ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು ಒಂದೆಡೆಯಾದರೇ, ಆಮ್ಲಜನಕದ ಕೊರತೆ ಮತ್ತೊಂದೆಡೆ. ಆಮ್ಲಜನಕದ ಕೊರತೆಯ ವಿಚಾರವಾಗಿ ದೊಡ್ಡ ಪ್ರಮಾಣದಲ್ಲಿ ಆರೋಪಗಳು ಕೇಳಿಬರುತ್ತಿರುವ ಬೆನ್ನಿಗೆ ಆಮ್ಲಜನಕದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ 10 ಎಮ್ ಟಿ ಮತ್ತು 20 ಎಮ್ ಟಿ ಸಾಮರ್ಥ್ಯದ 20 ಕ್ರಯೋಜೆನಿಕ್ ಟ್ಯಾಂಕರ್ ಗಳನ್ನು ಆಮದು ಮಾಡಿಕೊಂಡು ರಾಜ್ಯಗಳಿಗೆ ಹಂಚಿಕೆ ಮಾಡಲು ಮುಂದಾಗಿದೆ.
ಓದಿ : ಯಾರೂ ಹಸಿವಿನಿಂದ ಇರಲು ಬಿಡುವುದಿಲ್ಲ: ಸಚಿವ ಸೋಮಣ್ಣ
ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಗುಜರಾತ್ ತಲಾ ಎರಡು 20ಎಮ್ ಟಿ ಕ್ರಯೋಜೆನಿಕ್ ಟ್ಯಾಂಕರ್ ಗಳನ್ನು ಪಡೆಯಲಿದ್ದು, ಉತ್ತರ ಪ್ರದೇಶಕ್ಕೆ ಮೂರು, ರಾಜಸ್ಥಾನಕ್ಕೆ ನಾಲ್ಕು, ದೆಹಲಿಗೆ ಮೂರು ಮತ್ತು ಗುಜರಾತ್ ಗೆ ಎರಡು 10 ಎಮ್ ಟಿ ಕ್ರಯೋಜೆನಿಕ್ ಟ್ಯಾಂಕರ್ ಗಳನ್ನು ಪೂರೈಕೆಯಾಗಲಿವೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ, “ಉತ್ಪಾದನಾ ಘಟಕದಿಂದ ವಿವಿಧ ರಾಜ್ಯಗಳಿಗೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಮ್ಯಾಪಿಂಗ್ ಕ್ರಿಯಾತ್ಮಕ ಪ್ರಕ್ರಿಯೆ ಮತ್ತು ಕ್ರಯೋಜೆನಿಕ್ ಟ್ಯಾಂಕರ್ ಗಳ ಮೂಲಕ ವೈದ್ಯಕೀಯ ಆಮ್ಲಜನಕದ ಸಾಗಣೆಯು ದೇಶದ ಪೂರ್ವ ಭಾಗದಿಂದ ಇತರ ಭಾಗಗಳಿಗೆ ಹಂತ ಹಂತವಾಗಿ ಲಭ್ಯವಾಗುವಂತೆ ಮಾಡಲು ಸರ್ಜಾರ ಮುಂದಾಗಿದೆ. ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸಲು 20 ಎಮ್ ಟಿ ಮತ್ತು 10 ಎಮ್ ಟಿ ಸಾಮರ್ಥ್ಯದ ಟ್ಯಾಂಕರ್ ಗಳನ್ನು ಆಮದು ಮಾಡಿಕೊಳ್ಳಲಾಗಿದೆ ”ಎಂದು ಹೇಳಿದೆ.
ಇನ್ನು, ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ,ಕಳೆದ ಇಪ್ಪತ್ತ ನಾಲ್ಕು ಗಂಟೆಯೊಳಗೆ ದೇಶದಲ್ಲಿ 3,23,144 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳು 1.76 ಕೋಟಿಗೆ (1,76,36,307) ಏರಿಕೆಯಾಗಿದ್ದು, ಅದರಲ್ಲಿ 28.82 ಲಕ್ಷ (28,82,204) ಸಕ್ರಿಯ ಪ್ರಕರಣಗಳಾಗಿವೆ.
ದೇಶದಲ್ಲಿ ಈವರೆಗೆ 1.97 ಲಕ್ಷ (1,97,894) ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,51,827 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 1.45 ಕೋಟಿಗೆ (1,45,56,209) ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಓದಿ : ಮಾಲ್ಡೀವ್ಸ್ ಗೆ ಭಾರತೀಯರ ನಿಷೇಧ : ಟ್ರೋಲ್ ಆಗ್ತಾ ಇದ್ದಾರೆ ಬಾಲಿವುಡ್ ತಾರೆಯರು..!