ಹಳೆಯಂಗಡಿ: ಸೇವೆ ಯಲ್ಲಿ ಮಾನವೀಯ ಮೌಲ್ಯವನ್ನು ಅಳವಡಿಸಿ ಕೊಂಡಲ್ಲಿ ಮಾತ್ರ ಪರಿಣಾಮಕಾರಿಯಾಗಿ ಸಮಾಜದಲ್ಲಿ ತೊಡಗಿಸಿಕೊಳ್ಳಬಹುದು. ಈ ಬಾರಿ ಲಯನ್ಸ್ ಇಂಟರ್‌ನ್ಯಾಷನಲ್ 200 ಬಿಲಿಯ ಜನರನ್ನು ತಲುಪುವ ಬಹುದೊಡ್ಡ ಗುರಿ ಹೊಂದಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ. ಕವಿತಾ ಎಸ್. ಶಾಸ್ತ್ರಿ ಹೇಳಿದರು.
ಸುರತ್ಕಲ್‌ನ ಸೂರಜ್ ಇಂಟರ್‌ನ್ಯಾಶನಲ್‌ನಲ್ಲಿ ಜರಗಿದ ಹಳೆಯಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಅವರು ಪದಗ್ರಹಣ ಅಧಿಕಾರಿಯಾಗಿ ಮಾತ ನಾಡಿದರು.
ನೂತನ ಲಯನ್ಸ್ ಅಧ್ಯಕ್ಷರಾಗಿ ವಾಸು ನಾಯ್ಕ ಮತ್ತು ಅವರ ತಂಡ ಹಾಗೂ ಲಿಯೋ ಅಧ್ಯಕ್ಷರಾಗಿ ನಿಖೀಲ್ ವೈ.ದೇವಾಡಿಗ ತಂಡಕ್ಕೆ ಪ್ರಮಾಣವಚನ ಬೋಧಿಸಲಾಯಿತು. ನಿರ್ಗಮನ ಅಧ್ಯಕ್ಷ ಬ್ರಿಜೇಶ್ ಕುಮಾರ್ ಹಳೆಯಂಗಡಿ ಲಯನ್ಸ್ ಪ್ರಸ್ತುತ ವರ್ಷದಲ್ಲಿ ಗಳಿಸಿದ ಜಿಲ್ಲೆ ಯಲ್ಲಿ ಅತ್ಯುತ್ತಮ ಕ್ಲಬ್ ಪ್ರಶಸ್ತಿಗೆ ಸಹಕಾರ ನೀಡಿದ ಸದಸ್ಯರು ಹಾಗೂ ಸಾರ್ವಜನಿಕರನ್ನು ಗೌರವಿಸಿದರು.
ಲಯನ್ಸ್ ನೆರವು-ಗೌರವ
ವೈದ್ಯಕೀಯ ಸಹಾಯವಾಗಿ ಹಳೆ ಯಂಗಡಿ ಕದಿಕೆ ನಿವಾಸಿ ಸಾಹಿರಾ ಹಾಗೂ ಅಂಗವಿಕಲ ಯುವಕ ಪ್ರವೀಣ್ ಅವರಿಗೆ ಧನಸಹಾಯ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಮ್ಯಾ ಕರ್ಕೇರ, ಮೇಘಾ ಕೆ., ಅಂಕಿತಾ, ಶೋಭಿತಾ ಅವರಿಗೆ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಸಹಕಾರ, ಹಳೆಯಂಗಡಿಯ ಮೊಹಮ್ಮದ್ ಶರೀಫ್ತನ್ನ ಎಂಜಿನಿಯರಿಂಗ್ ಪ್ರಾಜೆಕ್ಟ್ ಆಗಿ ನಿರ್ಮಿಸಿದ ಈಕೋ ಮೊಬೈಲ್ ಅಂತಾರಾಷ್ಟ್ರೀಯ ಸ್ಪರ್ಧೆಯ ಪ್ರಶಸ್ತಿಗಾಗಿ ಗೌರವ, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಹಾಗೂ ನಿರ್ಗಮನ ಪ್ರಾಂತ್ಯ ಅಧ್ಯಕ್ಷ ಮಹಮ್ಮದ್ ಕುಂಞಿ ಅವರನ್ನು ಸಮ್ಮಾನಿಸಲಾಯಿತು.
ಮಾಜಿ ಜಿಲ್ಲಾ ಗವರ್ನರ್ ಸಂತೋಷ್ ಕುಮಾರ್ ಶಾಸ್ತ್ರಿ, ಜಿಲ್ಲಾ ಸಂಪುಟ ಸದಸ್ಯ ವಸಂತ ಶೆಟ್ಟಿ, ಪ್ರಾಂತ್ಯ ಅಧ್ಯಕ್ಷ ಓಸ್ವಲ್ಡ್ ಡಿ’ಸೋಜಾ, ವಲಯ ಅಧ್ಯಕ್ಷರಾದ ರಮೇಶ್ ಬಂಗೇರ ಮತ್ತು ಸುಧಾಕರ ಶೆಟ್ಟಿ, ಗವರ್ನರ್ ಅವರ ವಿಶೇಷ ಪ್ರತಿನಿಧಿ ಜಗದೀಶ್ ಹೊಳ್ಳ, ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ನಾನಿಲ್, ಕಾರ್ಯದರ್ಶಿ ರಾಕೇಶ್ ಪಿ. ಸಾಲ್ಯಾನ್,ಕೋಶಾ ಧಿಕಾರಿ ಗಿರೀಶ್ ಎಚ್. ಎಂ., ಲಿಯೋ ಕಾರ್ಯದರ್ಶಿ ಸುಭಾಶ್ ಬಿ.ಸಾಲ್ಯಾನ್, ಕೋಶಾ ಧಿಕಾರಿ ಪ್ರಜ್ವಲ್ ಜೆ. ಸುವರ್ಣ, ಲಯನ್ಸ್ ಕಾರ್ಯದರ್ಶಿ ಶರತ್.ಪಿ., ಲಿಯೋ ನಿರ್ಗಮನ ಅಧ್ಯಕ್ಷ ಹೇಮಂತ್ ಯು.ಪೂಜಾರಿ, ಕೋಶಾ ಧಿಕಾರಿ ಶುಭ್ರತ್ ಬಿ.ಸಾಲ್ಯಾನ್, ಮೂಲ್ಕಿ ಲಯನ್ಸ್ ಅಧ್ಯಕ್ಷೆ ಶಿಲ್ಪಾ ಪ್ರಬೋಧ್ ಕುಡ್ವ,ಕಿನ್ನಿಗೋಳಿ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಮುಚ್ಚಾರು ನೀರುಡೆ, ಅಧ್ಯಕ್ಷ ಗಣೇಶ್ ವಿ.ಶೆಟ್ಟಿ, ಸುರತ್ಕಲ್ ಕ್ಲಬ್ ಅಧ್ಯಕ್ಷ ಹೊಸಕೋಟೆ ರಾಮ ಕೆ.ಅಯ್ಯಪ್ಪ, ವಿಸ್ತರಣಾಧಿಕಾರಿ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬ್ರಿಜೇಶ್ ಕುಮಾರ್ ಸ್ವಾಗತಿಸಿದರು. ರಾಕೇಶ್ ಸಾಲ್ಯಾನ್ ವಂದಿಸಿದರು. ಯಾದವ ದೇವಾಡಿಗ ನಿರೂಪಿಸಿದರು.