Advertisement
ಬೆಳ್ತಂಗಡಿ ತಾಲೂಕಿನಲ್ಲಿ ಶಿಶಿಲ,ಸಂಗಮ ಕ್ಷೇತ್ರ ಪಜಿರಡ್ಕ, ಕೇಲ್ಕರ ಸೇರಿದಂತೆ ನದಿ ಅಂಚಿನ ತಿರ್ಥ ಕ್ಷೇತ್ರಗಳಿವೆ. ಇಲ್ಲಿನ ಅನೇಕ ಕಡೆಗಳಲ್ಲಿ ಮತ್ಸ್ಯತೀರ್ಥವಾಗಿ ಪ್ರವಾಸಿ ಗರನ್ನು ಆಕರ್ಷಿಸುತ್ತದೆ. ಅದರಲ್ಲೂ ಪ್ರಖ್ಯಾತ ಶಿಶಿಲ ದೇವಾಲಯಕ್ಕೆ ದಿನ ನಿತ್ಯ ಭಕ್ತರು ಆಗಮಿಸುತ್ತಾರೆ. ಶಿಶಿಲ ದೇವಾಲಯದಲ್ಲಿ ಸ್ವಾಮಿಯ ದರ್ಶನ ದಂತೆ ಮೀನುಗಳಿಗೂ ಹರಕೆ ಇಲ್ಲಿ ವಿಶೇಷ. ಆದರೆ ಇಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ನಿತ್ಯ ಹರಿವು ನಿಂತಿದೆ. ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ಆಹಾರಗಳು ರಾಸಾಯನಿಕಯುಕ್ತವಾಗಿವೆ. ಅದರಲ್ಲೂ ಮತ್ಸ್ಯಗಳಿಗೆ ನೀಡುವ ಅರಳುಗಳಲ್ಲೂ
ರಾಸಾಯನಿಕ ಸೇರಿಕೊಂಡಿದೆ ಎಂಬ ಅನುಮಾನ ಮೂಡತೊಡಗಿದೆ. ಇದರ ಪರಿಣಾಮ ಶಿಶಿಲದಲ್ಲಿ ಮೀನುಗಳ
ಆಹಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಮತ್ತು ನೀರೂ ಕಲುಷಿತ ಮಾಡಬಲ್ಲ ಅರಳನ್ನು ನಿಷೇಧ ಮಾಡಲಾಗಿದೆ. ಈ ಕುರಿತು ಭಕ್ತರು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಮತ್ಸ್ಯ ಹಿತರಕ್ಷಣ
ವೇದಿಕೆ ವಿನಂತಿ ಮಾಡಿದೆ. ಹೀಗಾಗಿ ನದಿ ನೀರು ಕಲುಶಿತ ವಾಗದಂತೆ ತಾಲೂಕು ಆಡಳಿತ ಪ್ರತಿ ಗ್ರಾ.ಪಂ.ಗಳಿಗೆ ಅಗತ್ಯ ಕ್ರಮಕ್ಕೆ ಆಧ್ಯತೆ ನೀಡುವ ಅನಿವಾರ್ಯತೆಯಿದೆ. ಪ್ರವಾಸಿಗರ ಸಂಖ್ಯೆ ಕುಸಿತ
Related Articles
ಅಂಚಿನಲ್ಲಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ.
Advertisement
ತಾಲೂಕಿನಲ್ಲಿ ನದಿ ನೀರಿನಮಟ್ಟ ಕ್ಷೀಣಿಸಿರುವುದು ಕಂಡುಬಂದಿದೆ. ಗ್ರಾ.ಪಂ. ಸಹಿತ ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಅಭಾಯ ಕಂಡುಬಂದಲ್ಲಿ ಸ್ಥಳೀಯ ನಿಧಿ ಬಳಕೆ ಮಾಡಿ ನೀರಿನ ವ್ಯವಸ್ಥೆಗೆ ಸೂಚಿಸಲಾಗಿದೆ. ನದಿ ನೀರು ಕಲುಷಿತಗೊಳಿ ಸುವವರ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು.-ಪೃಥ್ವಿ ಸಾನಿಕಮ್, ತಹಶೀಲ್ದಾರ್ ನದಿಯ ಮೀನುಗಳಿಗೆ ಅತಿಯಾದ ಆಹಾರ ನೀಡುವುದರಿಂದ ನೀರು ಕಲುಷಿತವಾಗಿ ದೇವರ ಮೀನುಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಅರಿತ ದೇವಾಲಯದ ಆಡಳಿತ, ಮೀನುಗಳಿಗೆ ಭಕ್ತರು ಅರಳು ಹಾಕುವುದನ್ನು ನಿಷೇಧ ಮಾಡಿದೆ. * ಜಯರಾಮ ನೆಲ್ಲಿತ್ತಾಯ, ಮತ್ಸ್ಯ ಹಿತರಕ್ಷಣಾ ವೇದಿಕೆ
ಚೈತ್ರೇಶ್ ಇಳಂತಿಲ