Advertisement

ಶೋಷಣೆಯಿಂದ ಮನಸ್ಸಿಗೆ ಘಾಸಿ

10:28 AM Jul 02, 2018 | |

ಕಲಬುರಗಿ: ಶರಣರ ನಾಡು ಕಲ್ಯಾಣದ ಈ ನೆಲದಲ್ಲಿರುವ ನಾವು ಹೆಮ್ಮೆ ಪಡುವ ಬದಲು ದೌರ್ಜನ್ಯ, ಶೋಷಣೆ
ಕಂಡು ಮನಸ್ಸುಗಳು ರೋಸಿ ಹೋಗಿ ವಿಷ ಬೀಜದ ಗುಂಪಿನಲ್ಲಿ ಒಡೆದು ಹೋಗಿದ್ದೇವೆ ಎಂದು ಲೇಖಕಿ ಹಾಗೂ
ಕನ್ನಡ ಪ್ರಾಧ್ಯಾಪಕಿ ಡಾ| ಶೈಲಜಾ ಬಾಗೇವಾಡಿ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ರವಿವಾರ ಇಲ್ಲಿಯ ಕಲಾಮಂಡಳದ ಸಭಾಂಗಣದಲ್ಲಿ ನಡೆದ
115 ಕವಿಗಳು ಬರೆದ ಜಿಲ್ಲಾ ಮಟ್ಟದ ಪ್ರಾತಿನಿಧಿಕ ಕವನ ಸಂಕಲನ ಕಾವ್ಯ ಸಂಭ್ರಮ ಕೃತಿ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯ ಮಾಡಿದ ಅವರು, ಜಾತಿ ವಿಷ ಬೀಜದ ಬಿತ್ತಿರುವ ಹಿನ್ನೆಲೆಯಲ್ಲಿ ನಾವೆಲ್ಲ ದ್ವೀಪಗಳಲ್ಲಿ ಬದುಕುವಂತಾಗಿದೆ ಎಂದು ಹೇಳಿದರು.

ಈ ಭಾಗದ ಕವಿಗಳಲ್ಲಿ ಅಂತಃಶಕ್ತಿಯಿದೆ. ಹೊಸ ತಲೆಮಾರಿನ ಅರಳುತ್ತಿರುವ ಕುಸುಮಗಳ ಸುಂದರ ಪುಷ್ಟಗುತ್ಛ ಇದಾಗಿದೆ. ಪ್ರಬುದ್ಧ ಲೇಖಕರು, ಗಟ್ಟಿ ಬರಹಗಾರರು ಈ ಕವನಸಂಕಲನದಲ್ಲಿದ್ದಾರೆ ಎಂದು ಹೇಳಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಸಿದ್ದರಾಮ ಪೊಲೀಸ್‌ಪಾಟೀಲ, ಕವನಗಳು ಜನರ ಮನಸ್ಸು ಮುಟ್ಟುವಂತಾದಲ್ಲಿ ಮಾತ್ರ ಕವಿಗಳ ಶ್ರಮಕ್ಕೆ ಬೆಲೆ ಬರುತ್ತದೆ. ಹಿರಿಯ, ಕಿರಿಯ ಸಾಹಿತಿಗಳಿಗೆ ವೇದಿಕೆ ಕಲ್ಪಿಸಿರುವ ಕಾವ್ಯಸಂಭ್ರಮ ಕೃತಿ ಬೆಂಗಳೂರಿನ ಸಾಹಿತಿಗಳಿಗೂ ತಲುಪುವಂತಾಗಬೇಕು ಎಂದು ಹೇಳಿದರು. ಹಿರಿಯ ಪತ್ರಕರ್ತ ಮತ್ತು ಕಸಾಪ ಮಾಜಿ ಅಧ್ಯಕ್ಷ ಪಿ.ಎಂ. ಮಣ್ಣೂರು ಅಧ್ಯಕ್ಷತೆ ಮತ್ತು ಹೊನ್ನಕಿರಣಗಿ ಪೂಜ್ಯ ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಕಾವ್ಯಸಂಭ್ರಮ ಸಂಪಾದಕ ಬಿ.ಎಚ್‌. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅವಿಭಜಿತ ಕಲಬುರಗಿ
ಜಿಲ್ಲೆಯ 115 ಕವಿಗಳ ಕವಿತೆಗಳ ಸಂಕಲನವನ್ನು ಪ್ರಾತಿನಿಧಿಕವಾಗಿ ತರುವ ಮೂಲಕ ಇಲ್ಲಿಯ ಕಾವ್ಯಶಕ್ತಿ¿åನ್ನು
ಒಂದೆಡೆ ಸಂಗ್ರಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಕಾವ್ಯಸಂಭ್ರಮದ ಎರಡನೇ ಭಾಗವನ್ನು ಪ್ರಕಟಿಸುವುದಾಗಿ
ಹೇಳಿದರು. ಸಿಂಡಿಕೇಟ್‌ ಸದಸ್ಯ ಮಹಾಂತೇಶ ಕೌಲಗಿ, ಹಿರಿಯರಾದ ರವೀಂದ್ರ ಕರ್ಜಗಿ, ಅನಂತ ಹರಸೂರ,
ಸುಬ್ರಾವ ಕುಲಕರ್ಣಿ, ಝರಣಪ್ಪ ಚಿಂಚೋಳಿ, ಡಾ| ಎಸ್‌.ಎಸ್‌. ಗುಬ್ಬಿ, ಶಿವಕವಿ ಹಿರೇಮಠ, ಪ್ರೊ|
ಶಿವರಾಜ ಪಾಟೀಲ, ನರಸಿಂಗರಾವ ಹೇಮನೂರ, ನಾಗೇಶ ಕೊಳ್ಳಿ, ಡಾ| ಲಿಂಗರಾಜ ಶಾಸ್ತ್ರಿ, ವಿ.ಆರ್‌. ಚಾಂಬಾಳ,
ಬಿ.ಆರ್‌. ಅಣ್ಣಾಸಾಗರ, ಅಬ್ಟಾಸಲಿ ನದಾಫ್‌, ಭೀಮರಾವ ಹೇಮನೂರ, ರಾಜಶೇಖರ ಮಾಂಗ್‌, ಈರಣ್ಣ ನಾವಿ,
ಶರಣಬಸವ ಅನವಾರ ಇದ್ದರು. ಸುರೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಕಿರಣ ಪಾಟೀಲ ಅವರು ಗೀತ ಗಾಯನ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next