Advertisement
ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಾಗಿದ್ದ ಕೌಸರ್, 2014ರಲ್ಲಿ ಸಂಘಟನೆ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜತೆ ಸೇರಿ ಭಾರತ ಪ್ರವೇಶಿಸಿದ್ದರು. ಬಳಿಕ ಅದೇ ವರ್ಷ ಅಕ್ಟೋಬರ್ನಲ್ಲಿ ಕೋಲ್ಕತಾದ ಬುದ್ವಾìನ್ ಸ್ಫೋಟ ನಡೆಸಿದ್ದರು. ಬಳಿಕ ತಮ್ಮ ತಂಡಗಳನ್ನು ದಕ್ಷಿಣ ರಾಜ್ಯಗಳ ಕಡೆ ಬೇರ್ಪಡಿಸಿದ್ದ ಕೌಸರ್, ತನ್ನ ಕೆಲ ಸಹಚರರ ಜತೆ ಸೇರಿ ತುಮಕೂರು, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಇತರೆ ಸಣ್ಣ-ಪುಟ್ಟ ವ್ಯಾಪಾರಸ್ಥನ ಸೋಗಿನಲ್ಲಿ ಓಡಾಡಿಕೊಂಡಿದ್ದರು.
Related Articles
Advertisement
ಮತ್ತೂಂದೆಡೆ ರಾಜ್ಯಗುಪ್ತಚರ ಮಾಹಿತಿ ಹಾಗೂ ಎನ್ಐಎ ಜಂಟಿ ಕಾರ್ಯಾಚರಣೆಯಲ್ಲಿ 2018ರ ಆಗಸ್ಟ್ನಲ್ಲಿ ರಾಮನಗರದಲ್ಲಿ ಕೌಸರ್ನನ್ನು ಬಂಧಿಸಲಾಗಿತ್ತು. ಈತನ ವಿಚಾರಣೆಯಲ್ಲಿ ಶಂಕಿತ ತನ್ನ ತಂಡ ಕಟ್ಟಿಕೊಂಡು ಬೆಂಗಳೂರು ನಗರದ ಗಡಿ ಭಾಗ ಹಾಗೂ ಗ್ರಾಮಾಂತರ ಭಾಗದಲ್ಲಿ ಮನೆಗಳ ದರೋಡೆ ಮಾಡುತ್ತಿರುವುದು ಗೊತ್ತಾ ಗಿತ್ತು. ಈ ದರೋಡೆ ಮಾಡಿದ್ದ ಹಣದಲ್ಲಿ ಸಂಘಟನೆ ಬಲಪಡಿಸುವುದು ಮಾತ್ರವಲ್ಲದೆ, ಶಸ್ತ್ರಾಸ್ತ್ರಗಳ ಸಂಗ್ರಹ, ಸಂಘಟನೆಗೆ ಸೇರಿದ ಯುವಕರಿಗೆ ತರಬೇತಿಗೆ ಹಣ ವ್ಯಯಿಸುತ್ತಿದ್ದರು ಕೂಡ ಮಾಡುತ್ತಿದ್ದರು. ಒಟ್ಟಾರೆ ಇದೇ ಪ್ರಕರಣದಲ್ಲಿ ಕೌಸರ್ ಸೇರಿ 11 ಮಂದಿ ಆರೋಪಿಗಳಿಗೆ ಎನ್ಐಎ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ ಎಂದು ಎನ್ಐಎ ತಿಳಿಸಿದೆ.