Advertisement

ವಚನ ಸಾಹಿತ್ಯದಿಂದ ಕಾಯಕ ತತ್ವಕ್ಕೆ ಮಹತ್ವ

01:32 PM Aug 23, 2018 | Team Udayavani |

ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಎರಡು, ಕಾಯಕ ತತ್ವಕ್ಕೆ ಮಹತ್ವ ನೀಡಿದ ಸಾಹಿತ್ಯಗಳಾಗಿವೆ ಎಂದು ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

Advertisement

ನಗರದ ಗವಿಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠ ಟ್ರಸ್ಟ್‌ ಹಾಗೂ ಶ್ರೀಮದ್ವೀರಶೈವ ಸದೊಧನ ಸಂಸ್ಥೆ ತಾಲೂಕು ಘಟಕದಿಂದ ಮತ್ತು ವೀರಶೈಲ ಲಿಂಗಾಯತ ಸಂಘಟನಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಆದಿ ಜಗದ್ಗುರು ರೇಣುಕಾಚಾರ್ಯರರು ಸಿದ್ಧಾಂತ ಶಿಖಾಮಣಿಯಲ್ಲಿ ವೃತ್ತಿ ಚೈತನ್ಯ ರೂಪಿಣೆ ಎಂದು ಬೋ ಧಿಸುವುದರ ಮೂಲಕ ವೃತ್ತಿಯೇ ಪರಮಾತ್ಮ ಎಂದು ಹೇಳಿದರು ಹಾಗೂ ವಚನ ಸಾಹಿತ್ಯದ ಮೂಲ ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದರು. ಹಾಗಾಗಿ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕಾಯಕ ತತ್ವಕ್ಕೆ ಮಹತ್ವ ನೀಡಿದ ಸಾಹಿತ್ಯಗಳಾಗಿವೆ ಎಂದು
ಹೇಳಿದರು.

12ನೇ ಶತಮಾನದ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಜಗದ್ಗುರು ಘನಲಿಂಗ ರುದ್ರಮುನಿಯವರು ವಚನ ಸಾಹಿತ್ಯದ ಹಸ್ತಪ್ರತಿ ಕಟ್ಟುಗಳನ್ನೆಲ್ಲ ಸಂಗ್ರಹಿಸಿ ಚನ್ನಬಸವಣ್ಣನವರ ಇಚ್ಛೆಯಂತೆ ಉಳವಿಗೆ ತೆಗೆದುಕೊಂಡು ಹೋಗಿ ಚನ್ನಬಸವಣ್ಣನವರಿಗೆ ಒಪ್ಪಿಸಿ ಕಲ್ಯಾಣಕ್ಕೆ ಹಿಂತಿರುಗಿ ಬಂದಿರುವುದು ಬಗ್ಗೆ ಇತಿಹಾಸ ಇದೆ. ಹಾಗಾಗಿ ಈಗ ವಚನ ಸಾಹಿತ್ಯ ಉಳಿಯಲು ಜಗದ್ಗುರು ಘನಲಿಂಗರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಡಾ| ಚಿದಾನಂದ ಚಿಕ್ಕಮಠ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ವೀರಶೆಟ್ಟಿ ಮಲ್ಲಶೆಟ್ಟಿ ಮಾತನಾಡಿದರು. ಟ್ರಸ್ಟ್‌ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ವೀರಣ್ಣ ಶೀಲವಂತ, ಪ್ರೊ| ಸೂರ್ಯಕಾಂತ ಶೀಲವಂತ, ಸವಿತಾ ರಮೇಶ, ಸಂತೋಷ ಹುಲಿಕಾಂತಿಮಠ, ಜಿಲ್ಲಾ ಸಂಚಾಲಕ ಸಾಗರ ದಂಡೋತಿ, ಅಮರ ಬಡದಾಳೆ, ಸುನೀಲ ಪತ್ರಿ, ಗಿರೀಶ ಬಿರಾದಾರ, ಸಂತೋಷ ಮಜಗೆ, ಶಾಂತಾ ಹುಲಿಕಾಂತಿಮಠ, ಪಾರ್ವತಿ ರೊಜಾ, ಶಾಂತಾ ಪಾಂಚಾಳ ಇದ್ದರು. ರಾಜ್ಯ ಸಂಚಾಲಕ ಶಿವಯೋಗಿ ಹುಲಿಕಾಂತಮಠ ಸ್ವಾಗತಿಸಿದರು. ಕಾಶಿನಾಥ ಸ್ವಾಮಿ
ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next