಗ್ರಾ.ಪಂ. ಅಧ್ಯಕ್ಷ ಶರೀಫ್‌ ನಂದಾವರ, ಮಾಜಿ ಶಾಸಕ ಎ.
ರುಕ್ಮಯ ಪೂಜಾರಿ, ಬಂಟ್ವಾಳ ರೋಟರಿ ಕ್ಲಬ್‌ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ, ಕಾರ್ಯದರ್ಶಿ ನಾರಾಯಣ ಹೆಗ್ಡೆ, ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷ ಕಿರಣ್‌ ಹೆಗ್ಡೆ, ಯೋಜನೆ ಬಂಟ್ವಾಳ ತಾ| ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ  ಗೌಡ ನಾವೂರು ಮೊದಲಾದವರು ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್‌ ಸ್ವಾಗತಿಸಿದರು. ಜಿಲ್ಲಾ ಯೋಜನಾಧಿಕಾರಿ ಚಂದ್ರಶೇಖರ
ನೆಲ್ಯಾಡಿ ಪ್ರಸ್ತಾವನೆಗೈದರು.

ಬಂಟ್ವಾಳ ಯೋಜನಾಧಿಕಾರಿ ಸುನೀತಾ ನಾಯಕ್‌ ವಂದಿಸಿದರು. ಜಿ.ಪಂ. ಸದಸ್ಯೆ ಮಂಜುಳಾ ಮಾವೆ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಅಕ್ರಮ -ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಭೂ ಬ್ಯಾಂಕ್‌ ಅಧ್ಯಕ್ಷ ಸುದರ್ಶನ ಜೈನ್‌, ಗಣ್ಯರಾದ ಪಿ. ಜಿನರಾಜ ಆರಿಗ, ರೊನಾಲ್ಡ್‌ ಡಿ’ಸೋಜಾ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಿ.ಎಂ. ಕುಲಾಲ್‌ ಮತ್ತಿತರರು ಉಪಸ್ಥಿತರಿದ್ದರು.

ಮದ್ಯಮುಕ್ತ ಚುನಾವಣೆ ಘೋಷಣೆಯಾಗಲಿ
ರಾಜಕೀಯದ ಮಂದಿಗೆ ಇಚ್ಛಾ ಶಕ್ತಿ ಇಲ್ಲದಿರುವುದರಿಂದ ರಾಜ್ಯವನ್ನು ಪಾನಮುಕ್ತ ಮಾಡಲು ಸಾಧ್ಯವಾಗಿಲ್ಲ. ಅಭಿವೃದ್ಧಿ ಉದ್ದೇಶದ ಹಣ ಅಮಲು ಪದಾರ್ಥ ಸೇವನೆಯ ಕಾರಣಕ್ಕೆ ಮಣ್ಣು ಪಾಲಾಗುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಬಕಾರಿ ಇಲಾಖೆಗೆ ಮದ್ಯ ಮಾರಾಟದ ಗುರಿ ನೀಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷಗಳು ಮದ್ಯಮುಕ್ತ ಚುನಾವಣೆಯ ಘೋಷಣೆ ಮಾಡಲಿ ಎಂದು ಜನಜಾಗೃತಿ ವೇದಿಕೆ ನಿರ್ದೇಶಕವಿವೇಕ್‌ ವಿನ್ಸೆಂಟ್‌ ಪಾಯಸ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next