Advertisement

Thirthahalli: ಭೀಮನಕಟ್ಟೆ ಸಂಗಮದಲ್ಲಿ ಅವೈಜ್ಞಾನಿಕ ಯೋಜನೆ ಜಾರಿ! ರೈತರ ಪ್ರತಿಭಟನೆ

12:35 PM Sep 07, 2023 | Team Udayavani |

ತೀರ್ಥಹಳ್ಳಿ : ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೀಮನಕಟ್ಟೆ ಭೀಮೇಶ್ವರ ಸಂಗಮ ಸ್ಥಳದಲ್ಲಿ ತುಂಗಾನದಿ-ಮಾಲತಿ ನದಿ ಸೇರುತ್ತದೆ. ಈ ಸ್ಥಳಕ್ಕೆ ಪುರಾಣ ಹಿನ್ನಲೆ ಇದೆ. ಅದ್ಭುತ ಸೌಂದರ್ಯದ ಪರಿಸರ ಇದಾಗಿದೆ. ಮಾತ್ರವಲ್ಲ ಇಲ್ಲಿ ನದಿ ಪಾತ್ರದ ಸಾವಿರಾರು ರೈತರು ನದಿ ನೀರನ್ನೇ ಆಶ್ರಯಿಸಿ ಕೃಷಿಕರು ಜೀವನ ಮಾಡುತ್ತಿದ್ದಾರೆ.

Advertisement

ಇಂತಹ ಒಂದು ಸ್ಥಳದಲ್ಲಿ ಸರ್ಕಾರ ಅವೈಜ್ಞಾನಿಕವಾದ ಜಲ ಯೋಜನೆಯನ್ನು ಅನುಷ್ಠಾನಗೊಳಿಸಲು ಹೊರಟಿದೆ. ಈ ಯೋಜನೆಯಿಂದ ಇಲ್ಲಿನ ಪರಿಸರ ಹಾಳಾಗಲಿದೆ. ನದಿ ನೀರು ಬತ್ತಿ ಹೋಗಿ ರೈತರು ಸಂಕಷ್ಟಕ್ಕೆ ಈಡಾಗಲಿದ್ದಾರೆ. ಆದ್ದರಿಂದ ಸರ್ಕಾರ ಈ ತಲೆಕೆಟ್ಟಯೋಜನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ನೂರಾರು ಸಂಖ್ಯೆಯ ರೈತರು, ಪರಿಸರ ಪ್ರೇಮಿಗಳು, ಭೀಮೇಶ್ವರ ಕ್ಷೇತ್ರದ ಭಕ್ತಾದಿಗಳು ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಜಲ ಯೋಜನೆ ಎಂದರೆ ಏನು ?

ಭೀಮನಕಟ್ಟೆ ಭೀಮೇಶ್ವರ ಸಂಗಮದಲ್ಲಿ ತುಂಗಾನದಿ-ಮಾಲತಿ ನದಿ ಸಂಗಮವಾಗುತ್ತದೆ. ಇಲ್ಲಿ ವರ್ಷ ಪೂರ್ತಿ ನೀರು
ಸಮೃದ್ಧವಾಗಿರುತ್ತದೆ. ರಾಜ್ಯ ಸರ್ಕಾರ ಇಡೀ ತೀರ್ಥಹಳ್ಳಿ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸಲು ಈಗ ಒಂದು ಜಲಯೋಜನೆ ಸಿದ್ಧಪಡಿಸಿದೆ. ಭೀಮೇಶ್ವರ ಸಂಗಮದಿಂದ ನೀರನ್ನು ಎತ್ತಿ ಎತ್ತರವಾದ ಪ್ರದೇಶದಲ್ಲಿ ನೀರು ಸಂಗ್ರಹ ಮಾಡಿ ಅಲ್ಲಿಂದ ತಾಲೂಕಿನ ಗ್ರಾಮೀಣ ಭಾಗಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ.

