Advertisement
ಈಗಾಗಲೇ ರಾಜ್ಯಾದ್ಯಂತ ಯೋಜನೆ ಯಶ ಕಂಡಿದ್ದು, ದ.ಕ. ಜಿಲ್ಲೆಯಲ್ಲಿ ಶೇ. 90 ರಷ್ಟು ಪಕ್ರಿಯೆ ಪೂರ್ಣಗೊಂಡಿದೆ. ಪಶುಭಾಗ್ಯ ಯೋಜನೆ, ಮಹಿಳೆಯರಿಗೆ ಪಶುಸಂಗೋಪನ ಕಾರ್ಯಕ್ರಮ, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಯಲ್ಲಿ ಜಿಲ್ಲೆಯ 1,342 ಫಲಾನುಭವಿಗಳಿಗೆ 293.74 ಲಕ್ಷ ರೂ. ಹಣ ಈಗಾಗಲೇ ಜಿಲ್ಲೆಗೆ ಅನುದಾನ ಲಭಿಸಿದೆ. ಹಣ ವಾಣಿಜ್ಯ ಬ್ಯಾಂಕ್ ಗಳಿಗೆ ನೇರ ಜಮೆಯಾಗಿದ್ದು, ತಾಲೂಕು ವ್ಯಾಪ್ತಿಯ ಕೆಲವೆಡೆ ಅನುಷ್ಠಾನ ಪ್ರಕ್ರಿಯೆ ಕೊನೇ ಹಂತದಲ್ಲಿದೆ.
ಯೋಜನೆಯಡಿ ರಾಜ್ಯವ್ಯಾಪಿ ವಾಣಿಜ್ಯ ಬ್ಯಾಂಕ್‌ಗಳಿಂದ 1.20 ಲಕ್ಷ ರೂ.ಗಳವರೆಗೆ ಗರಿಷ್ಠ ಸಾಲ ಪಡೆದು ಸಣ್ಣ-ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ ಘಟಕ ಸ್ಥಾಪಿಸಲು ಪ. ಜಾತಿ- ಪಂಗಡದವರಿಗೆ ಶೆ. 50ರಷ್ಟು ಹಾಗೂ ಇತರ ಜನಾಂಗದವರಿಗೆ ಶೆ. 25 ಸಹಾಯಧನ ಒದಗಿಸಲಾಗಿದೆ. ಈಗಾಗಲೇ ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು 5 ತಾ|ಗಳಲ್ಲಿ ಕಳೆದ ಡಿಸೆಂಬರ್ ಅಂತ್ಯಕ್ಕೆ ಆಯ್ಕೆ ಸಮಿತಿ ಫಲಾನುಭವಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದರಿಂದ ಸಂಪೂರ್ಣ ಅನುದಾನ ಬಳಸುವಲ್ಲಿ ಯಶಸ್ವಿಯಾಗಿದೆ.
Related Articles
19 ವಿವಿಧ ಯೋಜನೆಗಳ ಮುಖಾಂತರ ಫಲಾನುಭವಿಗಳಿಗೆ ಹೈನುಗಾರಿಕೆ, ಕುರಿ/ಆಡು, ಹಂದಿ, ಕರು ಘಟಕದಂತೆ ವಿಭಾಗಿಸಲಾಗಿದೆ.
Advertisement
ಹೈನುಗಾರಿಕೆ ಘಟಕ: ಒಬ್ಬರಿಗೆ ವರ್ಷದಲ್ಲಿ ಎರಡು ದನ ಖರೀದಿಗೆ ತಲಾ ರೂ. 60 ಸಾವಿರದಂತೆ 1.20 ಲಕ್ಷ ರೂ. ವೆಚ್ಚ ಭರಿಸಿದೆ. ಅನುದಾನದಲ್ಲಿ ಸಾಗಾಟ ವೆಚ್ಚ, ವಿಮೆ, 6 ತಿಂಗಳ ಮೇವು ಒಳಗೊಳ್ಳಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಶೇ. 60 ಸಾಲ ಹಾಗೂ ಶೇ. 60 ಸಾವಿರ ಸಬ್ಸಿಡಿ ನೀಡಿದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ಮಾತ್ರ ಅದರಲ್ಲೂ ವಿಧವೆಯರಿಗೆ ಅವಕಾಶ ಕಲ್ಪಿಸಿರುವುದರಿಂದ ಕಡುಬಡವರು ಯೋಜನೆಯಿಂದ ವಿಮುಖರಾಗಿದ್ದಾರೆ.
