Advertisement
ಇಬ್ಬರಿಗೂ ಅಮೆರಿಕವು, ಎಚ್1 ಬಿ ವೀಸಾ ವಿಸ್ತರಿಸಲು ನಿರಾಕರಿಸಿತ್ತು.ಇಂಥ ಸಾವಿರಾರು ಐಟಿ ಉದ್ಯೋಗಿಗಳು ತಮ್ಮ ಅಮೆರಿಕದಲ್ಲಿನ ಒಳ್ಳೆಯ ಉದ್ಯೋಗವನ್ನು ಬಿಟ್ಟು ಭಾರತಕ್ಕೆ ವಾಪಸಾಗುವ ಸ್ಥಿತಿ ಬಂದಿದೆ. ಕೆಲವರಿಗೆ ವೀಸಾ ಅವಧಿ ವಿಸ್ತರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರೆ ಇನ್ನು ಕೆಲವರಿಗೆ ಪದೇ ಪದೆ ಆರ್‌ಎಫ್ಇ ಕೇಳಲಾಗಿದೆ. ಆರ್‌ಎಫ್ಇ ಎಂದರೆ, ನೇರವಾಗಿ ವೀಸಾ ಅವಧಿ ವಿಸ್ತರಣೆಗೆ ತಿರಸ್ಕಾರವಲ್ಲದಿದ್ದರೂ ರಾಯಭಾರ ಕಚೇರಿ ಅಧಿಕಾರಿಗಳಿಗೆ ತೃಪ್ತಿಯಾಗುತ್ತಿರುವವರೆಗೂ ದಾಖಲೆ ಕೊಡುತ್ತಲೇ ಇರಬೇಕಾಗುತ್ತದೆ. ಇಷ್ಟಾಗಿಯೂ ವೀಸಾ ಅವಧಿ ಮುಂದುವರಿಯುತ್ತದೆ ಎಂದು ಹೇಳುವಂತಿಲ್ಲ.
Related Articles
Advertisement
ವಿಸ್ತರಣೆಎಚ್1 ಬಿ ವೀಸಾಗಳನ್ನು ಸಾಮಾನ್ಯವಾಗಿ 3 ವರ್ಷಗಳಿಗೆ ನೀಡಲಾಗುತ್ತದೆ. ನಂತರ ಮತ್ತೆ ಮೂರು ವರ್ಷಗಳಿಗೆ ವಿಸ್ತರಣೆ ಮಾಡಬಹುದಾಗಿದೆ. ಹಲವು ವರ್ಷಗಳಿಂದಲೂ ಅಮೆರಿಕದಅಲ್ಲೇ ಉದ್ಯೋಗದಲ್ಲಿರುವವರು ಅಂದರೆ ಅರು ವರ್ಷ ಪೂರೈಸಿರುವವರು ಪೌರತ್ವಕ್ಕೆ ಅರ್ಜಿ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಮೊದಲ ವಿಸ್ತರಣೆ ಅರ್ಜಿ ಸಲ್ಲಿಸುವಾಗ ಆರ್‌ಎಫ್ಇ ಕೇಳಲಾಗುತ್ತದೆ ಅಥವಾ ಗ್ರೀನ್ ಕಾಡ ಅಪ್ಲೆ„ ಮಾಡುವಾಗಲೂ ಆರ್‌ಎಫ್ಇ ಕೇಲಬಹುದು. ಸಾಮಾನ್ಯವಾಗಿ ಭಾರತೀಯರಿಗೆ ಗ್ರೀನ್ ಕಾರ್ಡ್ ಬೇಕೆಂದರೆ 10 ವರ್ಷಗಳವರೆಗೆ ಕಾಯಬೇಕು. ಇನ್ನು ಆರ್‌ಎಫ್ಇ ಕೇಳಲಾಗಿದೆ ಎಂದರೆ ವೀಸಾ ಸಿಗುವುದಿಲ್ಲ ಎಂದೇ ಭಾವಿಸಬಹುದು. ಯಾಕೆಂದರೆ, ಒಮ್ಮೆ ಆರ್‌ಎಫ್ಇ ಕೇಳಲು ಆರಂಭಿಸಿದರು ಎಂದರೆ ಒಂದಾದ ಮೇಲೆ ಒಂದು ದಾಖಲೆಯನ್ನು