Advertisement

ಮಗಳ ಸಾವಿಗೆ ನ್ಯಾಯ ಕೇಳಿದಕ್ಕೆ ಶೋಷಣೆ; ಆರೋಪ

04:39 PM Jun 03, 2022 | Team Udayavani |

ಹಾವೇರಿ: ಮಗಳನ್ನು ಕೊಂದ ಆರೋಪಿಗಳನ್ನು ಬಂ ಧಿಸಬೇಕೆಂದು ದೂರು ಕೊಟ್ಟರೂ ನಮಗೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಗದಗ ಜಿಲ್ಲೆ ಕಿರಿಟಗೇರಿ ಗ್ರಾಮದ ಮೃತ ಮಹಿಳೆಯ ಕುಟುಂಬದವರು ನಗರದ ಎಸ್‌ಪಿ ಕಚೇರಿ ಎದುರು ಗುರುವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿ ನಡೆಸಲು ಎಸ್‌ಪಿ ಅವರು ಮಾಧ್ಯಮದವರನ್ನು ಆಹ್ವಾನಿಸಿದ್ದ ವೇಳೆ ಏಕಾಏಕಿ ಬಂದ ಮೃತ ಸಂಬಂಧಿಕರು ಎಸ್‌ಪಿ ಕಚೇರಿ ಎದುರು ಪೊಲೀಸರ ವಿರುದ್ಧ ಹರಿಹಾಯ್ದರು.

ಮಗಳ ಸಾವಿಗೆ ನ್ಯಾಯ ಕೇಳಿದವರ ಮೇಲೆಯೇ ಆರೋಪಿಗಳು ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ಶೋಷಣೆ ಮಾಡುತ್ತಿದ್ದಾರೆಂದು ಆರೋಪಿಸಿದರು. ಗದಗ ತಾಲೂಕು ಕಿರಿಟಗೇರಿ ಗ್ರಾಮದಿಂದ ತಿಮ್ಮೇನಹಳ್ಳಿಗೆ ಮದುವೆ ಮಾಡಿಕೊಟ್ಟಿದ್ದ ಅಮೃತ(ಸರಸ್ವತಿ) ದಾಸಣ್ಣವರ ಅವರನ್ನು 2021ರ ಡಿಸೆಂಬರ್‌ ತಿಂಗಳಲ್ಲಿ ಪತಿಯ ಮನೆಯವರು ಕೊಲೆಗೈದಿದ್ದಾರೆಂದು ಕಿರಿಟಗೇರಿ ಗ್ರಾಮದ ಯಲ್ಲಪ್ಪಗೌಡ ಮರಿಗೌಡ್ರ ದೂರು ದಾಖಲಿಸಿದ್ದರು.

ಇದರ ನಂತರ ತನಿಖೆಗೆ ಎಫ್‌ಎಸ್‌ಎಲ್‌ ವರದಿ ಬರಲಿ ಎಂದು ಮುಂದೂಡುತ್ತ ಬಂದ ನೀವು ಈಗ ಸುಳ್ಳು ದೂರು ದಾಖಲಿಸಿಕೊಂಡು ನಮ್ಮನ್ನು ಅಲೆದಾಡುವಂತೆ ಮಾಡಿದ್ದೀರಿ. ನಮಗೆ ನ್ಯಾಯ ಒದಗಿಸಿ ಕೊಡಿ ಎಂದು ಮೃತ ಅಮೃತಳ ಸಂಬಂಧಿಕರು, ಅಖೀಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಗೀತಾ ಮುಂಡರಗಿ, ಈರವ್ವ ಮುಂಡರಗಿ, ಚನ್ನವ್ವ ನಾಗನಗೌಡ ಮರಿಗೌಡ್ರ, ವೀರೇಶಗೌಡ ಮರಿಗೌಡ್ರ, ದಾನಪ್ಪಗೌಡ ಮರಿಗೌಡ್ರ, ಯಲ್ಲಪ್ಪಗೌಡ ಮರಿಗೌಡ್ರ, ಶಾಂತವ್ವ ತಡಸದ, ಸಿದ್ದರಾಮಪ್ಪ ಪಟ್ಟಣದ, ನೀಲವ್ವ ಪಟ್ಟಣದ, ಸುರೇಶ ಮುಂಡರಗಿ, ಲಲಿತಾ ಮುಂಡರಗಿ ಇತರರು ಎಸ್‌ಪಿ ಹನಮಂತರಾಯ, ಎಎಸ್‌ಪಿ ವಿಜಯಕುಮಾರ ಸಂತೋಷ ಸೇರಿ ಪೊಲೀಸರ ವಿರುದ್ಧ ಹರಿಹಾಯ್ದರು.

ಎಸ್‌ಪಿ ಕಚೇರಿ ಎದುರು ದಿಢೀರ್‌ ಗಲಾಟೆ ಆರಂಭಗೊಂಡಿದ್ದರಿಂದ ಕೆಲ ಪೊಲೀಸರು ಆಕ್ರೋಶಗೊಂಡವರನ್ನು ಸಮಾಧಾನಪಡಿಸಿ ಗಲಾಟೆ ನಿಯಂತ್ರಣಕ್ಕೆ ತಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next