Advertisement

Importance: ಅನ್ನದ ಒಂದು ಅಗುಳಿನ ಮಹತ್ವ …

12:08 PM Apr 27, 2024 | Team Udayavani |

ಒಂದು ತುತ್ತು ಅನ್ನಕ್ಕೆ ಪರದಾಡುವ ಜನರಿಗೆ ಅನ್ನವೇ ದೇವರು ಆಗಿರುತ್ತದೆ. ಅನ್ನವೇ ಬದುಕಾಗಿರುತ್ತದೆ. ಅನ್ನವಿಲ್ಲದೇ ಈ ಜಗತ್ತಿನಲ್ಲಿ ಹಲವಾರು ಜನ ಪರದಾಡುತ್ತಾರೆ. ಇಂತಹ ಈ ಪ್ರಪಂಚದಲ್ಲಿ ಎಷ್ಟೋಜನರು ತಟ್ಟೆಗೆ ಅನ್ನ ಹಾಕಿ ಒಂದೂ ತುತ್ತು ಅನ್ನವನ್ನು ತನ್ನದೇ ಬಿಸಾಡುತ್ತಿದ್ದಾರೆ. ಅವರಿಗೆ ಅನ್ನದ ಮುಂದೆ ಯಾವ ದೇವರು ಇರುವುದಿಲ್ಲ. ನಮಗೂ ಸಹ ಅಷ್ಟೇ… ಅನ್ನವೇ ದೇವರಾಗಿರುತ್ತದೆ. ಆದರೆ ಅನ್ನದ ಬೆಲೆ ಗೊತ್ತಿಲ್ಲದವರು ಅನ್ನವನ್ನು ಬಿಸಾಡುತ್ತಾರೆ.

Advertisement

ಎಲ್ಲಿಯವರೆಗೆ ನಮಗೆ ಈ ಭೂಮಿಯಲ್ಲಿ ಅನ್ನದ ಕೊರತೆ ಕಾಣುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಜೀವಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ಅನ್ನದಾನವಾಗಿರುತ್ತದೆ ಎಂದು ಹೇಳುತ್ತಾರೆ.

ಬಡವನಾಗಿರುವವನು ಬೇಡುತ್ತಾ ಬಂದಾಗ ಹಣ, ಅಸ್ತಿ – ಅಂತಸ್ತು, – ಬೆಳ್ಳಿ ಏನನ್ನು ಕೊಟ್ಟರು ಅವರಿಗೆ ತೃಪ್ತಿಯಾಗುವುದಿಲ್ಲ. ಆದರೆ ಹಸಿದು ಬಂದವರಿಗೆ ಒಂದು ತುತ್ತು ಅನ್ನವನ್ನು ಕೊಟ್ಟರು ಅವರಿಗೆ ತೃಪ್ತಿಯ ಅನುಭವವಾಗುತ್ತದೆ. ನಂತರ ಅವನಿಗೆ ಮತ್ತಷ್ಟು ಅನ್ನವನ್ನು ಕೊಟ್ಟರೆ ಅವನು ತಿನ್ನುವುದಿಲ್ಲ.

ಮಾನವನ ಅರೋಗ್ಯ ಅನ್ನದಲ್ಲಿಯೇ ಇದೆ. ದಿನದಲ್ಲಿ ಮೂರು ಹೊತ್ತು ಊಟ ಮಾಡುವವರನ್ನು ಶ್ರೀಮಂತರು ಎಂದು ಹೇಳಲಾಗಿದೆ. ಅನ್ನವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸುವುದೇ ಹಸಿವು ಎಂದು ಹೇಳಿದ್ದಾರೆ.

ಹಸಿವು ಇದ್ದವರಿಗೆ ಹಳಸಲು ಆಹಾರವನ್ನು ಕೊಟ್ಟರು ಅವರಿಗೆ ಅದು ಮೃಷ್ಟಾನ್ನ ಭೋಜನವಾಗಿರುತ್ತದೆ. ಹಾಗೆಯೇ ಹೊಟ್ಟೆ ತುಂಬಿರುವವರಿಗೆ ಇಷ್ಟವಾಗಿರುವ ಆಹಾರವನ್ನೇ ತಯಾರಿಸಿ ಬಡಿಸಿದರೂ ಆತ ಒಂದು ತುತ್ತನ್ನು ತಿನ್ನುವುದಿಲ್ಲ.

Advertisement

ಆಹಾರದ ಹಾಗೆ ನೀರು ಕೂಡಾ ಜೀವಕ್ಕೆ ತುಂಬಾ ಮುಖ್ಯವಾಗಿದೆ. ಬಾಯಾರಿಕೆಯಿಂದ ಸಾಯುವ ಸ್ಥಿತಿಯಲ್ಲಿ ಇರುವವನಿಗೆ ಒಂದು ಗುಟುಕು ನೀರು ಸಿಕ್ಕಿದರು ಸಹ ಅದು ಅವನಿಗೆ ಜೀವ ಜಲವೇ ಆಗಿರುತ್ತದೆ. ಅನ್ನವನ್ನು ನಮಗೆ ತಿನ್ನುವ ಹಕ್ಕು ಇದೆಯೇ ಹೊರತು ಬಿಸಾಡುವ ಹಕ್ಕು ನಮಗೆ ಯಾರಿಗೂ ಇಲ್ಲ.

ನಾವು ತಿನ್ನುವ ಅನ್ನದ ಒಂದೊಂದು ಆಗುಳಿನ ಮೇಲೂ ಅದನ್ನು ತಿನ್ನುವವರ ಹೆಸರು ಇರುತ್ತದೆ ಎನ್ನುವ ಮಾತು ಸಾಮಾನ್ಯವಾಗಿದೆ. ಅಕ್ಕಿಯು ಉಳಿದರೆ ನಾಳೆ ಅನ್ನಮಾಡಬಹುದು. ಅನ್ನ ಮಾಡಿ ತಿಂದು ಉಳಿದರೆ ನಂತರ ಅದನ್ನು ಬಿಸಾಕಬೇಕೆ ಹೊರತು ಅದು ನಾಳೆಗೆ ಹಾಳಾಗುತ್ತದೆ. ಹಾಗಾಗಿ ನಮಗೆ ಎಷ್ಟು ಬೇಕೋ ಅಷ್ಟೇ ಅಕ್ಕಿಯನ್ನು ಬಳಸಿ ಅನ್ನವನ್ನಾಗಿ ಪರಿವರ್ತಿಸಬೇಕು.

ನಾಲ್ಕು ಅಗುಳು ಕಡಿಮೆ ತಿಂದರು ಪರವಾಗಿಲ್ಲ. ಹತ್ತು ಅಗುಳು ಹಾಳಾಗದಂತೆ ನೋಡಿಕೊಳ್ಳಬೇಕು. ಎಷ್ಟೋ ಮನೆಗಳ್ಳಲ್ಲಿ ಅನ್ನವನ್ನು ತಟ್ಟೆಯಲ್ಲಿಯೇ ಬಿಟ್ಟು ಕೈ ತೊಳೆಯುವವರು ಇದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಆಹಾರವನ್ನು ಬಿಸಾಡದೆ ಅಗತ್ಯವಿರುವವರಿಗೆ ನೀಡೋಣ.

ಸುರಕ್ಷಾ  ಎಂ.ಪಿ.ಎಂ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next