Advertisement

ಶೇ.75.38 ಮಕ್ಕಳಲ್ಲಿ ಲಸಿಕೆ ಪಡೆಯದೇ ರೋಗ ನಿರೋಧಕ ಶಕ್ತಿ ಹೆಚ್ಚಳ 

10:40 PM Sep 08, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ 6ರಿಂದ 14 ವರ್ಷದ 5,358 ಮಕ್ಕಳಲ್ಲಿ ನಡೆಸಿರುವ ಕೋವಿಡ್‌ ಸಿರೋ ಸಮೀಕ್ಷೆಯಲ್ಲಿ ಶೇ.75.38 ಮಕ್ಕಳಿಗೆ ಕೋವಿಡ್‌ ಸೋಂಕು ತಗಲಿ ಹೋಗಿದ್ದು, ಲಸಿಕೆ ಪಡೆಯದಿದ್ದರೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಅಂಶಗಳು ಪತ್ತೆಯಾಗಿವೆ.

Advertisement

ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನ ಮೇರೆಗೆ  ಜೂನ್‌ ತಿಂಗಳಿನಲ್ಲಿ ಆರೋಗ್ಯ ಇಲಾಖೆಯು ಲಸಿಕೆ ಪಡೆಯದ 5,358 ಮಕ್ಕಳಲ್ಲಿ ಕೋವಿಡ್‌ ಸಿರೋ ಸಮೀಕ್ಷೆ ನಡೆಸಿತ್ತು. 6 -14 ವರ್ಷ, 9 –  11 ವರ್ಷ ಹಾಗೂ 12 -14 ವರ್ಷ  ಎಂದು ಮೂರು ಗುಂಪುಗಳಾಗಿ ಮಾಡಿ, ಭೌಗೋಳಿಕವಾಗಿಯೂ ನಗರ ಪ್ರದೇಶ, ಕೊಳಚೆ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ ಎಂದು ವಿಂಗಡಿಸಿ ಅಧ್ಯಯನ ನಡೆಸಲಾಯಿತು.

6 – 8 ವರ್ಷ (ಶೇ.68.52), 9 – 11ವರ್ಷ (ಶೇ.79.07) ಹಾಗೂ  12 – 14 ವರ್ಷ (ಶೇ.77.83) ಸೋಂಕಿನಿಂದ ರೋಗ ನಿರೋಧಕ ಶಕ್ತಿ ಹೊಂದಿರುವುದು ಸಿರೋ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಪೈಕಿ ಬಾಲಕಿಯರಲ್ಲಿ (ಶೇ.77.83),  ಬಾಲಕರಲ್ಲಿ (ಶೇ.73.02), ನಗರ ಪ್ರದೇಶ (ಶೇ.77.96), ಗ್ರಾಮೀಣ ಪ್ರದೇಶ (ಶೇ.71.98), ಕೊಳಚೆ ಪ್ರದೇಶ (ಶೇ.77.02) ಮಕ್ಕಳಲ್ಲಿ ಸೋಂಕಿನಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗಿದೆ.

ಚಿಕ್ಕಮಗಳೂರು ಶೇ.100 ರಷ್ಟು ಪ್ರತಿಕಾಯ ಹೊಂದಿರುವ ಜಿಲ್ಲೆಯಾಗಿದೆ. ಉಳಿದಂತೆ  ಬಾಗಲಕೋಟೆ ಶೇ. 91.12, ಉತ್ತರ ಕನ್ನಡ ಶೇ. 89.61, ಗದಗ ಶೇ. 88.62, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಶೆ. 86.88.ಅತೀ ಹೆಚ್ಚು ಪ್ರತಿಕಾಯ ಹೊಂದಿರುವ ಜಿಲ್ಲೆಗಳಾಗಿವೆ. ಕಲಬುರಗಿ ಶೇ. 43.24, ಯಾದಗಿರಿ ಶೇ. 48.20, ಉಡುಪಿ ಶೇ. 52.31, ಹಾವೇರಿ ಶೇ. 59.47 ಹಾಗೂ ರಾಮನಗರ ಶೇ. 62.72. ಕಡಿಮೆ ಪ್ರತಿಕಾಯ ಹೊಂದಿರುವ ಜಿಲ್ಲೆಗಳಾಗಿವೆ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next