Advertisement

ಪುಲ್ವಾಮಾ ದಾಳಿ ಪರಿಣಾಮ ಐಎಸ್‌ಐ ಮುಖ್ಯಸ್ಥ ಬದಲು

12:37 AM Jun 18, 2019 | mahesh |

ಇಸ್ಲಾಮಾಬಾದ್‌: ಪುಲ್ವಾಮಾ ದಾಳಿ ನಂತರದಲ್ಲಿ ಗುಪ್ತಚರ ದಳದಲ್ಲಿ ಮಹತ್ವದ ಬದಲಾವಣೆಗೆ ಕೈಹಾಕಿರುವ ಪಾಕಿಸ್ತಾನ ಐಎಸ್‌ಐ ಮುಖ್ಯಸ್ಥ ನನ್ನೇ ಬದಲಿಸಿದೆ. ಲೆ.ಜ ಅಸಿಮ್‌ ಮುನೀರ್‌ ಬದಲಿಗೆ ಲೆ. ಜ ಫೈಜ್‌ ಹಮೀದ್‌ರನ್ನು ಈ ಹುದ್ದೆಗೆ ನೇಮಿಸಲಾಗಿದೆ. ಕಾಶ್ಮೀರದ ವಿಚಾರದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಅಸಿಮ್‌ ಮುನೀರ್‌ರನ್ನು ಐಎಸ್‌ಐ ಹುದ್ದೆ ಯಿಂದ ತೆಗೆದುಹಾಕಿದ್ದು, ಅತ್ಯಂತ ಅಚ್ಚರಿಯ ಬೆಳವಣಿಗೆಯಾಗಿದೆ. ಅಲ್ಲದೆ, ಅಸಿಮ್‌ ಕೇವಲ 8 ತಿಂಗಳ ಅವಧಿಗೆ ಈ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ.

Advertisement

ಮೂಲಗಳ ಪ್ರಕಾರ, ಪುಲ್ವಾಮಾ ದಾಳಿಗೂ ಮೊದಲಿನ ಹಾಗೂ ನಂತರದ ಸನ್ನಿವೇಶಗಳನ್ನು ನಿರ್ವಹಿಸಲು ಐಎಸ್‌ಐ ವಿಫ‌ಲವಾಗಿದೆ ಎಂದು ಪಾಕ್‌ ಸೇನೆ ಭಾವಿಸಿದೆ. ಆ ಅವಧಿಯಲ್ಲಿ ಐಎಸ್‌ಐ ಮುಖ್ಯಸ್ಥ ರಾಗಿದ್ದ ಅಸಿಮ್‌ ಅವರೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಪುಲ್ವಾಮಾ ದಾಳಿ ನಂತರದಲ್ಲಿ ಅಂತಾರಾಷ್ಟ್ರೀಯ ಒತ್ತಡ ವ್ಯಾಪಕವಾಗಿದ್ದು, ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದು ಪಾಕ್‌ಗೆ ಅನಿವಾರ್ಯ ಎಂಬ ಸ್ಥಿತಿ ತಂದಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next