Advertisement

ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ

03:47 PM Jun 30, 2019 | keerthan |

“ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ’ ಎಂಬಂತೆ ನಮ್ಮ ಜ್ಞಾನೇಂದ್ರಿಯಗಳಲ್ಲಿ ದೃಷ್ಟಿದಾಯಕ ನೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಜಗತ್ತನ್ನು ನೋಡಲು ನಮಗೆ ಕಣ್ಣುಗಳು ಬೇಕು. ಆದ್ದರಿಂದ ಕಣ್ಣುಗಳ ರಕ್ಷಣೆಗೆ ಆದ್ಯತೆ ನೀಡುವುದು ಅವಶ್ಯವಾಗಿದೆ. ಕಣ್ಣುಗಳ ಆರೋಗ್ಯವನ್ನು ಕಡೆಗಣಿಸುತ್ತ ಮಿತಿ ಮೀರಿದ ಹಂತದಲ್ಲಿ ಕಣ್ಣಿನ ಆಸ್ಪತ್ರೆಗೆ ಬರುವವರ ಸಂಖ್ಯೆ ಅಧಿಕ. ನಿಯಮಿತವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುತ್ತ ಬಂದರೆ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನೇತ್ರ ಚಿಕಿತ್ಸಾ ಪದ್ಧತಿಯಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ನೂತನ ತಂತ್ರಜ್ಞಾನ ಸಹಾಯದಿಂದ ಕಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಗಿದೆ.

Advertisement

ಮಕ್ಕಳು ಹಲವಾರು ಕಾರಣಗಳಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತವೆ. ಅವುಗಳಲ್ಲಿ ಪಟಾಕಿ ಅನಾಹುತಗಳೂ ಸೇರಿವೆ. ಸುಣ್ಣ ಸಿಡಿದು ಹಲವಾರು ಮಕ್ಕಳು ಕಣ್ಣು ಕಳೆದುಕೊಳ್ಳುತ್ತಾರೆ.  ಮನೆಯಲ್ಲಿನ ಹಿರಿಯರು ಸುಣ್ಣದ ಚೀಟು ತರಲು ಮಕ್ಕಳನ್ನು ಅಂಗಡಿಗಳಿಗೆ ಕಳಿಸುತ್ತಾರೆ. ಆದರೆ ಹುಡುಗಾಟ ಸ್ವಭಾವದ ಮಕ್ಕಳು ಆಟವಾಡುತ್ತ ಸುಣ್ಣದ ಚೀಟಿಯನ್ನು ಹಿಚುಕಿದಾಗ ಅಕಸ್ಮಾತ್‌ ಆಗಿ ಅದು ಕಣ್ಣುಗಳಿಗೆ ಬಿದ್ದರೆ ಕಣ್ಣುಗಳು ಕಳೆದು ಹೋಗುವ ಸಾಧ್ಯತೆ ಹೆಚ್ಚು. ಇದನ್ನು ಲೈಮ್‌ಬರ್ನ್ ಎಂದು ಕರೆಯಲಾಗುತ್ತದೆ. ಇಂಥ ಅನಾಹುತಗಳನ್ನು ತಡೆಯಲು ಸುಣ್ಣದ ಚೀಟಿಯ ಬದಲು ಸುಣ್ಣವನ್ನು ಡಬ್ಬದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸುವುದು ಅವಶ್ಯ. ಇಲ್ಲದಿದ್ದರೆ ಮಕ್ಕಳು ಜೀವನ ಪೂರ್ತಿ ದೃಷ್ಟಿಯಿಲ್ಲದೇ ಬದುಕಬೇಕಾಗುತ್ತದೆ.