ಕೊಡುತ್ತಲೇ ಇರಬೇಕು. ಇದರಿಂದಾಗಿ ಉದ್ಯೋಗದ ಮೇಲೆ ಗಮನ ಹರಿಸುವುದಕ್ಕಿಂತ ದಾಖಲೆ ಒಟ್ಟಾಗಿಸುವುದರಲ್ಲೇ ಉದ್ಯೋಗಿಗಳು ಹೆಚ್ಚು ಸಮಯವನ್ನು ಕಳೆಯಬೇಕಾಗುತ್ತದೆ. ಒಂದು ಆರ್‌ಎಫ್ಇಯಲ್ಲಿ 21 ಸ್ಪಷ್ಟನೆಯನ್ನು ನೀಡಬೇಕಾಗುತ್ತದೆ ಹಾಗೂ ಮುಂದಿನ ಎರಡೂವರೆ ವರ್ಷದ ಕೆಲಸದ ಯೋಜನೆಗಳ ವಿವರವನ್ನೂ ನಿಡಬೇಕಾಗುತ್ತದೆ. ಈ ನರಕವನ್ನು ಹಾದು ಬಂದವರು ಹೇಳುವ ಪ್ರಕಾರ ಎಚ್1 ಬಿ ವೀಸಾ ಪಡೆಯುವಾಗ ಈ ಹಿಂದೆ ಇದ್ದ ನಿರಾಳ ಭಾವ ಈಗ ಮೂಡುವುದಿಲ್ಲ. ಕಂಫರ್ಟ್ ಲೆವೆಲ… ಎಂಬುದು ಹೊರಟು ಹೋಗಿದೆ. ಇದೆಲ್ಲದಕ್ಕೂ ಸರ್ಕಾರವೇ ಮೂಲ ಕಾರಣ. ಸರ್ಕಾರಕ್ಕೆ ಈಗ ಅಮೆರಿಕನ್ನರ ಉದ್ಯೋಗದ ಮೇಲೆ ಹೆಚ್ಚು ಗಮನವಿದೆ. ಕೇವಲ ಅತ್ಯಂತ ಉನ್ನತ ಕೌಶಲ ಹೊಂದಿರುವ ಕೆಲಸವನ್ನು ಮಾತ್ರ ಬೇರೆ ದೇಶದ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಕುಶಲಿಗಳಿಗೆ ಸಮಸ್ಯೆ ಇಲ್ಲ
ಇನ್ನೂ ಕೆಲವರಿಗೆ ಆರ್‌ಎಫ್ಇ ಅಡಿಯಲ್ಲಿ ಕೆಲಸ ಮುಂದುವರಿಸುವಂತೆ ಸೂಚಿಸಲಾಗಿದ್ದರೂ, ಒಮ್ಮೆ ಅವರ ಪ್ರಾಜೆಕ್ಟ್ ಮುಗಿದ ಮೇಲೆ ಮತ್ತೆ ಇದೇ ದಾಖಲೆ ಪ್ರಕ್ರಿಯೆನ್ನು ಪುನರಾವರ್ತಿಸಬೇಕಾಗುತ್ತದೆ. ಒಬ್ಬ ಐಟಿ ಇಂಜಿನಿಯರ್ ಹೇಳುವ ಪ್ರಕಾರ ಈ ವರ್ಷ ನಾನು ಸಲ್ಲಿಸಿದ ಎಲ್ಲ ದಾಖಲೆಗಳ ಜೊತೆಗೆ ಮುಂದಿನ ವರ್ಷ ಮತ್ತೂಂದಷ್ಟು ದಾಖಲೆಗಳನ್ನು ರಾಯಭಾರ ಕಚೇರಿಗೆ ಸಲ್ಲಿಸಿ ವೀಸಾ ಅವಧಿ ವಿಸ್ತರಣೆಗೆ ಕಾಯಬೇಕಿದೆ. ಯಾಕೆಂದರೆ ಈಗ ಮಾಡಿರುವ ವೀಸಾ ಅವಧಿ ವಿಸ್ತರಣೆ ಕೇವಲ ಒಂದು ವರ್ಷದ್ದು ಎನ್ನುತ್ತಾರೆ. ತೀರಾ ಕೆಲವರಿಗೆ ಮತ್ತು ಅತ್ಯಂತ ಹೆಚ್ಚು ಕುಶಲ ಉದ್ಯೋಗಿಗಳಿಗೆ ಮಾತ್ರವೇ ವೀಸಾ ಪ್ರಕ್ರಿಯೆ ಸರಾಗವಾಗಿ ನಡೆಯುತ್ತದೆ. ಸಾಮಾನ್ಯವಾಗಿ, ಮೂರು