Advertisement

ಡಬಲ್‌ ಗೇಮ್‌: ಉಗ್ರರನ್ನು ಮಟ್ಟ ಹಾಕುವುದು ಪಾಕಿಗೆ ಅಸಾಧ್ಯ: ಅಮೆರಿಕ

11:07 AM Feb 18, 2017 | Team Udayavani |

ವಾಷಿಂಗ್ಟನ್‌ : ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬಹಳ ದೀರ್ಘ‌ಕಾಲದಿಂದ ಕೆಲವು ಉಗ್ರ ಸಂಘಟನೆಗಳನ್ನು ಪೋಷಿಸುತ್ತಾ ಕೆಲವು ಉಗ್ರ ಸಂಘಟನೆಗಳ ವಿರುದ್ಧ ಮಾತ್ರವೇ ಕ್ರಮ ತೆಗೆದುಕೊಳ್ಳುವ ಡಬಲ್‌ ಗೇಮ್‌ ನಡೆಸುತ್ತಿರುವುದರಿಂದ ದೇಶದಲ್ಲಿನ ಉಗ್ರರ ಮೇಲೆ ನಿಯಂತ್ರಣ ಸಾಧಿಸುವುದು ಪಾಕಿಸ್ಥಾನಕ್ಕೆ ಅಸಾಧ್ಯವಾಗಿದೆ. ಉಗ್ರರ ವಿರುದ್ಧದ ಈ ಡಬಲ್‌ ಗೇಮ್‌ ತಂತ್ರವನ್ನು ಪಾಕಿಸ್ಥಾನ ಕೈಬಿಟ್ಟರೆ ಮಾತ್ರವೇ ಅದಕ್ಕೆ ಭಯೋತ್ಪಾದನೆ ವಿರುದ್ಧದ  ಸಮರದಲ್ಲಿ ಜಯ ಸಿಗಬಹುದು ಎಂದು ಅಮೆರಿಕದ ಸಂಸದ ಬ್ರಾಡ್‌ ಶೇರ್ಮನ್‌ ಹೇಳಿದ್ದಾರೆ.

Advertisement

ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿನ ಸೂಫಿ ದರ್ಗಾದ ಮೇಲೆ ಐಸಿಸ್‌ ಉಗ್ರರು ಬಾಂಬ್‌ ದಾಳಿ ನಡೆಸಿ ಪ್ರಾರ್ಥನೆಯಲ್ಲಿ ನಿರತರಾಗಿದ್ದ 80 ಮಂದಿಯನ್ನು ಬಲಿ ತೆಗೆದುಕೊಂಡ ಉಗ್ರ ಕೃತ್ಯವನ್ನು ಖಂಡಿಸಿ, ಮಡಿದವರಿಗೆ ಶೋಕ ವ್ಯಕ್ತಪಡಿಸಿ, ಮಾತನಾಡಿದ ಶೇರ್ಮನ್‌ ಅವರು “ಪಾಕಿಸ್ಥಾನ ಉಗ್ರ ಸಂಘಟನೆಗಳ ವಿರುದ್ಧ ತಾರತಮ್ಯ ನಡೆಸಿ ಡಬಲ್‌ ಗೇಮ್‌ ಆಡುತ್ತಿರುವುದರಿಂದ ಅದಕ್ಕೆ ತನ್ನ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಐಸಿಸ್‌ ಸಹಿತ ಇತರ ಹಲವು ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಸಾಧ್ಯವಾಗದು’ ಎಂದು ಖಂಡತುಂಡವಾಗಿ ಹೇಳಿದರು. 

ಶೇರ್ಮನ್‌ ಅವರು ಅಮೆರಿಕ ಸಂಸತ್ತಿನಲ್ಲಿ ವಿದೇಶ ವ್ಯವಹಾರಗಳ ಸಮಿತಿಯ ಏಶ್ಯ ಪೆಸಿಫಿಕ್‌ ಉಪ ಸಮಿತಿಯ ಹಾಗೂ ಸಿಂಧ್‌ ಕಾಕಸ್‌ನ ಅಗ್ರ ಶ್ರೇಯಾಂಕದ ಸದಸ್ಯರೂ ಆಗಿದ್ದಾರೆ. 

“ಪಾಕಿಸ್ಥಾನದ ಐಎಸ್‌ಐ ಆಯ್ದ ಕೆಲವು ಉಗ್ರ ಸಂಘಟನೆಗಳನ್ನು ತನ್ನ ಲಾಭಕ್ಕಾಗಿ, ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಬಹಳ ದೀರ್ಘ‌ಕಾಲದಿಂದ ಬೆಂಬಲಿಸುತ್ತಿದೆ; ಅದೇ ವೇಳೆ ಇತರ ಉಗ್ರ ಸಂಘಟನೆಗಳ ವಿರುದ್ಧ ಅದು ಕ್ರಮ ತೆಗೆದುಕೊಳ್ಳುತ್ತಿದೆ. ಇಂತಹ ಡಬಲ್‌ ಗೇಮ್‌ನಿಂದ ಯಾವುದೇ ಪ್ರಯೋಜನವಿಲ್ಲ; ಹಾಗಾಗಿ ಪಾಕ್‌ ಸರಕಾರಕ್ಕೆ ಉಗ್ರರನ್ನು ಮಟ್ಟ ಹಾಕಲು ಸಾಧ್ಯವೇ ಇಲ್ಲ’ ಎಂದು ಶೇರ್ಮನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next