ಲ್ಯಾಬೋರೇಟರಿಗಳಲ್ಲಿ ಕೆಲಸ ಮಾಡುವವರು ಕೆಲವೊಮ್ಮೆ ಕಣ್ಣಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆಯಿರುತ್ತದೆ. ಸುರಕ್ಷಾ ಸಾಧನ ಬಳಸದಿದ್ದರಿಂದ ಆ್ಯಸಿಡ್‌ ಸಿಡಿದು ಕಣ್ಣು ಕಳೆದುಕೊಂಡ ಘಟನೆಗಳು ನಡೆಯುತ್ತವೆ. ಇನ್ನು ವೆಲ್ಡಿಂಗ್‌ ಶಾಪ್‌ನಲ್ಲಿ ಕೇವಲ ವೆಲ್ಡಿಂಗ್‌ ಮಾಡುವವರಷ್ಟೇ ಅಲ್ಲ, ಹತ್ತಿರದಿಂದ ವೆಲ್ಡಿಂಗ್‌ ನೋಡುವವರು ಕೂಡ ಕಣ್ಣಿಗೆ ಚಸ್ಮಾ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಲೋಹದ ಅತಿ ಸೂಕ್ಷ್ಮ ತುಂಡುಗಳು ಕಣ್ಣಿನೊಳಗೆ ಸೇರಿ ಹಾನಿ ಮಾಡುವ ಸಾಧ್ಯತೆ ಇರುತ್ತದೆ.

ರೋಗಗಳ ರಾಜ ಎಂದೇ ಕರೆಯುವ ಡಯಾಬಿಟಿಸ್‌ ಕಣ್ಣಿನ ಆರೋಗ್ಯ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ವೈದ್ಯಕೀಯ ಪದ್ಧತಿಯಲ್ಲಿ ಡಯಾಬಿಟಿಕ್‌ ರೆಟಿನೋಪಥಿ ಎಂದು ಕರೆಯಲಾಗುತ್ತದೆ.ಅಕ್ಷಿಪಟಲದಲ್ಲಿನ ರಕ್ತನಾಳಗಳು ಸಕ್ಕರೆ ಕಾಯಿಲೆ ಪ್ರಭಾವಕ್ಕೊಳಗಾಗಿ ರೋಗಗ್ರಸ್ತವಾಗುತ್ತವೆ. ಸಣ್ಣ ರಕ್ತನಾಳಗಳು ಒಡೆದು ಹೋಗುತ್ತವೆ. ಅಕ್ಷಿಪಟಲ ಶಕ್ತಿ ಕಳೆದುಕೊಳ್ಳುತ್ತ ಹೋಗುತ್ತದೆ.  ಮಧುಮೇಹ ರೋಗಿಗಳು ಕಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರು ಜೀವನ ಪೂರ್ತಿ ಕಣ್ಣುಗಳ ಆರೈಕೆ ಮಾಡುತ್ತಿರಬೇಕು. ಲೇಸರ್‌ ಚಿಕಿತ್ಸೆ ಮೂಲಕ ಕಣ್ಣು ಬಲಹೀನಗೊಳ್ಳದಂತೆ ತಡೆಯಬಹುದಾಗಿದೆ.

ಗ್ಲುಕೋಮಾ (ಕಾಚ್‌ಬಿಂದು) ರೋಗಿಗೆ ಯಾವುದೇ ಸುಳಿವನ್ನೂ ನೀಡದೇ ನಿಧಾನವಾಗಿ ಆವರಿಸುವ ಅಂಧತ್ವ. 40 ವರ್ಷಗಳ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ ಬಹಳ ತಡವಾಗಿ ಪತ್ತೆಯಾಗುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ. ಕಣ್ಣಿನ ಗುಡ್ಡೆಯ ಒಳಗಿನ ಒತ್ತಡ (ಇಂಟ್ರಾ ಆಕ್ಯುಲರ್‌ ಪ್ರಷರ್‌) ಹಲವಾರು ಕಾರಣಗಳಿಂದ ಹೆಚ್ಚಾದಾಗ ದೃಷ್ಟಿಯ ನರ ನಿಧಾನವಾಗಿ ಬಲಹೀನವಾಗುತ್ತದೆ. ಕ್ರಮೇಣ ದೃಷ್ಟಿ ಕಡಿಮೆಯಾಗಿ ಕೊನೆಗೆ ಶಾಶ್ವತ ಅಂಧತ್ವ ಉಂಟಾಗುತ್ತದೆ. ಸಕ್ಕರೆ ರೋಗಿಗಳಲ್ಲಿ ಈ ಕಾಯಿಲೆ ಹೆಚ್ಚಾಗಿ ಬರುತ್ತದೆ. ನಿಧಾನವಾಗಿ ದೃಷ್ಟಿ ಮಂಜಾಗುತ್ತದೆ. ಗ್ಲುಕೋಮಾವನ್ನು ಕಣ್ಣಿನ ಪೊರೆಯೆಂದು ಪರಿಗಣಿಸಿ ಚಿಕಿತ್ಸೆ ನೀಡುವ ಸಾಧ್ಯತೆ ಇರುತ್ತದೆ. 40 ವರ್ಷಗಳ ನಂತರ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ನೇತ್ರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು.

