Advertisement

ಎಪಿಎಂಸಿಯಲ್ಲಿ ತೋಟಗಾರಿಕೆ ಉತ್ಪನ್ನ ಖರೀದಿಗೆ ಸಕಲ ವ್ಯವಸ್ಥೆ

05:29 PM May 13, 2020 | Suhan S |

ಹಳಿಯಾಳ: ಕೋವಿಡ್ ಲಾಕ್‌ ಡೌನ್‌ ಇರುವುದರಿಂದ ರೈತರಿಗೆ ಸಮಸ್ಯೆಯಾಗದಂತೆ ಹಳಿಯಾಳ ಕೃಷಿ ಉತ್ಪನ್ನ ಮಾರುಟಕ್ಟೆಯಲ್ಲಿ ತೋಟಗಾರಿಕೆ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಶ್ರೀಕಾಂತ ಘೋಕ್ಲೃಕರ ಹೇಳಿದರು.

Advertisement

ಎಪಿಎಂಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೋಟಗಾರಿಕಾ ಬೆಳೆಗಳ ಖರೀದಿ ಮತ್ತು ರಫ್ತಿಗೆ ತೀರಾ ಸಮಸ್ಯೆಯಾಗಿರುವುದನ್ನು ಮನಗಂಡು ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್‌ ಹಾಗೂ ಎಪಿಎಂಸಿ ಅಧಿಕಾರಿಗಳೊಂದಿಗೆ ಸುದೀರ್ಘ‌ ಚರ್ಚೆ ನಡೆಸಲಾಗಿದೆ. ಬಳಿಕ ರೈತರಿಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಲು ಇದೇ ಪ್ರಥಮ ಬಾರಿಗೆ ಎಪಿಎಂಸಿ ಪ್ರಾಂಗಣದಲ್ಲಿ ತೋಟಗಾರಿಕಾ ಬೆಳೆ ಖರೀದಿಗೆ ವ್ಯವಸ್ಥೆ ಕಲ್ಪಿಸಿಕೊಡುವ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಸದ್ಯ ಇಲ್ಲಿ ಮಾವು ಬೆಳೆ ಖರೀದಿಸಲು ಅನುವು ಮಾಡಿಕೊಟ್ಟಿದ್ದು, ಈಗ ಗೋಡಂಬಿಯನ್ನು ಖರೀದಿಸಲು ಪ್ರಾಂಗಣ, ತೂಕದ ಯಂತ್ರ, ನೀರಿನ ವ್ಯವಸ್ಥೆ, ಶೇಖರಣೆಗೆ ಗೋದಾಮಿನ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಸೌಲಭ್ಯ ಒದಗಿಸಲಾಗಿದೆ. ಮೇ 13ರಿಂದಲೇ ಗೋಡಂಬಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಪ್ರತಿದಿನ ಗೋಡಂಬಿ ಖರೀದಿ ದರ ಪ್ರಕಟಿಸಲಾಗುವುದು ಎಂದು ಘೋಕ್ಲೃಕರ್‌ ಮಾಹಿತಿ ನೀಡಿದರು.

ಎಪಿಎಂಸಿ ಕಾರ್ಯದರ್ಶಿ ಎಸ್‌.ಎಸ್‌. ಹಾವಣ್ಣವರ ಮಾತನಾಡಿ, ಇಲ್ಲಿ ಟೆಂಡರ್‌ ಇಲ್ಲದೇ ನೇರ ಖರೀದಿಗೆ ಅನುವು ಮಾಡಿಕೊಡಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಎಸ್‌.ಡಿ. ಗಿರಿಯಾಲ್‌ ಮಾತನಾಡಿ, ತಾಲೂಕಿನಲ್ಲಿ 28 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಗೋಡಂಬಿ ಬೆಳೆ ಬೆಳೆದಿದ್ದು, ಇದರಿಂದ 150 ಟನ್‌ ಹಾಗೂ ಜೋಯಿಡಾ ತಾಲೂಕು ಸೇರಿಸಿ 300 ಟನ್‌ ಗೋಡಂಬಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next