Advertisement
ಅಸಮಾಧಾನಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಮಾರ್ಗವನ್ನು ನುಂಗಿದ ಗಿಡಗಂಟಿಗಳಿಂದಾದ ತೊಂದರೆಯನ್ನು ಪರಿಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಪಾದಚಾರಿಗಳು ರಸ್ತೆಗಿಳಿದು, ಅತಿಯಾದ ವೇಗದಿಂದ ಬರುವ ವಾಹನಗಳಿಂದ ಅಪಘಾತ ವಾಗುವುದನ್ನು ತಪ್ಪಿಸಿಕೊಂಡು ನಡೆಯ ಬೇಕಾಗುತ್ತದೆ. ಜೀವಕ್ಕೆ ಅಪಾಯ ಆಗುವ ಮೊದಲೇ ಇಲಾಖೆ ಗಿಡಗಂಟಿಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡ ಬೇಕೆಂದು ವಡೇರಹೋಬಳಿಯ ಮನೋಹರ್ ಪೂಜಾರಿ ಆಗ್ರಹಿಸಿದ್ದಾರೆ.
Related Articles
ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಅವರು ಹೆದ್ದಾರಿ ಅವ್ಯವಸ್ಥೆ ಕುರಿತು ಸಹಾಯಕ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಕಮಿಷನರ್ ಅವರು ಗುತ್ತಿಗೆದಾರರಿಗೆ ಪತ್ರವನ್ನೂ ಬರೆದಿದ್ದಾರೆ. ಹೆದ್ದಾರಿ ವಿಸ್ತರಣೆಯು ಅಸಮರ್ಪಕವಾಗಿ ನಡೆಯುತ್ತಿರುವ ಕಾರಣ ಪುರಸಭೆ ವ್ಯಾಪ್ತಿಯ ಸಂಗಂ ಪರಿಸರದಲ್ಲಿ ಚರಂಡಿ ಸರಿಯಾಗಿಲ್ಲ. ಮಳೆಗಾಲದಲ್ಲಿ ಸಾರ್ವಜನಿಕರು ಹಾಗೂ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಯಾಗುತ್ತಿದೆ. ಸಂಗಂ ಜಂಕ್ಷನ್‌ನಲ್ಲಿ 4 ರಸ್ತೆಗಳು ಸೇರುವಲ್ಲಿ ಬೀದಿದೀಪಗಳೇ ಇಲ್ಲ. ರಾತ್ರಿ ಈ ರಸ್ತೆ ಮೂಲಕ ಚಿಕ್ಕನ್‌ಸಾಲ್ ರಸ್ತೆ ಹಾಗೂ ಆನಗಳ್ಳಿ ರಸ್ತೆಗೆ ತಿರುಗುವ ವಾಹನಗಳು ಇತರ ವಾಹನಗಳಿಗೆ ಢಿಕ್ಕಿಯಾಗುವ ಸಾಧ್ಯತೆಯಿದೆ. ಜನ ಅಥವಾ ಪ್ರಾಣಿಗಳು ನಿಂತಿದ್ದರೂ ಹೆದ್ದಾರಿಯಲ್ಲಿ ಕಾಣದ ಸ್ಥಿತಿ ಇದೆ. ಹೆದ್ದಾರಿ ಬದಿ ಬೆಳೆದ ಹುಲ್ಲಿನಲ್ಲಿ ಕಳ್ಳರು ಮರೆಯಾಗಿ ಕುಳಿತು ದಾರಿಹೋಕರ ಮೇಲೆ ದಾಳಿ ಮಾಡಿ ಚಿನ್ನಾಭರಣ ದೋಚುವ ಅಪಾಯವೂ ಇದೆ ಎಂದು ಅವರು ದೂರಿದ್ದಾರೆ. ಈ ದೂರಿನ ಆಧಾರದಲ್ಲಿ ಗುತ್ತಿಗೆದಾರ ಕಂಪನಿಯ ಪ್ರಾಜೆಕ್ಟ್ ಮೆನೇಜರ್‌ಗೆ ಎಸಿ ಪತ್ರ ಬರೆದು ತತ್‌ಕ್ಷಣ ಕಾಮಗಾರಿ ನಡೆಸುವಂತೆ ಆದೇಶ ನೀಡಿದ್ದಾರೆ.