ಈ ಯೋಜನೆ ಒಂದು ವೇಳೆ ಅನುಷ್ಟಾನವಾದರೆ ದಿನದ 24 ಗಂಟೆ ಕಾಲವೂ ಭೀಮೇಶ್ವರ ಸಂಗಮದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಎತ್ತಲಾಗುತ್ತದೆ. ಈಗ ಮಳೆಗಾಲದಲ್ಲಿ ಸರಿಯಾದ ಮಳೆ ಇಲ್ಲದ ಕಾರಣ ಬೇಸಿಗೆಯಲ್ಲಿ ಇಲ್ಲೂ ಸಹ ನೀರು ಬತ್ತಿ ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ.

Advertisement

ಒಂದೇ ಕಡೆ ನೀರೆತ್ತುವುದು ಬೇಡ: ರೈತರ ಆಗ್ರಹ

ಈ ಪ್ರತಿಭಟನೆ ಕೈಗೊಂಡಿರುವ ರೈತರು ಹೇಳುವುದೇನೆಂದರೆ ತಾಲೂಕಿನ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ ಸರ್ಕಾರ ಒಂದೇ ಜಾಗದಿಂದ ಅಷ್ಟೂ ಸಿದ್ಧಪಡಿಸಿರುವ ಅವೈಜ್ಞಾನಿಕ ಯೋಜನೆಗೆ ನಮ್ಮ ಸಹಮತವಿಲ್ಲ. ಭೀಮೇಶ್ವರ ಸಂಗಮ ಒಂದೇ ಸ್ಥಳದಲ್ಲಿ ಇಡೀ ತಾಲೂಕಿಗಾಗುವಷ್ಟು ನೀರು ಎತ್ತಿದರೆ ನದಿ ತಿಂಗಳೊಳಗೆ ಬತ್ತಿ ಹೋಗುವುದು ಖಂಡಿತ. ಅದರ ಬದಲು ನದಿ ಹರಿವಿನ 8-10 ಸ್ಥಳಗಳಲ್ಲಿ ನೀರೆತ್ತುವ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ರೈತರ ಒತ್ತಾಯವಾಗಿದೆ.

ಭೀಮನಕಟ್ಟೆ ಪಾವಿತ್ರ್ಯತೆಗೆ ಧಕ್ಕೆ!

ಮಹಾಭಾರತದ ಪಾಂಡವರು ಈ ಜಾಗದಲ್ಲಿ ವಾಸವಿದ್ದರು.ಅವರೇ ತುಂಗಾನದಿಗೆ ಕಟ್ಟೆ ನಿರ್ಮಿಸಿದ ಕಾರಣ ಈ ಸ್ಥಳಕ್ಕೆ ಭೀಮನಕಟ್ಟೆ ಎಂಬ ಹೆಸರು ಬಂದಿದೆ. ಪಾಂಡವರೇ ಈ ಸ್ಥಳದಲ್ಲಿ ಭೀಮೇಶ್ವರ ದೇವರ ಪ್ರತಿಷ್ಠಾಪನೆ ಆಗಿದೆ ಎಂಬ ಉಲ್ಲೇಖ ಕೂಡ ಇದೆ. ಇಲ್ಲಿನ ಪ್ರಕೃತಿ ವೈಭವ ವರ್ಣಿಸಲಾಗದು. ಇಂತಹ ಜಾಗದಲ್ಲಿ ಜಲ ಯೋಜನೆಗೆ ನದಿಯನ್ನು ಬರಡು ಮಾಡಿದರೆ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ಹಾಗೂ ರೈತರಿಗೂ ಹಾನಿ ಆಗಲಿದೆ ಎಂದು ಪ್ರತಿಭಟನಾಕಾರರ ವಾದವಾಗಿದೆ.

ಇದನ್ನೂ ಓದಿ: World Cup; ಮೂವರು ಸ್ಪಿನ್ನರ್ಸ್ ಯಾಕೆ..: ಭಾರತದ ವಿಶ್ವಕಪ್ ತಂಡದ ಬಗ್ಗೆ ಮುರಳೀಧರನ್ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next