ವರ್ಷಗಳವರೆಗೆ ಅಥವಾ ಆರು ವರ್ಷಗಳವರೆಗೆ ಕೆಲಸ ಮಾಡಿದ ಯುವಕರಿಗೆ ಅಥವಾ ಯುವತಿಯರಿಗೆ ಇದೊಂದು ಸಮಸ್ಯೆಯಲ್ಲ. ಆದರೆ ಅಮೆರಿಕದಲ್ಲೇ ಮಕ್ಕಳನ್ನೂ ಹೊಂದಿರುವವರಿಗೆ ಇದೊಂದು ದೊಡ್ಡ ಸವಾಲಾಗುತ್ತದೆ. ಯಾಕೆಂದರೆ, ಮಕ್ಕಳು ಒಟ್ಟು ಸಂಸ್ಕೃತಿಯಿಂದ ಸಂಸ್ಕೃತಿಗೆ ಬದಲಾಗಬೇಕಾಗುತ್ತದೆ. ಐಟಿ ಸೇವೆ ಕಂಪನಿಗಳ ಮಂಡಳಿ ನಾಸ್ಕಾಮ… ಪ್ರಕಾರ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಪ್ಟ್ವೇರ್ ಸರ್ವೀಸ್ ಕಂಪನಿಗಳ ಉದ್ಯೋಗಿಗಳ ವೀಸಾ ತಿರಸ್ಕಾರ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಅದರೆ ಈ ಪ್ರಮಾಣ ಉತ್ಪನ್ನ ಆಧರಿತ ಕಂಪನಿಗಳಿಗೆ ಕಡಿಮೆ ಇದೆ ಎಂದಿದೆ. ಯಾಕೆಂದರೆ, ಉತ್ಪನ್ನ ಆಧರಿತ ಉದ್ಯೋಗಗಳಲ್ಲಿ ಭಾರತೀಯರ ಕಾರ್ಯಕ್ಷ$ಮತೆ ಹೆಚ್ಚು ಎಂದು ಭಾವಿಸಲಾಗಿದ್ದು, ಅದರಲ್ಲಿ ಭಾರತೀಯರ ಕೌಶಲವೂ ಅಮೆರಿಕನ್ನರಿಗಿಂತ ಹೆಚ್ಚು ಉತ್ತಮವಾಗಿದೆ. ಇನ್ನೂ ಇದೆ ಕನಸು
ವೀಸಾ ಸಿಗುವಲ್ಲೇ ಸಮಸ್ಯೆಯಿದೆ. ವೀಸಾ ಸಿಕ್ಕಮೇಲೂ ಯಾವತ್ತು ಬೇಕಾದರೂ ವಾಪಸು ಕಳುಹಿಸಬಹುದು ಎಂಬ ಅನಿಶ್ಚಿತತೆಯೂ ಇದೆ. ಹಾಗಿದ್ದರೂ ಅಮೆರಿಕದ ಕನಸು ಭಾರತೀಯರಲ್ಲಿ ಇನ್ನೂ ಮಾಸಿಲ್ಲ. ಈಗಲೂ, ಅಮೆರಿಕದಲ್ಲೇದು ಉದ್ಯೋಗ ಸಿಕ್ಕರೆ ಸಾಕು ಎನ್ನುವವರಿ¨ªಾರೆ.
ಹಾಗಂತ ಅಮೆರಿಕದಲ್ಲಿ ಬೇಡಿಕೆಯೂ ಇದೆ. ಆದರೆ ಪೂರೈಕೆಯ ಪ್ರಮಾಣ ಕಡಿಮೆ ಇದೆ. ಈ ಹಿಂದೆ 30-40 ಜನರಿಗೆ ವೀಸಾಗಾಗಿ ಅರ್ಜಿ ಸಲ್ಲಿಸುತ್ತಿದ್ದ ಕಂಪನಿಗಳು ಈಗ ಕೇವಲ 4-5 ಉದ್ಯೋಗಿಗಳನ್ನಷ್ಟೇ ಕರೆಸಿಕೊಳ್ಳುತ್ತಿವೆ. ಯಾಕೆಂದರೆ, ಕಂಪನಿಗಳಿಗೂ ಉದ್ಯೋಗಿಗಳ ವೀಸಾ ತಿರಸ್ಕಾರವಾದರೆ ಎಂಬ ಭೀತಿ ಮೂಡಿದೆ. ಭಾರತಕ್ಕೆ ಬಂದರೆ ಕೆಲಸವಿದೆಯೆ?