Advertisement

ಮೆಳ್ಳಗಣ್ಣು ಅದೃಷ್ಟ ಎಂದೇ ಅನೇಕರು ಭಾವಿಸಿದ್ದಾರೆ. ಆದರೆ ಮೆಳ್ಳಗಣ್ಣಿಗೆ ಚಿಕಿತ್ಸೆಯಿದೆ. ಸಣ್ಣ ವಯಸ್ಸಿನಲ್ಲೇ ಮೆಳ್ಳಗಣ್ಣಿಗೆ ಚಿಕಿತ್ಸೆ ಮಾಡಿದರೆ ಒಳ್ಳೆಯದು. ಮೆಳ್ಳಗಣ್ಣಿನಿಂದ ಉಂಟಾಗುವ ಅಂಧತ್ವವನ್ನು ಅಂಬ್ಲಿಯೋಪೊಯ ಎಂದು ಕರೆಯಲಾಗುತ್ತದೆ. ಇದರಿಂದ ಮಗು ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮಗು ಹುಟ್ಟಿದ 6 ತಿಂಗಳ ನಂತರ ಮೆಳ್ಳಗಣ್ಣು ಇರುವ ಎಲ್ಲ ಮಕ್ಕಳ ಕಣ್ಣು ತಪಾಸಣೆ ಮಾಡಿಸಬೇಕು. ಶಸ್ತ್ರಚಿಕಿತ್ಸೆಯಿಂದ ಎರಡೂ ಕಣ್ಣುಗಳು ಏಕಕಾಲಕ್ಕೆ ನೋಡಲು ಸಾಧ್ಯವಾಗುವಂತೆ ಮಾಡಬಹುದಾಗಿದೆ. ಕೆಲವರು ದಪ್ಪ ಚಶ್ಮಾ ಧರಿಸಲು ಇಷ್ಟವಿಲ್ಲದವರು ಲೇಸರ್‌ ಚಿಕಿತ್ಸೆಯಿಂದ ಚಶ್ಮಾ ಇಲ್ಲದೇ ಸ್ಪಷ್ಟ ದೃಷ್ಟಿ ಪಡೆಯಬಹುದಾಗಿದೆ. ಕಣ್ಣಿನ ಗುಡ್ಡೆಯ ಮೇಲೆ ಬೆಳಗ್ಗೆಯಿಂದ ರಾತ್ರಿವರೆಗೆ ಧರಿಸುವ ಸ್ಪರ್ಷಮಸೂರ (ಕಾಂಟ್ಯಾಕ್ಟ್ ಲೆನ್ಸ್‌) ಸುಲಭ ಪರಿಹಾರ. ಇದು ಅತ್ಯಂತ ಸರಳ ಚಿಕಿತ್ಸೆಯಾಗಿದ್ದು, ಬರೀ ಕಣ್ಣಿನಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ವಯಸ್ಸು ಹೆಚ್ಚಾದಂತೆ ಅಕ್ಷಿಪಟಲ ಬಲಹೀನಗೊಳ್ಳುತ್ತದೆ. ಇದನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವುದು ಸೂಕ್ತ. ಕಣ್ಣಿನಲ್ಲಿಯೇ ಕೆಲವು ಇಂಜೆಕ್ಷನ್‌ಗಳನ್ನು ನೀಡುವ ಮೂಲಕ ಅಕ್ಷಿಪಟಲ ಬಲಹೀನಗೊಳ್ಳದಂತೆ ತಡೆಯಬಹುದಾಗಿದೆ.

ಲೋ ವಿಜನ್‌ ಏಡ್‌ ಎಂಬ ನೂತನ ತಂತ್ರಜ್ಞಾನ ದೃಷ್ಟಿ ದೋಷವಿರುವವರಿಗೆ ವರದಾನವಾಗಿದೆ. ಸಣ್ಣ ಅಕ್ಷರಗಳನ್ನು ಓದಲಾಗದ ಮಕ್ಕಳಿಗೆ ಇದು ಪೂರಕವಾಗಿದೆ. ಕರಿಗುಡ್ಡೆ ತೆಳ್ಳಗಾಗುವುದರಿಂದ ಉಂಟಾಗುವ ಸಮಸ್ಯೆಗೂ ಪರಿಹಾರವಿದ್ದು, ವಿಶೇಷ ಕಾಂಟ್ಯಾಕ್ಟ್ ಲೆನ್ಸ್‌ ಅಳವಡಿಸಬಹುದಾಗಿದೆ. ಕಾಲೆಜಿನ್‌ ಕ್ರಾಸ್‌ ಲಿಂಕಿಂಗ್‌ ಚಿಕಿತ್ಸೆಯಿಂದ ದೃಷ್ಟಿ ಸುಧಾರಿಸಬಹುದಾಗಿದೆ.

ನೇತ್ರದಾನ ಮಹಾದಾನವಾಗಿದ್ದು, ಇದರಿಂದ ಕಾರ್ನಿಯಾ ಅಂಧತ್ವ ಹೊಂದಿದವರಿಗೆ ದೃಷ್ಟಿ ನೀಡಲು ಸಾಧ್ಯವಿದೆ. ಜಗತ್ತಿನಲ್ಲಿರುವ ಅಂಧರಲ್ಲಿ ಶೇ. 40 ಜನರು ನಮ್ಮ ದೇಶದಲ್ಲಿದ್ದಾರೆ. ಭಾರತದಲ್ಲಿರುವ 15 ಮಿಲಿಯನ್‌ ಅಂಧರಲ್ಲಿ 3 ಮಿಲಿಯನ್‌ ಅಂಧರು ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ನೇತ್ರದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಧಾರ್ಮಿಕ ಹಾಗೂ ಸಾಮಾಜಿಕ ಮೂಢನಂಬಿಕೆಗಳನ್ನು ನಿವಾರಿಸಿ ನೇತ್ರದಾನವನ್ನು ಸಾಮಾಜಿಕ ಬದ್ಧತೆ ಎಂಬ ಮನೋಭಾವ ಮೂಡಿಸಬೇಕಿದೆ.

“ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ’ ಎಂಬಂತೆ ನಮ್ಮ ಜ್ಞಾನೇಂದ್ರಿಯಗಳಲ್ಲಿ ದೃಷ್ಟಿದಾಯಕ ನೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಜಗತ್ತನ್ನು ನೋಡಲು ನಮಗೆ ಕಣ್ಣುಗಳು ಬೇಕು. ಆದ್ದರಿಂದ ಕಣ್ಣುಗಳ ರಕ್ಷಣೆಗೆ ಆದ್ಯತೆ ನೀಡುವುದು ಅವಶ್ಯವಾಗಿದೆ. ಕಣ್ಣುಗಳ ಆರೋಗ್ಯವನ್ನು ಕಡೆಗಣಿಸುತ್ತ ಮಿತಿ ಮೀರಿದ ಹಂತದಲ್ಲಿ ಕಣ್ಣಿನ ಆಸ್ಪತ್ರೆಗೆ ಬರುವವರ ಸಂಖ್ಯೆ ಅಧಿಕ. ನಿಯಮಿತವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುತ್ತ ಬಂದರೆ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನೇತ್ರ ಚಿಕಿತ್ಸಾ ಪದ್ಧತಿಯಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ನೂತನ ತಂತ್ರಜ್ಞಾನ ಸಹಾಯದಿಂದ ಕಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಾಧ್ಯವಾಗಿದೆ. ಮಕ್ಕಳು ಹಲವಾರು ಕಾರಣಗಳಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತವೆ. ಅವುಗಳಲ್ಲಿ ಪಟಾಕಿ ಅನಾಹುತಗಳೂ ಸೇರಿವೆ. ಸುಣ್ಣ ಸಿಡಿದು ಹಲವಾರು ಮಕ್ಕಳು ಕಣ್ಣು ಕಳೆದುಕೊಳ್ಳುತ್ತಾರೆ.

