Advertisement

ಕೋವಿಡ್ ಗೆ‌ ಭಯಪಡದೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ

10:30 PM Jul 25, 2020 | sudhir |

ಮಣಿಪಾಲ: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಎಲ್ಲರೂ ಹೇಳುವುದು ಒಂದೇ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂಬುದಾಗಿ. ರೋಗಗಳ ವಿರುದ್ಧದ ಹೋರಾಟದಲ್ಲಿ ರೋಗ ನಿರೋಧಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೋವಿಡ್‌ ಮಾತ್ರವಲ್ಲ, ಯಾವುದೇ ಆರೋಗ್ಯ ಸಂಬಂಧಿ ಕಾಯಿಲೆಗಳ ವಿರುದ್ಧ ಸಮರ ಸಾರಲು ದೇಶದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಅಗತ್ಯ.

Advertisement

ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಎಫ್ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು ಯಾವ ಆಹಾರ ಈ ಸಮಯದಲ್ಲಿ ಸೇವನೆಗೆ ಸೂಕ್ತ ಎಂಬುದನ್ನು ವಿವರಿಸಿದೆ. ವಿಟಮಿನ್‌ ಸಿ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸಲು ಅದು ಶಿಫಾರಸು ಮಾಡುತ್ತದೆ. ಇನ್ನು ಪ್ರತ್ಯೇಕವಾಗಿ ಹೇಳಬೇಕೆಂದರೆ ಸಸ್ಯ ಆಧಾರಿತ ಆಹಾರಗಳಾದ ಆಮ್ಲಾ, ಕಿತ್ತಳೆ, ಪಪ್ಪಾಯಿ, ಕ್ಯಾಪ್ಸಿಕಂ, ಪೇರಲ ಮತ್ತು ನಿಂಬೆಯನ್ನು ಈ ಸಮಯದಲ್ಲಿ ಸೇವಿಸುವುದು ಅಗತ್ಯವಾಗಿದೆ.

ಕೋವಿಡ್‌ ವಿರುದ್ಧ ಸಸ್ಯಾಹಾರ
ಆಮ್ಲಾ: ರಕ್ತದ ದ್ರವತೆಯನ್ನು ಸುಧಾರಿಸಲು ಮತ್ತು ಆಕ್ಸಿಡೇಟಿವ್‌ ಒತ್ತಡದ ಬಯೋಮಾರ್ಕರ್ಗಳನ್ನು ಕಡಿಮೆ ಮಾಡಲು ಆಮ್ಲಾ ಸಹಾಯ ಮಾಡುತ್ತದೆ.

ಕಿತ್ತಳೆ: ಇದು ಕಡಿಮೆ ಕೊಬ್ಬಿನಂಶವನ್ನು ಹೊಂದಿದ್ದು, ನಾರಿನಂಶ, ವಿಟಮಿನ್‌ ಮತ್ತು ಖನಿಜಗಳಾದ ಥಯಾಮಿನ್‌, ಫೋಲೇಟ್‌ ಮತ್ತು ಪೊಟ್ಯಾಸಿಯಂ ಅನ್ನು ಒಳಗೊಂಡಿದೆ.

ಪಪ್ಪಾಯಿ: ಕಿತ್ತಳೆಯಂತೆ, ಪಪ್ಪಾಯಿ ಕೂಡ ನಾರಿನಂಶದಿಂದ ಕೂಡಿದೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು, ದೇಹದ ಒಳಗಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಪ‌Åಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಕರುಳಿನ ಚಲನೆಯನ್ನು ಸುಗಮಗೊಳಿಸಿ, ಜೀರ್ಣಕ್ರಿಯೆಗೆ ನೆರವಾಗುತ್ತದೆ.

Advertisement

ಕ್ಯಾಪ್ಸಿಕಂ: ಇದರಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದ್ದು, ವಿಟಮಿನ್‌ ಇ ಮತ್ತು ಎ, ನಾರಿನಂಶ, ಖನಿಜಗಳಾದ ಫೋಲೇಟ್‌ ಮತ್ತು ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಉತ್ಕರ್ಷಣ ನಿರೋಧಕ ಗುಣದಿಂದಾಗಿ ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ.

ಪೇರಳೆ ಹಣ್ಣು: ಇದರಲ್ಲಿ ಪೊಟ್ಯಾಸಿಯಮ್‌ ಮತು ನಾರಿನಂಶ ಯತೇತ್ಛವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಸೆಳೆತದಂತಹ ಮುಟ್ಟಿನ ನೋವಿನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿಂಬೆ: ಇದು ದೇಹದ ಕೊಬ್ಬನ್ನು ಕರಗಿಸಿ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಹೃದಯ ಮತ್ತು ಜೀರ್ಣಾಂಗದ ಆರೋಗ್ಯವನ್ನು ಸುಧಾರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next