Advertisement

ರೋಗ ನಿರೋಧಕ ಮಾತ್ರೆ ವಿತರಣೆ

05:46 AM Jun 01, 2020 | Suhan S |

ಯಲಬುರ್ಗಾ: ಕೋವಿಡ್ ನಿರ್ಮೂಲನೆಯಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಸಾಕಷ್ಟಿದೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಆರೋಗ್ಯ, ಆಯುಷ್‌ ಇಲಾಖೆ ವತಿಯಿಂದ ಹಮ್ಮಿಕೊಂಡ ಕೋವಿಡ್ ವಾರಿಯರ್ಸ್‌ಗೆ ರೋಗ ನಿರೋಧಕ ಮಾತ್ರೆ, ಔಷ ಧ ವಿತರಿಸಿ ಅವರು ಮಾತನಾಡಿದರು. ಆಯುಷ್‌ ಇಲಾಖೆ ವತಿಯಿಂದ ರೋಗ ನಿರೋಧಕ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದೆ. ಇವುಗಳನ್ನು ಪ್ರತಿಯೊಬ್ಬರು ಬಳಕೆ ಮಾಡಿಕೊಳ್ಳಿ ಎಂದರು. ಕೇಂದ್ರ ಹಾಗೂ ರಾಜ್ಯ ಸರಕಾರ ಪಟ್ಟಣ ಹಾಗೂ ಗ್ರಾಮೀಣ ಜನತೆ ಆರೋಗ್ಯದ ಹಿತದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿವೆ ಅವುಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುತ್ತೇನೆ ಎಂಬ ಭರವಸೆ ನೀಡಿದರು. ಬಿಜೆಪಿ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ, ಸಿ.ಎಚ್‌. ಪೊಲೀಸಪಟೀಲ, ತಾಪಂ ಸದಸ್ಯ ಶರಣಪ್ಪ ಈಳಿಗೇರ, ಹಂಚ್ಯಾಳಪ್ಪ ತಳವಾರ, ಕೊಟ್ರಪ್ಪ ತೋಟದ, ಪ್ರಭು ಕಲಬುರ್ಗಿ, ದುರಗಪ್ಪ, ಸುರೇಶ ಹೊಸಳ್ಳಿ, ಆಯುಷ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next