ಮನೆಯಲ್ಲಿನ ಹಿರಿಯರು ಸುಣ್ಣದ ಚೀಟು ತರಲು ಮಕ್ಕಳನ್ನು ಅಂಗಡಿಗಳಿಗೆ ಕಳಿಸುತ್ತಾರೆ. ಆದರೆ ಹುಡುಗಾಟ ಸ್ವಭಾವದ ಮಕ್ಕಳು ಆಟವಾಡುತ್ತ ಸುಣ್ಣದ ಚೀಟಿಯನ್ನು ಹಿಚುಕಿದಾಗ ಅಕಸ್ಮಾತ್‌ ಆಗಿ ಅದು ಕಣ್ಣುಗಳಿಗೆ ಬಿದ್ದರೆ ಕಣ್ಣುಗಳು ಕಳೆದು ಹೋಗುವ ಸಾಧ್ಯತೆ ಹೆಚ್ಚು. ಇದನ್ನು ಲೈಮ್‌ಬರ್ನ್ ಎಂದು ಕರೆಯಲಾಗುತ್ತದೆ. ಇಂಥ ಅನಾಹುತಗಳನ್ನು ತಡೆಯಲು ಸುಣ್ಣದ ಚೀಟಿಯ ಬದಲು ಸುಣ್ಣವನ್ನು ಡಬ್ಬದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸುವುದು ಅವಶ್ಯ. ಇಲ್ಲದಿದ್ದರೆ ಮಕ್ಕಳು ಜೀವನ ಪೂರ್ತಿ ದೃಷ್ಟಿಯಿಲ್ಲದೇ ಬದುಕಬೇಕಾಗುತ್ತದೆ.

ಲ್ಯಾಬೋರೇಟರಿಗಳಲ್ಲಿ ಕೆಲಸ ಮಾಡುವವರು ಕೆಲವೊಮ್ಮೆ ಕಣ್ಣಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆಯಿರುತ್ತದೆ. ಸುರಕ್ಷಾ ಸಾಧನ ಬಳಸದಿದ್ದರಿಂದ ಆ್ಯಸಿಡ್‌ ಸಿಡಿದು ಕಣ್ಣು ಕಳೆದುಕೊಂಡ ಘಟನೆಗಳು ನಡೆಯುತ್ತವೆ. ಇನ್ನು ವೆಲ್ಡಿಂಗ್‌ ಶಾಪ್‌ನಲ್ಲಿ ಕೇವಲ ವೆಲ್ಡಿಂಗ್‌ ಮಾಡುವವರಷ್ಟೇ ಅಲ್ಲ, ಹತ್ತಿರದಿಂದ ವೆಲ್ಡಿಂಗ್‌ ನೋಡುವವರು ಕೂಡ ಕಣ್ಣಿಗೆ ಚಸ್ಮಾ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಲೋಹದ ಅತಿ ಸೂಕ್ಷ್ಮ ತುಂಡುಗಳು ಕಣ್ಣಿನೊಳಗೆ ಸೇರಿ ಹಾನಿ ಮಾಡುವ ಸಾಧ್ಯತೆ ಇರುತ್ತದೆ.

ರೋಗಗಳ ರಾಜ ಎಂದೇ ಕರೆಯುವ ಡಯಾಬಿಟಿಸ್‌ ಕಣ್ಣಿನ ಆರೋಗ್ಯ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ವೈದ್ಯಕೀಯ ಪದ್ಧತಿಯಲ್ಲಿ ಡಯಾಬಿಟಿಕ್‌ ರೆಟಿನೋಪಥಿ ಎಂದು ಕರೆಯಲಾಗುತ್ತದೆ.ಅಕ್ಷಿಪಟಲದಲ್ಲಿನ ರಕ್ತನಾಳಗಳು ಸಕ್ಕರೆ ಕಾಯಿಲೆ ಪ್ರಭಾವಕ್ಕೊಳಗಾಗಿ ರೋಗಗ್ರಸ್ತವಾಗುತ್ತವೆ. ಸಣ್ಣ ರಕ್ತನಾಳಗಳು ಒಡೆದು ಹೋಗುತ್ತವೆ. ಅಕ್ಷಿಪಟಲ ಶಕ್ತಿ ಕಳೆದುಕೊಳ್ಳುತ್ತ ಹೋಗುತ್ತದೆ. ಮಧುಮೇಹ ರೋಗಿಗಳು ಕಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರು ಜೀವನ ಪೂರ್ತಿ ಕಣ್ಣುಗಳ ಆರೈಕೆ ಮಾಡುತ್ತಿರಬೇಕು. ಲೇಸರ್‌ ಚಿಕಿತ್ಸೆ ಮೂಲಕ ಕಣ್ಣು ಬಲಹೀನಗೊಳ್ಳದಂತೆ ತಡೆಯಬಹುದಾಗಿದೆ.

