Advertisement

IMO ಚುನಾವಣೆ : ಭಾರತ ಮತ್ತೆ ಆಯ್ಕೆ

09:46 PM Dec 02, 2023 | |

ನವದೆಹಲಿ: ಲಂಡನ್‌ನಲ್ಲಿ ನಡೆದ 2024-25ನೇ ಸಾಲಿನ ಅಂತಾರಾಷ್ಟ್ರೀಯ ಸಮುದ್ರಯಾನ ಸಂಸ್ಥೆ ಮಂಡಳಿ (ಐಎಂಒ) ಚುನಾವಣೆಯಲ್ಲಿ ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅಗ್ರ 10 ರಾಷ್ಟ್ರಗಳ ವಿಭಾಗದಲ್ಲಿ, ಭಾರತವು ಮತ್ತೆ ಆಯ್ಕೆಯಾಗಿದೆ. ಈ ಬಾರಿ ಅತ್ಯಂತ ಗರಿಷ್ಠ ಮತಗಳನ್ನು ಭಾರತ ಪಡೆದಿದೆ.

Advertisement

167 ಮತಗಳ ಪೈಕಿ 157 ಮತಗಳನ್ನು ಭಾರತ ಪಡೆದುಕೊಂಡಿದ್ದು, ಕಳೆದಬಾರಿ 133 ಮತಗಳನ್ನು ಪಡೆದುಕೊಂಡಿತ್ತು. ಈ ಬಾರಿ ಭಾರತಕ್ಕೆ ಗರಿಷ್ಟ ಮತಗಳನ್ನು ನೀಡಿ ದೇಶದ ಮೇಲಿನ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಲಂಡನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿದೆ.

ಭಾರತದೊಂದಿಗೆ ಇದೇ ವಿಭಾಗದಲ್ಲಿ ಆಸ್ಟ್ರೇಲಿಯಾ, ಬ್ರೆಜಿಲ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ನೆದರ್‌ಲ್ಯಾಂಡ್‌, ಸ್ಪೇನ್‌, ಸ್ವೀಡನ್‌, ಯುಎಇಗಳು ಸೇರಿವೆ.ಅಂತಾರಾಷ್ಟ್ರೀಯ ಸಮುದ್ರಯಾನ ಮಂಡಳಿಯು ವಿಶ್ವಸಂಸ್ಥೆಯ ಭಾಗವಾಗಿದ್ದು, ಅಂತಾರಾಷ್ಟ್ರೀಯ ಹಡಗು ಸಾಗಣೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿದೆ, 1948ರಲ್ಲಿ ಇದನ್ನು ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next