Advertisement
ವಿದ್ಯಾರ್ಥಿಗಳು ಗುರುಗಳು ಆಡುವ ಮಾತೆಲ್ಲ ವೇದವಾಕ್ಯವೆಂದು ಗಣಿಸುತ್ತಿಲ್ಲ. ಪೋಷಕರು ಕೂಡಾ ಎಲ್ಲ ಶಿಕ್ಷಕರನ್ನೂ ಸಂಶಯದ ಕಣ್ಣಿಂದಲೇ ನೋಡುತ್ತಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮೀಯತೆಯ ಬಾಂಧವ್ಯಕ್ಕಿಂತ ಹೆಚ್ಚಾಗಿ ಮಾಹಿತಿ ತುಂಬುವುದು ಹಾಗೂ ಯಾವುದಾದರೂ ಒಂದು ಪದವಿ ಗಳಿಸುವೆಡೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ಮಾತ್ರ ನಡೆಯುತ್ತಿದೆ.
Related Articles
Advertisement
ಗುರುಗಳು ಎದುರಿಸುವ ಸವಾಲುಗಳುಶಿಕ್ಷಕರು ಪ್ರತಿ ವಿದ್ಯಾರ್ಥಿಯನ್ನೂ ಅರ್ಥ ಮಾಡಿಕೊಳ್ಳಲು ಮತ್ತು ಆ ವಿದ್ಯಾರ್ಥಿಗೆ ಸಾಧ್ಯವಾಗುವ ಕಲಿಕಾ ವಿಧಾನಕ್ಕೆ ಸಿದ್ಧಗೊಳಿಸಲು ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಮುಖ್ಯ. ಒಂದು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿರಬೇಕು? ಇದು ಮಿಲಿಯನ್ ಡಾಲರ್ ಪ್ರಶ್ನೆ. ತರಗತಿಯಲ್ಲಿ ಇಪ್ಪತ್ತೈದರಿಂದ ಮೂವತ್ತು ವಿದ್ಯಾರ್ಥಿಗಳಿದ್ದರೆ ಉತ್ತಮ. ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾದಷ್ಟೂ ವೈಯಕ್ತಿಕ ವಿವರಗಳ ಬಗ್ಗೆ ಗಮನ ಕಡಿಮೆಯಾಗಿ, ಪಠ್ಯ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ಸುತ್ತಮುತ್ತಲಿನ ವಾತಾವರಣದಿಂದಲೂ ಬಹಳಷ್ಟನ್ನು ಕಲಿಯುತ್ತಾರೆ. ಈಗ ವಿದ್ಯಾರ್ಥಿಗಳಿಗೆ ಇಂಥ ಸವಾಲುಗಳು ಹೆಚ್ಚಾಗಿವೆ. ಸಿನಿಮಾ, ಟಿವಿ ಶೋಗಳು, ಧಾರಾವಾಹಿಗಳು, ಅಂತರ್ಜಾಲ, ವಿವಿಧ ಬಗೆಯ ಮೈಂಡ್‌ಗೆàಮ್‌ಗಳು ವಿದ್ಯಾರ್ಥಿಗಳನ್ನು ಪಠ್ಯ ವಿಷಯಕ್ಕಿಂತಲೂ ಹೆಚ್ಚು ಬಲವಾಗಿ ಸೆಳೆಯುತ್ತವೆ. ಶಿಕ್ಷಕರು ಈ ಎÇÉಾ ಆಧುನಿಕ ವಿಷಯಗಳನ್ನು ತಮ್ಮ ಪಠ್ಯ ವಿಷಯಗಳೊಂದಿಗೆ ಸೇರಿಸಿಕೊಂಡು ಎಚ್ಚರಿಕೆಯ ಮಾತುಗಳನ್ನು ಆಗಾಗ ಆಡುತ್ತಿರಬೇಕು. ಪಠ್ಯ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧಿಸುವಷ್ಟೆ ಕಾಳಜಿ ಈ ಅಂಶಗಳ ಕಡೆಗೂ ಇರಬೇಕು. ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಭಾಗಿತ್ವವನ್ನು ಸುಮಾರು ಮೂರು ದಶಕಗಳಿಂದಲೂ ಸರಕಾರ ಉತ್ತೇಜಿಸುತ್ತಾ ಬಂದಿದೆ. ಸರಕಾರಿ ಶಾಲಾ ಕಟ್ಟಡಗಳು ನಿರ್ವಹಣೆ ಇಲ್ಲದೆ ಭಯ ಹುಟ್ಟಿಸುತ್ತವೆ. ಶಿಕ್ಷಕರ ಕೊರತೆಗಳಿಂದ ಬಳಲುತ್ತಿವೆ. ಅನೇಕ ಸರಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳು. ವಿದ್ಯಾರ್ಥಿಗಳ ಕೊರತೆಯೆಂದು ಹಠಾತ್ತಾಗಿ ಶಾಲೆಯನ್ನು ಸಮೀಪದಲ್ಲಿರುವ ಇನ್ನೊಂದು ಸರಕಾರಿ ಶಾಲೆಯೊಂದಿಗೆ ವಿಲೀನಗೊಳಿಸುತ್ತಾರೆ. ಇಲ್ಲಿನ ಶಿಕ್ಷಕರು ಬಿಸಿ ಊಟ ಇತ್ಯಾದಿ ಕಾರ್ಯಕ್ರಮಗಳ ಲೆಕ್ಕ ಬರೆಯುತ್ತಾ ಸಮಯ ಉಳಿದರೆ ಪಾಠ ಯಾರು ಮಾಡುತ್ತಾರೆ? ಹೀಗೆ ಸರಕಾರಿ ಶಾಲೆಗಳ ನೋವು ಒಂದೆಡೆಯಾದರೆ, ಆಕರ್ಷಕ ಕಟ್ಟಡಗಳು, ಸ್ಕೂಲ್‌ಬಸ್‌ಗಳು, ಆಕರ್ಷಕ ಯೂನಿಫಾರ್ಮ್ಗಳು, ಭವ್ಯ ಭವಿತವ್ಯದ ಕಲ್ಪನೆ ಮೂಡಿಸಿ ಆತ್ಮಸ್ಥೈರ್ಯ ಹೆಚ್ಚಿಸುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಇನ್ನೊಂದೆಡೆ ಜನರನ್ನು ಸೆಳೆಯುತ್ತವೆ. ತಮಗಿರುವ ಒಬ್ಬರೋ, ಇಬ್ಬರೋ ಕುಡಿಗಳನ್ನು ಹೊಟ್ಟೆಬಟ್ಟೆ ಕಟ್ಟಿ, ಸಾಲದ ಸುಳಿಯಲ್ಲಿ ಬಿದ್ದು ಒ¨ªಾಡಿಯಾದರೂ ಇಂಥ ಅತ್ಯಾಕರ್ಷಕ ಶಾಲೆಗಳಿಗೆ ಸೇರಿಸಲು ಪೋಷಕರು ಹೋರಾಡುತ್ತಾರೆ. ಸರಕಾರವೂ ಈಗ ಉಳಿಯುವ ಅಲ್ಪಸ್ವಲ್ಪ ಮಕ್ಕಳನ್ನೂ ಆರ್‌ಟಿಇ ನಿಯಮದಡಿ ಆಂಗ್ಲ ಶಾಲೆಗಳಿಗೆ ಸೇರಿಸುವ ಸೌಕರ್ಯ ಒದಗಿಸಿವೆ. ಭಾರತೀಯ ಭಾಷೆಗಳು ಶಾಲೆಗಳಲ್ಲಿ ನಗಣ್ಯವೆನಿಸುವಂತೆ ಮರಣ ಶಾಸನ ಬರೆದಾಗಿದೆ. ರಾಜ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ 1782 ಸರಕಾರಿ ಶಾಲೆಗಳು ಮುಚ್ಚಿದ್ದು 3186 ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ ಪರಿಣಾಮ 10 ಲಕ್ಷ ವಿದ್ಯಾರ್ಥಿಗಳು ಸರಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಸೇರಿ¨ªಾರೆ. ಈಗ ಅಳಿದುಳಿದಿರುವ ಕೆಲವು ಸರಕಾರಿ ಶಾಲೆಗಳೂ ಮುಚ್ಚಿದರೆ, ಅಲ್ಲಿರುವ ಉಳಿದ ಶಿಕ್ಷಕರು ನಿವೃತ್ತಿಯಾದರೆ ಈ ಕಾರ್ಯಕ್ರಮ ಪೂರ್ತಿಗೊಳ್ಳುತ್ತದೆ. ಶಿಕ್ಷಣವೆಂಬುದು ಎಲ್ಲ ಮಕ್ಕಳ ಹಕ್ಕು ಎಂದು ನಾವು ಹೇಳುತ್ತಲೇ ಇರುತ್ತೇವೆ. ಕಾರ್ಯರೂಪದಲ್ಲಿ ಇಂದು ಶಿಕ್ಷಣ ದುಬಾರಿಯಾಗುತ್ತ ಸಾಗಿದೆ. ಡಾಕ್ಟರ್ ರಾಧಾಕೃಷ್ಣನ್ ಅವರ ಜನ್ಮ ದಿನದಂದು, ಅವರ ಆಶಯದಂತೆ ನಾವು ಶಿಕ್ಷಕರ ದಿನಾಚರಣೆ ಆಚರಿಸುತ್ತೇವೆ. ಇಂಥ ಅಭೂತಪೂರ್ವ ಪರಂಪರೆಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮ ಹಂತಕ್ಕೆ ಏರಿಸುವಲ್ಲಿ ಶಿಕ್ಷಕರು, ಆಡಳಿತ ಜೊತೆಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಸರಕಾರದ ಅಧೀನದಲ್ಲಿ ಬರುವ ಶಾಲೆಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುವಾಗ ಇಂದಿನ ಅಗತ್ಯತೆಗೆ ತಕ್ಕಂತೆ ಸರಕಾರಗಳು ಶಾಲೆಗಳಲ್ಲಿ ಆರಂಭದ ಹಂತದಿಂದಲೂ ಇಂಗ್ಲಿಷನ್ನು ಬೋಧಿಸುವ ಯೋಚನೆ ಮಾಡುತ್ತಿವೆ. ಇಂಗ್ಲಿಷ್ ಬೋಧನೆ ಸರಿಯೇ. ಆದರೆ, ಮಾತೃಭಾಷೆಗೆ ಹೆಚ್ಚಿನ ಸ್ಥಾನ ನೀಡಲು, ಹೆಚ್ಚು ಚಟುವಟಿಕೆಗಳನ್ನು ಯೋಜಿಸಬೇಕು. ಆಗ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಇಂಗ್ಲಿಷ್ ಪಠ್ಯಗಳಲ್ಲೂ, ದೇಶೀಯ ಲೇಖಕರ ಬರಹಗಳನ್ನು ಹೆಚ್ಚೆಚ್ಚು ನೀಡಬೇಕು. ರಾಜಧಾನಿ ದಿಲ್ಲಿಯಿಂದ ಒಂದು ಬೆಳಕು ಮೂಡಿಸುವ ಸುದ್ದಿ ಬಂದಿದೆ. ಮುಖ್ಯಮಂತ್ರಿ ಕೇಜ್ರಿವಾಲ್ 2015ರಲ್ಲಿ ಶಿಕ್ಷಣದ ಬಜೆಟ್ ಅನ್ನು 5,000 ಕೋಟಿಗಳಿಂದ 10,000 ಕೋಟಿಗೇರಿಸಿದರು. ದುಪ್ಪಟ್ಟಾದ ಬಜೆಟ್‌ನಲ್ಲಿ ಸರಕಾರ ಸ್ವತ್ಛತೆ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಿತು. ಸಾವಿರಾರು ಹೊಸ ತರಗತಿಗಳನ್ನು ದಾಖಲೆ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ಹಾರ್ವರ್ಡ್, ಕೇಂಬ್ರಿಡ್ಜ್ ಮತ್ತು ಐಐಎಂಗಳಿಗೆ ಶಿಕ್ಷಕರನ್ನು ತರಬೇತಿಗೆ ಕಳಿಸಲಾಯಿತು. ಹೀಗೆ ಬದಲಾವಣೆಯ ಮಹಾಪೂರದಲ್ಲಿ ಮಿಂದೆದ್ದ ಸರಕಾರಿ ಶಾಲಾ ಬೋರ್ಡ್ ಪರೀಕ್ಷೆಗಳ ಫಲಿತಾಂಶವು ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿವೆ. ಇದು ದೆಹಲಿ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ರೀತಿ. ಇದು ನಮ್ಮ ರಾಜ್ಯಕ್ಕೂ ಮಾದರಿಯಾಗಲಿ. ಕರ್ನಾಟಕದ ಎಲ್ಲ ಮಕ್ಕಳೂ ಸಮಾನವಾಗಿ ಜ್ಞಾನ ಗಳಿಸುವಲ್ಲಿ ಸಫಲವಾಗಲಿ . ಸ್ವಸ್ಥ ಸಮಾಜ ಕಟ್ಟುವಲ್ಲಿ ಆಡಳಿತದ ಕೊಡುಗೆ ಅತೀ ಅಗತ್ಯ. ಎಸ್. ಸಂಗೀತಾ ಜಾನ್ಸನ್