ಕೊಪ್ಪಳ: ಬಿಜೆಪಿಗೆ ಅಡ್ರೆಸ್ ಇಲ್ಲದಂತೆ ಮಾಡೋದಕ್ಕಾಗಿ ಈಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಅವರು ಇಂದು ಕೊಪ್ಪಳದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಲೋಕಸಭೆಯಲ್ಲಿ ಅಡ್ರೆಸ್ ಇರುವುದಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ನಿಗಿದಿತ ಅವಧಿಯಲ್ಲಿ ಯೋಜನೆಗಳನ್ನು ಆರಂಭ ಮಾಡುತ್ತೇವೆ. ಬಿಜೆಪಿಯವರು ಎಂದೂ ನುಡಿದಂತೆ ನಡೆದಿಲ್ಲ. ಘೋಷಣೆಗಳನ್ನು ಜಾರಿಗೊಳಿಸಿಲ್ಲ. ಇದೇ ಕಾರಣಕ್ಕೆ ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ ಎಂದರು.
ಈ ಹಿಂದೆ ಬಿಜೆಪಿ ಸರಕಾರ ಪ್ರತಿ 15 ಲಕ್ಷ ರೂಪಾಯಿ ನೀಡುವುದು. 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ ಎಲ್ಲಿ ಆಗಿದೆ ? ಸಿಎಂ ನೇತೃತ್ವದಲ್ಲಿ ಒಂದೊಂದೇ ಯೋಜನೆಗಳಿಗೆ ಚಾಲನೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಹಿಂದಿನ ಸರಕಾರದಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಈಗ ವಿದ್ಯುತ್ ಬಿಲ್ ಹೆಚ್ವು ಬಂದಿದೆ. ಸಮಸ್ಯೆಗಳ ಕುರಿತು ಸಿಎಂ ಹಾಗು ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ವಿದ್ಯುತ್ ಬಿಲ್ ಪಾವತಿಸಬೇಡಿ ಎನ್ನುವ ನಳಿನ ಕುಮಾರ ಕಟೀಲು ರಾಜ್ಯ ಅಧ್ಯಕ್ಷರಾಗುವ ಯೋಗ್ಯತೆ ಇಲ್ಲ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು ಸಂಭವಿಸಿದ ಕುಟುಂಬಗಳಿಗೆ ಸಿಎಂ ಜೊತಗೆ ಚರ್ಚಿಸಿ ಪರಿಹಾರ ಕೊಡಿಸಲಾಗುವುದು. ಕೆಲವು ಕಡೆ ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ಗುತ್ತಿಗೆದಾರ ಹಾಗು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಸಚಿವ ಶಿವರಾಜ ತಂಗಡಗಿ ಹೇಳಿದರು.