ಗದಗ: ಜಿಲ್ಲೆಯಲ್ಲಿ ಕಳೆದ 7 ತಿಂಗಳಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಹಣಾಧಿಕಾರಿ ಹುದ್ದೆ ಖಾಲಿಯಿವೆ. ಲೋಕಸಭೆ ಚುನಾವಣೆ ಕೂಡ ಸಮೀಪಿಸುತ್ತಿದ್ದು, ಮತದಾರರ ಪಟ್ಟಿ ಪರಿಷ್ಕರಣೆ, ಮತದಾನ ಜಾಗೃತಿ ಸೇರಿ ಚುನಾವಣೆ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರ ಪ್ರಮುಖ ಕಾರ್ಯವಾಗಿದೆ.
Advertisement
ಜಿಪಂ ಸಿಇಒ ಅವರೇ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಆದರೆ ಜಿಪಂ ಸಿಇಒ ಹುದ್ದೆ ಖಾಲಿಯಿರುವುದರಿಂದ ಲೋಕಸಭಾ ಚುನಾವಣಾ ತಯಾರಿಗೂ ಕೊಂಚ ಹಿನ್ನಡೆಯಾದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಜಿಲ್ಲೆಗೆ ಜಿಪಂ ಸಿಇಒ ನೇಮಕಕ್ಕೆ ಮುಂದಾಗದಿರುವುದು ಶೋಚನೀಯ.
Related Articles
Advertisement
ಏಳು ತಿಂಗಳಾದರೂ ನೇಮಕವಾಗಿಲ್ಲ..ಐಎಎಸ್ ಶ್ರೇಣಿಯ ಜಿಪಂ ಸಿಇಒ ಹುದ್ದೆ ಇಷ್ಟೊಂದು ಸುದೀರ್ಘ ಅವಧಿಗೆ ಖಾಲಿ ಇರುವುದು ಇದೇ ಮೊದಲು. ಸಾಮಾನ್ಯವಾಗಿ
ವರ್ಗಾವಣೆಯಾದ ತಿಂಗಳೊಳಗೆ ಸರಕಾರ ಮತ್ತೂಬ್ಬ ಅಧಿಕಾರಿಯನ್ನು ನೇಮಕ ಮಾಡುತ್ತದೆ. ಆದರೆ ಇದೇ ಮೊದಲ ಬಾರಿಗೆ ಏಳು ತಿಂಗಳು ಕಳೆದರೂ ನೇಮಕ ಮಾಡದಿರುವುದು ಅನುಮಾನ ಮೂಡಿಸಿದೆ ಎನ್ನುತ್ತಾರೆ ಸಾರ್ವಜನಿಕರು. ಜಿಪಂ ಸಿಇಒ ಹುದ್ದೆ ಖಾಲಿ ಇರುವುದರಿಂದ ಬರ ನಿರ್ವಹಣೆ, ಉದ್ಯೋಗ ಖಾತ್ರಿ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ತಕ್ಷಣ
ಸಿಇಒ ಹುದ್ದೆ ಭರ್ತಿಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾಧಿಕಾರಿಗಳಿಗೆ
ಮನವಿ ಸಲ್ಲಿಸಿದ್ದೇವೆ.
*ಯಲ್ಲಪ್ಪಗೌಡ ಕರಮುಡಿ
ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ, ಮುಂಡರಗಿ ತಾಲೂಕು ಘಟಕ ಗದಗ ಜಿಪಂ ಸಿಇಒ ಹುದ್ದೆ ಖಾಲಿ ಇರುವುದು ಗಮನಕ್ಕೆ ಇದೆ. ಆದಷ್ಟು ಬೇಗ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
*ಎಚ್.ಕೆ.ಪಾಟೀಲ, ಕಾನೂನು ಹಾಗೂ
ಪ್ರವಾಸೋದ್ಯಮ ಇಲಾಖೆ ಸಚಿವ.