ಗ್ಲುಕೋಮಾ (ಕಾಚ್‌ಬಿಂದು) ರೋಗಿಗೆ ಯಾವುದೇ ಸುಳಿವನ್ನೂ ನೀಡದೇ ನಿಧಾನವಾಗಿ ಆವರಿಸುವ ಅಂಧತ್ವ. 40 ವರ್ಷಗಳ ನಂತರ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆ ಬಹಳ ತಡವಾಗಿ ಪತ್ತೆಯಾಗುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ. ಕಣ್ಣಿನ ಗುಡ್ಡೆಯ ಒಳಗಿನ ಒತ್ತಡ (ಇಂಟ್ರಾ ಆಕ್ಯುಲರ್‌ ಪ್ರಷರ್‌) ಹಲವಾರು ಕಾರಣಗಳಿಂದ ಹೆಚ್ಚಾದಾಗ ದೃಷ್ಟಿಯ ನರ ನಿಧಾನವಾಗಿ ಬಲಹೀನ ವಾಗುತ್ತದೆ. ಕ್ರಮೇಣ ದೃಷ್ಟಿ ಕಡಿಮೆಯಾಗಿ ಕೊನೆಗೆ ಶಾಶ್ವತ ಅಂಧತ್ವ ಉಂಟಾಗುತ್ತದೆ. ಸಕ್ಕರೆ ರೋಗಿಗಳಲ್ಲಿ ಈ ಕಾಯಿಲೆ ಹೆಚ್ಚಾಗಿ ಬರುತ್ತದೆ. ನಿಧಾನವಾಗಿ ದೃಷ್ಟಿ ಮಂಜಾಗುತ್ತದೆ. ಗುÉಕೋಮಾವನ್ನು ಕಣ್ಣಿನ ಪೊರೆಯೆಂದು ಪರಿಗಣಿಸಿ ಚಿಕಿತ್ಸೆ ನೀಡುವ ಸಾಧ್ಯತೆ ಇರುತ್ತದೆ. 40 ವರ್ಷಗಳ ನಂತರ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ನೇತ್ರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು.

