Advertisement

ಹದಗೆಟ್ಟ ಗುಂಡ್ಯಡ್ಕ -ಕಾರ್ಕಳ ಸಂಪರ್ಕ ರಸ್ತೆ

01:52 AM Jun 25, 2019 | sudhir |

ಅಜೆಕಾರು: ಗುಂಡ್ಯಡ್ಕದಿಂದ ಕಾರ್ಕಳ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದೆ.

Advertisement

ಸುಮಾರು 1.ಕಿ. ಮೀ ಯಷ್ಟು ಉದ್ದವಿರುವ ಈ ರಸ್ತೆಯುದ್ದಕ್ಕೂ ಬೃಹತ್‌ ಹೊಂಡಗಳು ನಿರ್ಮಾಣವಾಗಿ ಡಾಮರೇ ಇಲ್ಲದಂತಾಗಿದೆ. ಹೊಂಡ ಗಳಿಗೆ ಇತ್ತೀಚಿನ ವರ್ಷಗಳಲ್ಲಿ ತೇಪೆ ಕಾರ್ಯವೂ ನಡೆದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಗುಂಡ್ಯಡ್ಕ ಪರಿಸರದ ವಿದ್ಯಾರ್ಥಿ ಗಳು ಶಾಲಾ ಕಾಲೇಜುಗಳಿಗೆ ಕಾರ್ಕಳಕ್ಕೆ ಬರಬೇಕಾಗಿದ್ದು ಈ ರಸ್ತೆ ಮುಖಾಂತರವೇ ಸಂಚಾರಿಸಬೇಕಾಗಿದೆ. ಪ್ರಮುಖ ರಸ್ತೆಯಾಗಿರುವ ಗುಂಡ್ಯಡ್ಕ ರಸ್ತೆಯನ್ನು ದುರಸ್ತಿ ಪಡಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next