Advertisement

ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಆಗ್ರಹ

11:29 PM Jun 23, 2019 | sudhir |

ಅಡೂರು: 1975-77ರ ಅವಧಿಯ ತುರ್ತು ಪರಿಸ್ಥಿತಿಯ ಸಂದರ್ಭ ದಲ್ಲಿ ಪೊಲೀಸರಿಂದ ಸಾಕಷ್ಟು ದಬ್ಟಾಳಿಕೆ ಅನುಭವಿಸಿ, ಕೌಟುಂಬಿಕವಾಗಿ, ಸಾಮಾಜಿಕ ವಾಗಿ ಹಾಗೂ ಆರ್ಥಿಕವಾಗಿ ಬಳಲಿದ್ದ ನಾಗರಿಕರಿಗೆ ಯೋಗ್ಯ ಪರಿಹಾರ ರೂಪವಾಗಿ ಪಿಂಚಣಿ ವ್ಯವಸ್ಥೆಯನ್ನು ಅನುಷ್ಠಾನ ಗೊಳಿಸಲು ಅಡೂರು ಗ್ರಾಮಾಧಿಕಾರಿಗಳ ಮೂಲಕ ಕೇರಳ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ತುರ್ತು ಪರಿಸ್ಥಿತಿ ಹೋರಾಟ ಸಮಿತಿಯ ಜಿಲ್ಲಾ ಸಮಿತಿಯ ನಿರ್ದೇಶನದಂತೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಅಡೂರಿನ ನಾಗರಿಕರು ಪಿಂಚಣಿ ಯೋಜನೆಯನ್ನು ಆರಂಭಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.

ಮನವಿಯನ್ನು ಚರಕ್ಕಂಡ ಗಣೇಶ ರಾವ್‌ ಅವರು ಗ್ರಾಮಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪ್ರಭಾಕರ ನಾಯಕ್‌ ಮಂಡೆಬೆಟ್ಟು, ಅಪ್ಪಕುಂಞ ಮಾಸ್ತರ್‌ ತಲ್ಪಚ್ಚೇರಿ, ಕುಂಞರಾಮ ತಲ್ಪಚ್ಚೇರಿ ಹಾಗೂ ಪ್ರಕಾಶ್‌ ಪಾಂಙಣ್ಣಾಯ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next