Advertisement

ಗೋಡಂಬಿ ಹೆಸರಲ್ಲಿ ಕಳಪೆ ಅಡಕೆ ಆಮದು: ಕ್ರಮಕ್ಕೆ  ಒತ್ತಾಯ

05:12 PM Jul 03, 2021 | Suhan S |

ರಿಪ್ಪನ್‌ಪೇಟೆ: ದೇಶದಲ್ಲಿನ ಅಡಕೆ ವ್ಯಾಪಾರಿಗಳ ವಂಚಕರ ಜಾಲವುಗೋಡಂಬಿ ಹೆಸರಿನಲ್ಲಿಕಳಪೆ ಗುಣಮಟ್ಟದಅಡಕೆಯನ್ನು ಇಂಡೋನೇಷಿಯಾದಿಂದ ಅಮದುಮಾಡುವ ಮೂಲಕ ದೇಶದ ಅಡಕೆ ಬೆಳೆಗಾರರು ಅರ್ಥಿಕ ಸಂಕಷ್ಟದಲ್ಲಿಸಿಲುಕುವಂತೆ ಮಾಡಿದ್ದಾರೆ.  ಕಳೆಪೆ ಅಡಕೆ ಅಮದುಗಾರ ವರ್ತಕರ ಮೇಲೆ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುವಂತೆ ಶಾಸಕ ಮತ್ತು ಗೃಹಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಆಗ್ರಹಿಸಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಡಕೆವ್ಯಾಪಾರಿಗಳ ವಂಚಕರ ಜಾಲವು ಇಂಡೋನೇಷಿಯ ಮತ್ತು ವಿವಿಧದೇಶಗಳಿಂದ ಕಳಪೆ ಗುಣಮಟ್ಟದ ಅಡಕೆಗಳನ್ನು ಅಮದು ಮಾಡಿ ದೇಶದ ಅಡಕೆ ಗ್ರಾಹಕರಿಗೆ ವಂಚಿಸುವುದರ ಜೊತೆಗೆ ಸರ್ಕಾರಕ್ಕೆ ಸುಂಕದಲ್ಲಿಸಹ ಸಾವಿರಾರು ಕೋಟಿ ರೂ. ಗಳನ್ನು ವಂಚಿಸಿರುವ ಹಿನ್ನೆಲೆಯಲ್ಲಿಮುಂಬಯಿ ಉಚ್ಚ ನ್ಯಾಯಾಲಯದನಾಗಪುರ ಪೀಠದಲ್ಲಿ 16 ಸಾವಿರಕೋಟಿ ರೂ.ಗಳ ಸುಂಕದ ಅವ್ಯವಹಾರಸಾಬೀತಾದ ಕಾರಣ ಸಿಬಿಐ ತನಿಖೆಗೆ ಒಳಪಡಿಸಲಾಗಿದೆ.

ತನಿಖೆಯಲ್ಲಿಯೂ ಅರೋಪ ಸಾಬೀತಾಗಿದೆ. ದೇಶದಲ್ಲಿನಗುಣಮಟ್ಟದ ಅಡಕೆ ಮತ್ತುಅಡಕೆ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗದೆ ವಂಚಿತರನ್ನಾಗಿಸಿದೆಎಂದು ವಿಷಾದ ವ್ಯಕ್ತಪಡಿಸಿದರು.ಈ ಬಗ್ಗೆ ಕೇಂದ್ರ ಸರ್ಕಾರಪರಿಶೀಲನೆ ನಡೆಸಬೇಕು.ಕಳಪೆ ಗುಣಮಟ್ಟದ ಅಡಕೆ ಅಮದುದೇಶದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದುಈ ಕೃತ್ಯದಲ್ಲಿ ತೊಡಗಿರುವ ಕೇಂದ್ರದ ಸುಂಕದ ಅಧಿಕಾರಿಗಳು ಹಾಗೂ ಅಡಕೆ ಅಮದು ಮಾಡುವ ವಂಚಕ ವರ್ತಕರಿಗೆ ಹೊರದೇಶದಿಂದ ಅಡಕೆ ಅಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ದೇಶದ ಅಡಕೆ ಬೆಳೆಗಾರರ ಹಿತ ರಕ್ಷಣೆಗೆ ಮುಂದಾಗುವುದರಜೊತೆಗೆ ಭ್ರಷ್ಟ ಅಧಿಕಾರಿಗಳುಮತ್ತು ವಂಚಕ ಅಡಕೆ ವರ್ತಕರ ಮೇಲೆ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬೆಳ್ಳೂರು ತಿಮ್ಮಪ್ಪ,ನಂದನ್‌, ಕಗ್ಗಲಿ ಲಿಂಗಪ್ಪ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next