Advertisement

ಆಮದು ನಿಯಂತ್ರಣ; ಅಡಿಕೆ ಧಾರಣೆ ನಾಗಾಲೋಟ

12:09 AM Jan 07, 2021 | Team Udayavani |

ಪುತ್ತೂರು: ಬರ್ಮಾ ಸಹಿತ ವಿದೇಶಗಳಿಂದ ಅಡಿಕೆ ಆಮದು ನಿಯಂತ್ರಣಕ್ಕಾಗಿ ಸರಕಾರವು ಬಿಗಿ ಕ್ರಮಗಳಿಗೆ ಮುಂದಾಗಿರುವ ಬೆನ್ನಲ್ಲೇ ಅಡಿಕೆ ಧಾರಣೆ ಏರಿಕೆ ಕಂಡಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಹೊಸ ಅಡಿಕೆ, ಸಿಂಗಲ್‌, ಡಬ್ಬಲ್‌ ಚೋಲ್‌ ಧಾರಣೆ ದಾಖಲೆಯ ಹಂತಕ್ಕೆ ತಲುಪಿದೆ. ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಈಗ ಧಾರಣೆ ಏರುಗತಿಯಲ್ಲಿದೆ.

Advertisement

ವಿದೇಶದಲ್ಲೂ ಕೊರತೆ
ವಿದೇಶಗಳಿಂದ ಅಡಿಕೆ ಆಮದು ಹೆಚ್ಚಾಗಿ ಧಾರಣೆ ಕುಸಿತ ಕಾಣಲಿದೆ ಎಂಬ ಆತಂಕ ಸೃಷ್ಟಿಸಿ ಬೆಳೆಗಾರರು ಉತ್ಪನ್ನವನ್ನು ಮಾರುಕಟ್ಟೆಗೆ ಇಳಿಸುವಂತೆ ಮಾಡುವ ಮಾರುಕಟ್ಟೆ ತಂತ್ರಗಾರಿಕೆಯ ಬಗ್ಗೆ ಬೆಳೆಗಾರರು ಜಾಗೃತರಾಗಿದ್ದಾರೆ. ವಾಸ್ತವವಾಗಿ ಅಡಿಕೆ ಬೆಳೆಯುವ ವಿದೇಶಗಳಲ್ಲಿ ಉತ್ಪಾದನೆ ಕೊರತೆ ಇದೆ. 2018ಕ್ಕೆ ಹೋಲಿಸಿದರೆ ಅಲ್ಲಿ ಶೇ. 60ರಷ್ಟು ಬೆಳೆ ಕಡಿಮೆ ಇದ್ದು, ಅಲ್ಲಿಂದಲೂ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ನಿರ್ಬಂಧವೂ ಬಿಗಿಯಾಗಿದೆ. ದೇಶೀಯ ಅಡಿಕೆ ಧಾರಣೆ ಇನ್ನಷ್ಟು ಏರುವ ಆಶಾವಾದಕ್ಕೆ ಇವೆರಡು ಅಂಶಗಳು ಪೂರಕ.

ದಾಸ್ತಾನು ಕೊರತೆ ಇದೆ
ಉತ್ತರ ಭಾರತದಲ್ಲಿ ಪಾನ್‌ ಮಸಾಲಕ್ಕಾಗಿ ಮಂಗಳೂರು ಚಾಲಿ ಅಡಿಕೆಯನ್ನೇ ನೆಚ್ಚಿಕೊಳ್ಳುತ್ತಾರೆ. ಮೂರು ವರ್ಷಗಳಿಂದ ಕೊಳೆ ರೋಗ, ಪ್ರತಿಕೂಲ ವಾತಾವರಣಗಳಿಂದಾಗಿ ದಕ್ಷಿಣ ಭಾರತದಲ್ಲಿ ಅಡಿಕೆ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಹೀಗಾಗಿ ಕಾನ್ಪುರ, ಕಟಕ್‌, ರಾಜಕೋಟ್‌, ಅಹಮದಾಬಾದ್‌ ಸಹಿತ ಉತ್ತರ ಭಾರತದ ದಾಸ್ತಾನು ಕೋಠಿಗಳಲ್ಲಿ ಅಡಿಕೆ ದಾಸ್ತಾನು ಕುಸಿದಿದ್ದು, ಶೇ. 70ರಷ್ಟು ಕೊರತೆ ಇದೆ.

500 ರೂ.ನತ್ತ ಲಕ್ಷ್ಯ
ಮಾರುಕಟ್ಟೆ ತಜ್ಞರ ಪ್ರಕಾರ ಮಾರ್ಚ್‌ ವೇಳೆಗೆ ಧಾರಣೆ 500 ರೂ. ತಲುಪಿದರೂ ಅಚ್ಚರಿಯಿಲ್ಲ. ಮಾರುಕಟ್ಟೆಯಲ್ಲಿ ಇಂತಹ ಸಾಧ್ಯತೆ ಕಂಡು ಬಂದಿದೆ.

ಅಡಿಕೆಯ ಧಾರಣೆಯ ನೋಟ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಜ. 6ರಂದು ಹೊಸ ಅಡಿಕೆ ಕೆಜಿಗೆ 350 ರೂ., ಸಿಂಗಲ್‌ ಚೋಲ್‌ಗೆ 410 ರೂ., ಡಬ್ಬಲ್‌ ಚೋಲ್‌ಗೆ 410 ರೂ. ಇತ್ತು. ಈ ಕೊಯಿಲಿನ ಅಡಿಕೆ (ಹೊಸ)ಗೆ ಈ ಪ್ರಮಾಣದ ಧಾರಣೆ ಇದೇ ಮೊದಲು.

Advertisement

ಉದಯವಾಣಿ ಟೀಮ್‌

Advertisement

Udayavani is now on Telegram. Click here to join our channel and stay updated with the latest news.

Next