ಕುರಿ/ಮೇಕೆ ಘಟಕ: ಒಂದು ಕುಟುಂಬದ ಫಲಾನುಭವಿಗೆ 11 ಕುರಿ/ಮೇಕೆ ಘಟಕಕ್ಕೆ 67,440 ರೂ.ನಂತೆ ಸಾಲ ಒದಗಿಸಿದೆ.
ಹಂದಿ ಘಟಕ: 4 ಹಂದಿ ಘಟಕಕ್ಕೆ 1 ಲಕ್ಷ ರೂ. ಸಾಲ, ಶೇ. 75 ಸಬ್ಸಿಡಿ ನಿಗದಿ ಪಡಿಸಲಾಗಿದೆ. ಸದ್ಯಕ್ಕೆ ಒಬ್ಬರಿಗೆ 1 ಹಂದಿ ಸಾಕಣೆಗೆ ಅವಕಾಶ ಕಲ್ಪಿಸಲಾಗಿದೆ.
ಕರು ಘಟಕ: ಹೆಣ್ಣು ಕರು ಇದ್ದಲ್ಲಿ ಅದರ ಪೋಷಣೆಗೆ 18 ಸಾವಿರ ರೂ. ಖರ್ಚು ನೀಡಲಾಗುತ್ತಿದ್ದು, 13,500 ಸಬ್ಸಿಡಿ ಸಿಗಲಿದೆ. ಇದು ನೇರ ಹಾಲಿನ ಡೇರಿಯಲ್ಲಿ ಹಿಂಡಿ ವಿತರಿಸುವ ಮೂಲಕ ಫಲಾನುಭವಿಗಳಿಗೆ ತಿಂಗಳಿಗೆ 50 ಕೆ.ಜಿ. ಯಂತೆ 1 ವರ್ಷದ ವರೆಗೆ ಆಹಾರ ವಿತರಿಸುವ ಯೋಜನೆಯಾಗಿದೆ.
ಖಜಾನೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದ್ದು, ಇದಕ್ಕಾಗಿ ಯುಟಿಆರ್ ಕೋಡ್ ನೀಡಲಾಗಿದೆ. ಪಶು ಇಲಾಖೆ ಅಧಿಕಾರಿ, ಬ್ಯಾಂಕ್ ವ್ಯವಸ್ಥಾಪಕ, ಫಲಾನುಭವಿ ಸಮಕ್ಷಮ ಹಸು, ಆಡು ಖರೀದಿಸಿ ಹಣ ನೀಡಲಾಗುತ್ತಿದೆ.
ಅನುದಾನ ಸಂಪೂರ್ಣ ಬಳಕೆದ.ಕ. ಜಿಲ್ಲೆಯಲ್ಲಿ ಪಶುಭಾಗ್ಯ ಯೋಜನೆ ಯಡಿ ಅನುದಾನ ಸಂಪೂರ್ಣ ಬಳಕೆಯಾಗಿದೆ. ಆಯಾ ವಿ. ಸಭಾ ಕ್ಷೇತ್ರದ ಮೂಲಕ ಫಲಾನುಭವಿಗಳ ಆಯ್ಕೆ ಪೂರ್ಣಗೊಂಡಿದ್ದು, ಬ್ಯಾಂಕ್‌ನಲ್ಲಿ ಕೆ-2 ಕಲೆಕ್ಷನ್ ಖಾತೆಗೆ ಹಣ ಜಮೆಯಾಗಿದೆ. ಶೇ. 90ರಷ್ಟು ಯೋಜನೆ ಅನುಷ್ಠಾನಗೊಂಡಿದೆ.
– ಎಸ್. ಮೋಹನ್
ಉಪನಿರ್ದೇಶಕರು, ಪಶುಪಾಲನ
ಇಲಾಖೆ, ದ.ಕ., ಮಂಗಳೂರು ಚೈತ್ರೇಶ್ ಇಳಂತಿಲ