ಮೆಳ್ಳಗಣ್ಣು ಅದೃಷ್ಟ ಎಂದೇ ಅನೇಕರು ಭಾವಿಸಿದ್ದಾರೆ. ಆದರೆ ಮೆಳ್ಳಗಣ್ಣಿಗೆ ಚಿಕಿತ್ಸೆಯಿದೆ. ಸಣ್ಣ ವಯಸ್ಸಿನಲ್ಲೇ ಮೆಳ್ಳಗಣ್ಣಿಗೆ ಚಿಕಿತ್ಸೆ ಮಾಡಿದರೆ ಒಳ್ಳೆಯದು. ಮೆಳ್ಳಗಣ್ಣಿನಿಂದ ಉಂಟಾಗುವ ಅಂಧತ್ವವನ್ನು ಅಂಬ್ಲಿಯೋಪೊಯ ಎಂದು ಕರೆಯಲಾಗುತ್ತದೆ. ಇದರಿಂದ ಮಗು ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮಗು ಹುಟ್ಟಿದ 6 ತಿಂಗಳ ನಂತರ ಮೆಳ್ಳಗಣ್ಣು ಇರುವ ಎಲ್ಲ ಮಕ್ಕಳ ಕಣ್ಣು ತಪಾಸಣೆ ಮಾಡಿಸಬೇಕು. ಶಸ್ತ್ರಚಿಕಿತ್ಸೆಯಿಂದ ಎರಡೂ ಕಣ್ಣುಗಳು ಏಕಕಾಲಕ್ಕೆ ನೋಡಲು ಸಾಧ್ಯವಾಗುವಂತೆ ಮಾಡಬಹುದಾಗಿದೆ. ಕೆಲವರು ದಪ್ಪ ಚಶ್ಮಾ ಧರಿಸಲು ಇಷ್ಟವಿಲ್ಲದವರು ಲೇಸರ್‌ ಚಿಕಿತ್ಸೆಯಿಂದ ಚಶ್ಮಾ ಇಲ್ಲದೇ ಸ್ಪಷ್ಟ ದೃಷ್ಟಿ ಪಡೆಯಬಹುದಾಗಿದೆ. ಕಣ್ಣಿನ ಗುಡ್ಡೆಯ ಮೇಲೆ ಬೆಳಗ್ಗೆಯಿಂದ ರಾತ್ರಿವರೆಗೆ ಧರಿಸುವ ಸ್ಪರ್ಷಮಸೂರ (ಕಾಂಟ್ಯಾಕ್ಟ್ ಲೆನ್ಸ್‌) ಸುಲಭ ಪರಿಹಾರ. ಇದು ಅತ್ಯಂತ ಸರಳ ಚಿಕಿತ್ಸೆಯಾಗಿದ್ದು, ಬರೀ ಕಣ್ಣಿನಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ವಯಸ್ಸು ಹೆಚ್ಚಾದಂತೆ ಅಕ್ಷಿಪಟಲ ಬಲಹೀನಗೊಳ್ಳುತ್ತದೆ. ಇದನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವುದು ಸೂಕ್ತ. ಕಣ್ಣಿನಲ್ಲಿಯೇ ಕೆಲವು ಇಂಜೆಕ್ಷನ್‌ಗಳನ್ನು ನೀಡುವ ಮೂಲಕ ಅಕ್ಷಿಪಟಲ ಬಲಹೀನಗೊಳ್ಳದಂತೆ ತಡೆಯಬಹುದಾಗಿದೆ.
ಲೋ ವಿಜನ್‌ ಏಡ್‌ ಎಂಬ ನೂತನ ತಂತ್ರಜ್ಞಾನ ದೃಷ್ಟಿ ದೋಷವಿರುವವರಿಗೆ ವರದಾನವಾಗಿದೆ. ಸಣ್ಣ ಅಕ್ಷರಗಳನ್ನು ಓದಲಾಗದ ಮಕ್ಕಳಿಗೆ ಇದು ಪೂರಕವಾಗಿದೆ. ಕರಿಗುಡ್ಡೆ ತೆಳ್ಳಗಾಗುವುದರಿಂದ ಉಂಟಾಗುವ ಸಮಸ್ಯೆಗೂ ಪರಿಹಾರವಿದ್ದು, ವಿಶೇಷ ಕಾಂಟ್ಯಾಕ್ಟ್ ಲೆನ್ಸ್‌ ಅಳವಡಿಸಬಹುದಾಗಿದೆ. ಕಾಲೆಜಿನ್‌ ಕ್ರಾಸ್‌ ಲಿಂಕಿಂಗ್‌ ಚಿಕಿತ್ಸೆಯಿಂದ ದೃಷ್ಟಿ ಸುಧಾರಿಸಬಹುದಾಗಿದೆ.
ನೇತ್ರದಾನ ಮಹಾದಾನವಾಗಿದ್ದು, ಇದರಿಂದ ಕಾರ್ನಿಯಾ ಅಂಧತ್ವ ಹೊಂದಿದವರಿಗೆ ದೃಷ್ಟಿ ನೀಡಲು ಸಾಧ್ಯವಿದೆ. ಜಗತ್ತಿನಲ್ಲಿರುವ ಅಂಧರಲ್ಲಿ ಶೇ. 40 ಜನರು ನಮ್ಮ ದೇಶದಲ್ಲಿದ್ದಾರೆ. ಭಾರತದಲ್ಲಿರುವ 15 ಮಿಲಿಯನ್‌ ಅಂಧರಲ್ಲಿ  3 ಮಿಲಿಯನ್‌ ಅಂಧರು ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ನೇತ್ರದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಧಾರ್ಮಿಕ ಹಾಗೂ ಸಾಮಾಜಿಕ ಮೂಢನಂಬಿಕೆಗಳನ್ನು ನಿವಾರಿಸಿ ನೇತ್ರದಾನವನ್ನು ಸಾಮಾಜಿಕ ಬದ್ಧತೆ ಎಂಬ ಮನೋಭಾವ ಮೂಡಿಸಬೇಕಿದೆ.

ಡಾ| ಕೆ.ವಿ.ಸತ್ಯಮೂರ್ತಿ, ಹಿರಿಯ ನೇತ್ರ ತಜ್ಞರು,
ಡಾ| ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next