ಬಹಳಷ್ಟು ಜನರ ಸಮಸ್ಯೆಯೆಂದರೆ ಅಮೆರಿಕ ತೊರೆದು ಭಾರತಕ್ಕೆ ಬಂದರೆ, ಅಲ್ಲಿಗೆ ಸಮಾನ ಸ್ಥಾನಮಾನದ ಕೆಲಸ ಇಲ್ಲಿ ಸಿಗದೇ ಇರುವುದು. ಅಮೆರಿಕದಿಂದ ಬಂದ ಬಹಳಷ್ಟು ಜನರನ್ನು ಇಲ್ಲಿಯ ದೊಡ್ಡ ದೊಡ್ಡ ಕಂಪನಿಗಳು ನೇಮಿಸಿಕೊಂಡಿವೆ. ಆದರೆ ಬಹುತೇಕರ ಸಮಸ್ಯೆಯೇನೆಂದರೆ ಅಮೆರಿಕದಲ್ಲಿದ್ದಷ್ಟು ಸಂಬಳ ಇಲ್ಲಿ ಸಿಗುತ್ತಿಲ್ಲ ಎಂಬುದೇ ಆಗಿದೆ. ಇದು ಅಮೆರಿಕ ತೊರೆದು ಬಂದವರ ಮನಸ್ಥಿತಿಯೂ ಆಗಿರಬಹುದು ಅಥವಾ ಭಾರತದ ಉದ್ಯೋಗ ಮಾರುಕಟ್ಟೆಯ ವ್ಯಾಪ್ತಿ ಕಿರಿದಾಗಿರುವುದೂ ಕಾರಣವಾಗಿರಬಹುದು. ಹಲವರಿಗೆ ಗಗನ ಕುಸುಮ
ಈ ಹಿಂದೆ 90ರ ದಶಕದಲ್ಲಿ ಉತ್ತಮ ಕೌಶಲವಿದ್ದವರಿಗಷ್ಟೇ ಅಮೆರಿಕದ ವೀಸಾ ಸಿಗುತ್ತಿತ್ತು. ಹೀಗಾಗಿ ಅಮೆರಿಕದ ವೀಸಾಗೊಂದು ಉನ್ನತ ಮೌಲ್ಯವಿತ್ತು. ಆದರೆ ಬರುಬರುತ್ತಾ ಅಂದರೆ ಸಾಫ್ಟ್ವೇರ್ ಉದ್ಯಮ ವ್ಯಾಪಕವಾಗಿ ಬೆಳೆದಂತೆ ಸ್ವಲ್ಪ ವರ್ಷ ಅನುಭವ ಸಾಮಾನ್ಯ ಸಾಫ್ಟ್ವೇರ್ ಸರ್ವೀಸ್ ಕ್ಷೇತ್ರದಲ್ಲಿ ಇದ್ದರೂ ವೀಸಾ ಸಿಗುತ್ತಿತ್ತು. ವಿಶೇಷ ಪರಿಣಿತಿ ಬೇಕು ಎಂದೇನಿರಲಿಲ್ಲ. ಬರಾಕ್ ಒಬಾಮ ಅಧ್ಯಕ್ಷ$ರಾಗಿದ್ದ ಅವಧಿಯಲ್ಲಂತೂ ಈ ಪರಿಸ್ಥಿತಿ ಹೆಚ್ಚಾಗಿತ್ತು. ಇದರಿಂದ ಅಮೆರಿಕನ್ನರಲ್ಲಿ ಸಿಟ್ಟು ಹೆಚ್ಚಾಗತೊಡಗಿತು. ಇದರ ಪರಿಣಾಮವೇ ಇದೇ ವಿಷಯವನ್ನಿಟ್ಟುಕೊಂಡು ಟ್ರಂಪ ಚುನಾವಣೆಯಲ್ಲಿ ಗೆದ್ದರು. ಗೆಲ್ಲುತ್ತಿದ್ದಂತೆಯೇ ಈ ವೀಸಾ ನೀತಿಯನ್ನು ಕಟ್ಟುನಿಟ್ಟುಗೊಳಿಸಿದರು. ಸದ್ಯ ವೀಸಾ ನೀತಿಯಲ್ಲಿ ಮಹತ್ವದ ಯಾವುದೇ ಬದಲಾವಣೆ ಮಾಡದೇ ಇದ್ದರೂ, ಈಗಿರುವ ನಿಯಮವನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಅಮೆರಿಕ ಎಂಬುದು ಬಹುತೇಕರಿಗೆ ಗಗನಕುಸುಮವೂ ಆಗಿದೆ. ಕೃಷ್ಣಭಟ್