Advertisement
ಸದ್ಯ ಹೊಸದಿಲ್ಲಿ ವಿಮಾನ ನಿಲ್ದಾಣ ದಲ್ಲಿ ಇದನ್ನು ಅಳವಡಿಸಲಾಗಿದೆ. ಬೆಂಗ ಳೂರು, ಮುಂಬಯಿ, ಚೆನ್ನೈ,ಕೋಲ್ಕತಾ, ಹೈದರಾಬಾದ್, ಕೊಚ್ಚಿ, ಅಹ್ಮದಾಬಾ ದ್‑ ವಿಮಾನ ನಿಲ್ದಾಣಗಳಲ್ಲಿ ಅದನ್ನು ಅಳವಡಿಸಲು ಸಿದ್ಧತೆ ನಡೆದಿವೆ. ಅದರ ಜತೆಗೆ ಇನ್ನೂ 21 ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದೆ.
ಎಫ್ಟಿಐ-ಟಿಟಿಪಿಯನ್ನು ವಲಸೆ ಬ್ಯೂರೋ ಮೂಲಕ ಜಾರಿಗೊಳಿಸ ಲಾಗುತ್ತದೆ. ಅದಕ್ಕಾಗಿ www.ftittp.mha.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಜತೆಗೆ ಬೇಕಾಗಿರುವ ವಿವರಗಳನ್ನೂ ನೀಡಬೇಕು. ಅದನ್ನು ವಲಸೆ ಇಲಾಖೆ ಖಚಿತಪಡಿಸಿದ ಬಳಿಕ ಅವರಿಗೆ ಈ ಸೌಲಭ್ಯ ಸಿಗಲಿದೆ. ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡ ಪ್ರಯಾಣಿಕರು ಇ- ಗೇಟ್ ಸಮೀಪ ಬಂದಾಗ ವಿಮಾನಯಾನ ಕಂಪೆನಿಯಿಂದ ನೀಡಲಾಗಿರುವ ಬೋರ್ಡಿಂಗ್ ಪಾಸ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ.