ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯಿಂದಾಗಿ ವಹಿವಾಟು ನಡೆಸುವುದು ವ್ಯಾಪಾರಿಗಳಿಗೆ ಸುಲಭವಾಗಿದೆ. ವಿವಿಧ ರೀತಿಯ ತೆರಿಗೆ ಪಾವತಿ ಮಾಡುವ ಕಿರಿಕಿರಿ ತಪ್ಪಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದಾಗಿ ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಆರ್ಥಿಕತೆಗೆ ಅನುಕೂಲ ಉಂಟಾಗಲಿದೆ. ಎಲ್ಲ ವ್ಯಾಪಾರಿಗಳಿಗೂ ಮಾರುಕಟ್ಟೆ ವ್ಯಾಪ್ತಿ ಹೆಚ್ಚಾಗಿದೆ. ಇಡೀ ದೇಶವೇ ಈಗ ವ್ಯಾಪಾರಿಗೆ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ ಎಂದಿದ್ದಾರೆ.
ಜಿಡಿಪಿ 325 ಲಕ್ಷ ಕೋಟಿಗೆ ಏರಿಕೆ: ಮುಂದಿನ ಏಳು ವರ್ಷಗಳಲ್ಲಿ ಭಾರತದ ಜಿಡಿಪಿ 325 ಲಕ್ಷ ಕೋಟಿ ರೂ.ಗೆ ಏರಲಿದ್ದು, ಚೀನಾವನ್ನು ಹಿಂದಿಕ್ಕಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ. ಹಿಂದುಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮೇಳನದಲ್ಲಿ ಮಾತನಾಡಿದ ಅವರು, 2030ರ ವೇಳೆ 650 ಲಕ್ಷ ಕೋಟಿಗೆ ಭಾರತದ ಆರ್ಥಿಕತೆ ಏರಲಿದೆ ಎಂದಿದ್ದಾರೆ.
ಅಂಬಾನಿ ಬಳಿ ಹಣವೇ ಇಲ್ಲ!: ನನ್ನ ಬಳಿ ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ನಗದು ಹಣ ಎಂದೂ ಇರುವುದಿಲ್ಲ. ಕಾಲೇಜು ದಿನಗಳಲ್ಲೂ ನನ್ನ ಬಳಿ ಹಣ ಇರುತ್ತಿರಲಿಲ್ಲ. ನನ್ನ ಸುತ್ತ ಇರುವವರೇ ಹಣ ಕೊಡುತ್ತಾರೆ. ನನಗೆ ಹಣವೊಂದು ಸಂಗತಿಯೇ ಅಲ್ಲ. ಆದರೆ ನನ್ನ ಕಂಪೆನಿಯ ಮೌಲ್ಯ ನನಗೆ ಮುಖ್ಯವಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ಸೆನ್ಸೆಕ್ಸ್ ಕುಸಿತ: ಎರಡನೇ ತ್ತೈಮಾಸಿಕದ ಜಿಡಿಪಿ ಪ್ರಗತಿ ಷೇರುಪೇಟೆ ಮೇಲೆ ಯಾವ ಪರಿಣಾ ಮವನ್ನೂ ಬೀರಲಿಲ್ಲ. ವಿತ್ತೀಯ ಕೊರತೆಯೇ ಹೂಡಿಕೆದಾರರನ್ನು ಆತಂಕಕ್ಕೀಡುಮಾಡಿದ ಹಿನ್ನೆಲೆ ಯಲ್ಲಿ ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 316 ಅಂಕ ಕುಸಿದು, 32,832ರಲ್ಲಿ ಕೊನೆಗೊಂ ಡಿತು. ನಿಫ್ಟಿ 104 ಅಂಕ ಕುಸಿತ ದಾಖಲಿಸಿತು.