Advertisement
ತೊಂದರೆಫ್ಲೈಓವರ್ನ ಎರಡೂ ಬದಿ ಪಾದಚಾರಿ ಮಾರ್ಗವೇ ಇಲ್ಲದಂತಾಗಿದ್ದು ಸ್ಥಳೀಯ ವ್ಯಾಪಾರಿಗಳಿಗೂ ತೊಂದರೆಯಾಗಿದೆ. ಎರಡೂ ಬದಿ ಸಾಕಷ್ಟು ಅಂಗಡಿಗಳಿವೆ. ಸರಕಾರಿ ಕಚೇರಿಗಳಿವೆ. ಇಲ್ಲಿಗೆ ವಾಹನದಲ್ಲಿ ಬಂದರೆ ನಿಲ್ಲಿಸುವಂತಿಲ್ಲ. ಅಥವಾ ಸುತ್ತು ಹೊಡೆದು ದೂರದಿಂದ ಬರಬೇಕು, ಎಲ್ಲೋ ವಾಹನ ನಿಲ್ಲಿಸಿ ಬರಬೇಕು. ಪುರಸಭೆಗೆ ತೆರಿಗೆ ಕಟ್ಟುವ ವ್ಯಾಪಾರಿಗಳಿಗೆ ವ್ಯಾಪಾರ ಅಭಿವೃದ್ಧಿಗೆ ಮೂಲಸೌಕರ್ಯ ಕೊಡಬೇಕಾದ ಪುರಸಭೆ ಮೌನವಾಗಿದೆ. ಹೆದ್ದಾರಿ ಪ್ರಾಧಿಕಾರದ ಮೂಲಕ ಇದಕ್ಕೊಂದು ಪರಿಹಾರ ರೂಪಿಸುವ ಕಾರ್ಯ ನಡೆಸಬೇಕಿದೆ ಎನ್ನುತ್ತಾರೆ ವಿನೋದ್ ಕುಮಾರ್ ಶಾಂತಿನಿಕೇತನ ಅವರು. ನಿಧಾನ ಕಾಮಗಾರಿ
ಕೊರೊನಾ ಲಾಕ್‌ಡೌನ್ ಸಂದರ್ಭ ಸ್ಥಗಿತವಾಗಿದ್ದ ಕಾಮಗಾರಿ ನವಂಬರ್ ಬಳಿಕ ಆರಂಭವಾಗಿದೆಯಾದರೂ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿ ಬಳಿಯಿಂದ ಕ್ಯಾಟಲ್ ಪಾಸ್ ಅಂಡರ್‌ಪಾಸ್‌ವರೆಗೆ ಮಣ್ಣು ಹಾಕಿ ಎತ್ತರಿಸಲಾಗಿದೆ. ಅದರ ಅನಂತರ ಶಾಸಿŒ ಸರ್ಕಲ್‌ನ ಫ್ಲೈಓವರ್‌ಗೆ ಸಂಪರ್ಕ ಕಲ್ಪಿಸುವ ಕೆಲಸ ಬಾಕಿಯಾಗಿದೆ. ಗಾಂಧಿಮೈದಾನದಿಂದ ಶಾಸ್ತ್ರಿ ಸರ್ಕಲ್‌ನ ಫ್ಲೈಓವರ್‌ಗೆ ಸಂಪರ್ಕ ರಸ್ತೆಯಾಗಿ ಡಾಮರು ಹಾಕಲಾಗಿದೆ. ಉಳಿದಂತೆ ಇತರೆಡೆ ಡಾಮರು ಹಾಕಿಲ್ಲ. ಬಸ್ರೂರು ಮೂರು ಕೈ ರಸ್ತೆಗೂ ಗಾಂಧಿ ಮೈದಾನ ಕಡೆಯಿಂದ ಸಂಪರ್ಕ ರಸ್ತೆಯಾಗಿದ್ದು ಇನ್ನೊಂದು ಕಡೆಯಿಂದ ಬಾಕಿ ಇದೆ. ಅಂತೆಯೇ ವಿನಾಯಕ ಬಳಿಯ ಪಾದಚಾರಿ ಅಂಡರ್‌ಪಾಸ್‌ನಲ್ಲಿ ವಿನಾಯಕ ಕಡೆಯಿಂದ ಸಂಪರ್ಕ ರಸ್ತೆಯಾಗಿದ್ದು ಅಲ್ಲಿಂದ ಬಸ್ರೂರು ಮೂರುಕೈಯ ಅಂಡರ್‌ಪಾಸ್‌ಗೆ ಸಂಪರ್ಕ ಕಲ್ಪಿಸುವ ಕೆಲಸ ಆಗಬೇಕಷ್ಟೆ. ಕ್ರಮ ಆಗಿಲ್ಲ
ಎಸಿಯವರಿಗೆ ದೂರು ನೀಡಿದ್ದು ಅಲ್ಲಿಂದ ಗುತ್ತಿಗೆದಾರ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಇನ್ನೂ ಕ್ರಮ ವಹಿಸಿಲ್ಲ. ಪುರಸಭೆ ಕೂಡ ಮುತುವರ್ಜಿ ವಹಿಸುವ ಅಗತ್ಯವಿದೆ.
– ಸಂತೋಷ್ ಕುಮಾರ್ ಶೆಟ್ಟಿ ಪುರಸಭೆ ಸದಸ್ಯರು